Film News

ಜೂನಿಯರ್ ಎನ್.ಟಿ.ಆರ್ ರವರ ದೇವರ ಟೈಟಲ್ ನನ್ನದು ಎಂದ ಬಂಡ್ಲ ಗಣೇಶ್, ಟ್ವಿಟರ್ ಮೂಲಕ ಆಕ್ರೋಷ….!

ಟಾಲಿವುಡ್ ಸ್ಟಾರ್‍ ಡೈರೆಕ್ಟರ್‍ ಕೊರಟಾಲ ಶಿವ ಹಾಗೂ ಯಂಗ್ ಟೈಗರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ NTR30 ಸಿನೆಮಾದ ಟೈಟಲ್ ಫಿಕ್ಸ್ ಆಗಿದ್ದು, ಮೇ.19 ರಂದು ಸಿನೆಮಾದ ಟೈಟಲ್ ರಿವೀಲ್ ಮಾಡಲಾಗಿದೆ. ಜೂನಿಯರ್‍ ಎನ್.ಟಿ.ಆರ್‍ ರವರ 30ನೇ ಸಿನೆಮಾದ ಟೈಟಲ್ ಅನ್ನು ದೇವರ ಎಂದು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಎನ್.ಟಿ.ಆರ್‍ ರವರ ದೇವರ ಸಿನೆಮಾದಲ್ಲಿನ ಫಸ್ಟ್ ಲುಕ್ ಪೋಸ್ಟರ್‍ ಸಹ ರಿವೀಲ್ ಮಾಡಲಾಗಿದೆ. ಇನ್ನೂ ಎನ್.ಟಿ.ಆರ್‍ ರವರ ಈ ಲುಕ್ಸ್ ಅಭಿಮಾನಿಗಳಿಗೆ ಗೂಸ್ ಬಂಪ್ಸ್ ಬರುವಂತೆ ಮಾಡಿದೆ.  ಇದೀಗ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಮೂಡಿದೆ.

