ಶ್ರೀದೇವಿಗಿಂತ ನಾನೇನು ಕಡಿಮೆಯಿಲ್ಲ ಎಂದ ನಟಿ, ದೊಡ್ಡ ರಾದ್ದಾಂತ ಮಾಡಿದ್ದರಂತೆ ಸೀನಿಯರ್ ನಟಿ ರಾಧಿಕಾ…..!

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸುಮಾರು ಮೂರು ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ದಿವಂಗತ ಶ್ರೀದೇವಿ ಮೊದಲ ಸ್ಥಾನದಲ್ಲಿರುತ್ತಾರೆ. ದೇಶದ ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಏಕಚಕ್ರಾಧಿಪತ್ಯ ಹೊಂದಿದ್ದರು. ಅದರಲ್ಲೂ ಆಕೆ ಬಾಲಿವುಡ್ ನಲ್ಲೂ ಸಹ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದರು. ಆಕೆ ಬಾಲಿವುಡ್ ಸಿನಿರಂಗದ ಸ್ಟಾರ್‍ ಐಕಾನ್ ಸಹ ಆಗಿದ್ದಾರೆ. ಆದರೆ ಆಕೆಗೆ ತೆಲುಗು ರಾಷ್ಟ್ರಗಳಲ್ಲಿ ಮಾತ್ರ ಲಕ್ಷಗಟ್ಟಲೇ ಅಭಿಮಾನಿಗಳಿದ್ದಾರೆ. ಬೇರೆ ಭಾಷೆಗಳಲ್ಲೂ ನಟಿಸಿದರೂ ಕೂಡ ಆಕೆಗೆ ತೆಲುಗು ಸಿನೆಮಾಗಳ ಮೇಲೆ ಅಪಾರವಾದ ಗೌರವ ಹಾಗೂ ಅಭಿಮಾನ ಇರುತ್ತಿದ್ದು.

ಇನ್ನೂ ತೆಲುಗು ಸಿನಿರಂಗದಲ್ಲಿ ಶ್ರೀದೇವಿಯರವರ ಸಮಕಾಲಿನರಾಗಿ ಅನೇಕ ನಟಿಯರು ಕಾಣಿಸಿಕೊಂಡಿದ್ದರು. ಅವರ ಪೈಕಿ ಜಯಪ್ರದ, ರಾಧಾ, ಭಾನುಪ್ರಿಯಾ, ರಾಧಿಕಾ ಮೊದಲಾದ ಹಿರೋಯಿನ್ ಗಳೂ ಸಹ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಶ್ರೀದೇವಿಯರವರು ಪಡೆದುಕೊಂಡ ಕ್ರೇಜ್ ಮಾತ್ರ ಯಾರೂ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ಮೆಗಾಸ್ಟಾರ್‍ ಚಿರಂಜೀವಿ, ಕೃಷ್ಣ ಹಾಗೂ ಶೋಭನ್ ಬಾಬು ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆಗೆ ಹೆಚ್ಚಾಗಿ ನಟಿಸಿದ್ದಾರೆ. ಜೊತೆಗೆ ಆಕೆ ಕೆಲವು ನಟಿಯರೊಂದಿಗೆ ಸಹ ನಟಿಸಿದ್ದಾರೆ. ಜಯಪ್ರದ ಹಾಗೂ ರಾಧಿಕಾ ರವರ ಸಿನೆಮಾಗಳಲ್ಲೂ ಸಹ ಶ್ರೀದೇವಿ ನಟಿಸಿದ್ದಾರೆ. ಸಿನಿರಂಗದಲ್ಲಿ ಶ್ರೀದೇವಿಯವರ ಬಗ್ಗೆ ದೊಡ್ಡ ಯಾವುದೇ ವಿವಾದಗಳು ಇರಲಿಲ್ಲ.  ಆದರೆ ರಾಧಿಕ ಸಿನಿರಂಗದಲ್ಲಿ ಫೈರ್‍ ಬ್ರಾಂಡ್ ಎಂದಲೇ ಕರೆಯಲಾಗುತ್ತದೆ. ಆಕೆಯೊಂದಿಗೆ ನಟಿಸುವಾಗ ಅನೇಕ ಗಲಾಟೆಗಳು ನಡೆದಿದೆ ಎಂದು ಆಕೆಯೊಂದಿಗೆ ನಟಿಸಿದ ಅನೇಕರು ಹೇಳುತ್ತಿರುತ್ತಾರೆ.

ಇನ್ನೂ ರಾಧಿಕಾ ಹಾಗೂ ಶ್ರೀದೇವಿ ಎಂದೂ ಸಹ ಗಲಾಟೆ ಮಾಡಿಕೊಂಡಿರಲಿಲ್ಲ. ಇಬ್ಬರೂ ಸ್ನೇಹಭಾವದಿಂದ ಇರುತ್ತಿದ್ದರಂತೆ. ಆದರೆ ತಮಿಳು ಸಿನೆಮಾದಲ್ಲಿ ರಾಧಿಕಾ ಹಾಗೂ ಶ್ರೀದೇವಿ ಒಟ್ಟಾಗಿ ನಟಿಸಿದ್ದರಂತೆ. ಶ್ರೀದೇವಿಯಂತೆ ನನಗೂ ಸಹ ಸಮನಾದ ಸಂಭಾವನೆ ನೀಡಬೇಕೆಂದು ರಾಧಿಕಾ ಡಿಮ್ಯಾಂಡ್ ಮಾಡಿದ್ದರಂಯೆ. ಇನ್ನೂ ಈ ಗಲಾಟೆ ದೊಡ್ಡದಾಗುವು ಸೂಚನೆಯನ್ನು ಗಮನಿಸಿದ ನಿರ್ಮಾಪಕ ಶ್ರೀದೇವಿಯವರಿಗೆ ತನ್ನ ಸಂಭಾವನೆಯನ್ನು ಕಡಿಮೆ ಮಾಡಿಕೊಡುವಂತೆ ಕೋರಿದ್ದರಂತೆ. ಅದಕ್ಕೆ ಶ್ರೀದೇವಿ ಒಪ್ಪಿಕೊಂಡಿರಲಿಲ್ಲವಂತೆ. ಆಗಾಗಲೇ ಶ್ರೀದೇವಿ ತೆಲುಗು, ತಮಿಳು ಜೊತೆಗೆ ಬಾಲಿವುಡ್ ನಲ್ಲೂ ಸಹ ನಂಬರ್‍ 1 ಸ್ಥಾನದಲ್ಲಿದ್ದರಂತೆ. ಈ ಕಾರಣದಿಂದ ಆ ನಿರ್ಮಾಪಕ ರಾಧಿಕಾ ಬದಲಿಗೆ ಸರಿತಾ ಎಂಬ ನಟಿಯೊಂದಿಗೆ ಸಿನೆಮಾ ಮುಗಿಸಿದ್ದರಂತೆ. ಇದೀಗ ಈ ಹಳೆಯ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಕೇಳಿಬಂದಿದೆ.