Film News

ಹಣಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಕಾ? ಎಂದು ಫೈರ್ ಆದ ಸೀನಿಯರ್ ನಟಿ ಮೀನಾ…..!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ಬಗ್ಗೆ ಹೆಚ್ಚು ಪರಿಚಯದ ಅವಶ್ಯಕತೆಯಿಲ್ಲ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಹಿರೋಯಿನ್ ಆಗಿ ಫೇಂ ಪಡೆದುಕೊಂಡು, ಸೌತ್ ಸಿನಿರಂಗದ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದರು. ಸುಮಾರು ಮೂರು ದಶಕಗಳ ಕಾಲ ಸ್ಟಾರ್‍ ನಟಿಯಾಗಿದ್ದರು. ಇತ್ತೀಚಿಗೆ ಆಕೆಯ ವೈಯುಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಸುದ್ದಿ ಕೇಳಿಬರುತ್ತಿದೆ. ಅದರಲ್ಲೂ ಆಕೆ ಎರಡನೇ ಮದುವೆಯಾಗಲಿದ್ದಾರೆ ಎಂದು ಅನೇಕ ರೂಮರ್‍ ಗಳು ಕೇಳಿಬರುತ್ತಿದ್ದು, ಈ ರೂಮರ್‍ ಗಳ ಬಗ್ಗೆ ಬೇಸತ್ತ ಮೀನಾ ಹಣಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಕಾ ಎಂದು ಫೈರ್‍ ಆಗಿದ್ದಾರೆ.

ಬಾಲನಟಿಯಾಗಿ ಕೆರಿಯರ್‍ ಆರಂಭಿಸಿದ ನಟಿ ಮೀನಾ ಸ್ಟಾರ್‍ ನಟಿಯಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಅನೇಕ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅನೇಕ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾಗಳನ್ನು ಸಹ ಪಡೆದುಕೊಂಡಿದ್ದಾರೆ. ಕೆರಿಯರ್‍ ಉತ್ತುಂಗದಲ್ಲಿರುವಾಗಲೇ ಉದ್ಯಮಿ ವಿದ್ಯಾಸಾಗರ್‍ ಎಂಬಾತನನ್ನು ಮದುವೆಯಾದರು. ಅವರಿಗೆ ನೈನಿಕಾ ಎಂಬ ಹೆಣ್ಣು ಮಗಳಿದ್ದಾಳೆ. ಎರಡು ವರ್ಷಗಳ ಹಿಂದೆಯಷ್ಟೆ ಅನಾರೋಗ್ಯದಿಂದ ಮೀನಾ ಪತಿ ಮೃತಪಟ್ಟರು. ಆ ನೋವಿನಿಂದ ಹೊರಬಂದ ಮೀನಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಕೆ ಎರಡನೇ ಮದುವೆಯಾಗಲಿದ್ದಾರೆ. ಕಾಲಿವುಡ್ ಸ್ಟಾರ್‍ ನಟ ಧನುಷ್ ಜೊತೆಗೆ ಅಫೈರ್‍ ನಲ್ಲಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಕೇಳಿಬಂದಿತ್ತು. ತಾನು ಎರಡನೇ ಮದುವೆಯಾಗೊಲ್ಲ ಎಂದು ವಿವರಣೆಯನ್ನು ಸಹ ಮೀನಾ ನೀಡಿದ್ದರು. ಆದರೂ ಸಹ ರೂಮರ್‍ ಗಳು ನಿಲ್ಲದ ಕಾರಣದಿಂದ ಆಕೆ ಮತ್ತೊಮ್ಮೆ ಫೈರ್‍ ಆಗಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮಿಡಿಯಾ ತುಂಬಾ ಕೀಳು ಮಟ್ಟಕ್ಕೆ ಇಳಿದಿದೆ. ಹಣಕ್ಕಾಗಿ ಏನಾದರೂ ಬರೆಯುತ್ತೀರಾ, ವಾಸ್ತವತೆಯನ್ನು ಅರಿತು ಬರೆಯಿರಿ. ಅದು ಎಲ್ಲರಿಗೂ ಒಳ್ಳೆಯದು. ನನ್ನಂತೆ ದೇಶದಲ್ಲಿ ಅನೇಕ ಒಂಟಿ ಮಹಿಳೆಯರಿದ್ದಾರೆ. ನನ್ನ ಜೊತೆಗೆ ನನ್ನ ಮಗಳ ಭವಿಷ್ಯ ಕೂಡ ನನಗೆ ಮುಖ್ಯ. ಸದ್ಯ ನನಗೆ ಎರಡನೇ ಮದುವೆಯಾಗಬೇಕೆಂಬ ಉದ್ದೇಶವಿಲ್ಲ. ಒಂದು ವೇಳೆ ಮದುವೆಯಾಗಬೇಕೆಂದು ಅನ್ನಿಸಿದರೇ ಖಂಡಿತವಾಗಿಯೂ ಸ್ವತಃ ನಾನೇ ಹೇಳುತ್ತೇನೆ. ಭವಿಷ್ಯತ್ ಬಗ್ಗೆ ನಾನು ಈಗಲೇ ಏನು ಹೇಳೋಕೆ ಸಾಧ್ಯವಿಲ್ಲವಲ್ಲವೆ. ಭವಿಷ್ಯತ್ ನಲ್ಲಿ ಏನಾಗುತ್ತೆ ನನಗೆ ಗೊತ್ತಿಲ್ಲ. ಸದ್ಯ ನನಗೆ ಎರಡನೇ ಮದುವೆಯಾಗುವ ಆಲೋಚನೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top