‌‌ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ರವರ ಹುಟ್ಟುಹಬ್ಬ ಮೇ.20 ರಂದು. ಅವರ ಹುಟ್ಟುಹಬ್ಬಕ್ಕೆ ಒಂದು ದಿನದ ಮುಂಚೆಯೇ NTR30 ಚಿತ್ರತಂಡ ಅವರ ಫಸ್ಟ್ ಲುಕ್ ಪೋಸ್ಟರ್‍ ರಿವೀಲ್ ಮಾಡಲಾಗಿದೆ. ಇದೀಗ ಈ ಸಿನೆಮಾದ ಟೈಟಲ್ ಬಗ್ಗೆ ವಿವಾದವೊಂದು ಶುರುವಾಗಿದೆ. ದೇವರ ಎಂಬ ಟೈಟಲ್ ನನ್ನದು ಎಂದು ತೆಲುಗು ನಿರ್ಮಾಪಕ ಕಂ ನಟ ಬಂಡ್ಲ ಗಣೇಶ್ ಆಗ್ರಹ ವ್ಯಕ್ತಪಡಿಸಿದ್ದಾರೆ. ದೇವರ ಎಂಬ ಟೈಟಲ್ ಅನ್ನು ನಾನು ರಿಜಿಸ್ಟರ್‍ ಮಾಡಿಕೊಂಡಿದ್ದೇನೆ. ನಾನು ಮರೆತುಹೋದ ಕಾರಣದಿಂದ ಆ ಟೈಟಲ್ ಅನ್ನು ಕಸಿದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಬಂಡ್ಲ ಗಣೇಶ್ ಈ ಟೈಟಲ್ ಅನ್ನು ರಿನೀವಲ್ ಮಾಡಿಸಿಕೊಳ್ಳಲು ಮರೆತುಬಿಟ್ಟಿದ್ದಾರಂತೆ. ಈ ಕಾರಣದಿಂದ ದೇವರ ಎಂಬ ಟೈಟಲ್ ಅನ್ನು ಕೊರಟಾಲ ಶಿವ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಬಂಡ್ಲ ಗಣೇಶ್ ಮಾಡುವ ಟ್ವಿಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಜೊತೆಗೆ ದೊಡ್ಡ ಮಟ್ಟದ ವಿವಾದಗಳನ್ನು ಸಹ ಸೃಷ್ಟಿ ಮಾಡುತ್ತಿರುತ್ತದೆ. ಇದೀಗ ದೇವರ ಟೈಟಲ್ ಬಗ್ಗೆ ಮಾಡಿದ ಟ್ವೀಟ್ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬಗ್ಗೆ ದೊಡ್ಡ ಚರ್ಚೆಸಹ ನಡೆಯುತ್ತಿದೆ. ಜೊತೆಗೆ ವಿವಾದಕ್ಕೆ ಸಹ ಕಾರಣವಾಗಿದೆ. ಬಳಿಕ ಬಂಡ್ಲ ಗಣೇಶ್ ಈ ಟ್ವೀಟ್ ಬಗ್ಗೆ ಮತ್ತೊಂದು ಟ್ವೀಟ್ ಮೂಲಕ ಕ್ಲಾರಿಟಿ ಸಹ ಕೊಟ್ಟಿದ್ದಾರೆ. ನನಗೆ ಏನು ಪ್ರಾಬ್ಲಂ ಇಲ್ಲ ಬ್ರದರ್‍, ಇದು ನಮ್ಮ ಯಂಗ್ ಟೈಗರ್‍ ಸಿನೆಮಾ ಅಲ್ಲವೇ, ಆತ ಸಹ ನನ್ನ ದೇವರೇ ಎಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇನ್ನೂ ಬಂಡ್ಲ ಗಣೇಶ್ ಪವನ್ ಕಲ್ಯಾಣ್ ರವರನ್ನು ದೇವರ ಎಂದು ಕರೆಯುತ್ತಾರೆ. ಪವನ್ ಕಲ್ಯಾಣ್  ಜೊತೆಗೆ ದೇವರ ಎಂಬ ಟೈಟಲ್ ನೊಂದಿಗೆ ಸಿನೆಮಾ ಮಾಡಲು ಪ್ಲಾನ್ ಮಾಡಿದ್ದರಂತೆ. ಆದರೆ ಕೆಲವೊಂದು ಕಾರಣಗಳಿಂದ ಇದು ಆಗಲಿಲ್ಲ.

ಅಷ್ಟೇಅಲ್ಲದೇ ಕೆಲವು ದಿನಗಳಿಂದ ಬಂಡ್ಲ ಗಣೇಶ್ ಹಾಗೂ ಪವನ್ ಕಲ್ಯಾಣ್ ನಡುವೆ ಕೊಂಚ ಗ್ಯಾಪ್ ಬಂದಿದೆ ಎಂದು ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಬಗ್ಗೆ ಕೆಲವೊಂದು ನೆಗೆಟೀವ್ ಕಾಮೆಂಟ್ ಗಳನ್ನು ಸಹ ಬಂಡ್ಲ ಗಣೇಶ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ದೇವರ ಎಂಬ ಟೈಟಲ್ ಜೂನಿಯರ್‍ ಎನ್.ಟಿ.ಆರ್‍ ರವರ ಪಾಲಾಗಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುತ್ತಿದೆ. ಇನ್ನೂ ಆರ್‍.ಆರ್‍.ಆರ್‍ ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾ ಇದೀಗ ಭಾರಿ ನಿರೀಕ್ಷೆಯನ್ನು ಮೂಡಿಸಿದೆ. ಈ ಸಿನೆಮಾ ಮುಂದಿನ ವರ್ಷ ಏಪ್ರಿಲ್ 5 ರಂದು ತೆರೆಕಾಣಲಿದೆ.

Most Popular

To Top