ತಮ್ಮ ಸಿನಿ ಜರ್ನಿಯಲ್ಲಾದ ಎಮೋಷನಲ್ ನಿಂದನೆಗಳ ಬಗ್ಗೆ ರಿಯಾಕ್ಟ್ ಆದ ಮೇಘನಾ ರಾಜ್ ಸರ್ಜಾ..!

ಸ್ಯಾಂಡಲ್ ವುಡ್ ನ ಸ್ಟಾರ್‍ ನಟರಾಗಿದ್ದ ಚಿರಂಜೀವಿ ಸರ್ಜಾ ಮರಣದ ನಂತರ ನೋವನ್ನು ಆತನ ಪತ್ನಿ ಮೇಘನಾ ರಾಜ್ ತನ್ನ ಮಗನ ಮೂಲಕ ಮರೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಜೊತೆಗೆ ತನ್ನ ಮಗ ರಾಯನ್ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇದೀಗ ಸಿನಿರಂಗದಲ್ಲಿನ ತನ್ನ ಎಮೋಷನಲ್ ನಿಂದನೆಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟಿ ಮೇಘನಾ ರಾಜ್ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತತ್ಸಮ ತದ್ಭವ ಸಿನೆಮಾದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲಿದ್ದಾರೆ. ಖ್ಯಾತ ನಿರ್ದೇಶಕ ಪನ್ನಗಾಭರಣ ನಿರ್ದೇಶನದ ತತ್ಸಮ ತದ್ಭವ ಸಿನೆಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನವಾದ ಈ ಸಿನೆಮಾದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಮೇಘನಾ ರಾಜ್ ತೆರೆಗೆ ಬರಲಿದ್ದಾರೆ. ಇನ್ನೂ ನಟಿ ಮೇಘನಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಹೇಗೆ ಇರಬೇಕು, ಹೇಗೆ ವರ್ತಿಸಬೇಕು ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದರಿಂದ ನನಗೆ ತುಂಬಾ ಹಿಂಸೆ ಆಗುತ್ತಿದೆ. ಅದು ನನ್ನ ಪ್ರಕಾರ ಅದು ದೊಡ್ಡ ನಿಂದನೆ ಅಂದ್ರೆ ಅದು ಭಾವನಾತ್ಮಕ ನಿಂದನೆ ಎಂದೂ ಸಹ ಹೇಳಬಹುದಾಗಿದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಇಷ್ಟಪಡುವಂತಹ ವ್ಯಕ್ತಿ ನಾನು. ನನ್ನ ಭಾವನೆ ಇದ್ದಂತೆ ಇದ್ದಂಗೆ ವ್ಯಕ್ತಪಡಿಸಲು ಇಷ್ಟಪಡುತ್ತೇನೆ. ಆದರೆ ನನ್ನ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂತಹ ಪರಿಸ್ಥಿತಿ ಬಂದಿತ್ತು ಎಂದು ಖಾಸಗಿ ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ವಿಚಾರ ಹಂಚಿಕೊಂಡಿದ್ದಾರೆ.

ಸಮಾಜದಲ್ಲಿ ಅನೇಕ ಮಹಿಳೆಯರು ಅವರ ಭಾವನೆಗಳಿಗೆ ತಕ್ಕಂತೆ ಇರಲು ಹೆದರಿಕೊಳ್ಳುತ್ತಿರುತ್ತಾರೆ. ಇದೇ ಕಾರಣದಿಂದಲೇ ನಮ್ಮನ್ನು ಜನರು ಜಡ್ಜ್ ಮಾಡಲು ಶುರು ಮಾಡುತ್ತಾರೆ. ಇನ್ನೂ ಅನೇಕರು ತಮ್ಮ ಮೈಂಡ್ ನಲ್ಲಿ ಮಹಿಳೆಯರು ಹಿಗೇ ವರ್ತಿಸಬೇಕು, ಹೀಗೇ ಇರಬೇಕು ಎಂದು ತುಂಬಿಕೊಂಡಿರುತ್ತಾರೆ. ನಮ್ಮ ನಿಜವಾದ ಭಾವನೆಗಳನ್ನು  ವ್ಯಕ್ತಪಡಿಸಿದರೇ ನಮ್ಮನ್ನು ತಪ್ಪಾಗಿ ನೋಡುತ್ತಾರೆ. ಪುರುಷರಿಗೆ ಹೋಲಿಸಿದರೇ ಮಹಿಳೆಯರು ತುಂಬಾನೆ ಭಾವನೆಗಳನ್ನು ಕಂಟ್ರೋಲ್ ಮಾಡುತ್ತಿರುತ್ತೇವೆ. ಇನ್ನೂ ಈ ಹಿಂದೆ ಮಹಿಳಾ ಪ್ರಧಾನ ಸಿನೆಮಾಗಳನ್ನು ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದರು. ಆದರೆ ಯಾವ ಕಥೆ ಸಿಗದ ಕಾರಣ ಮಹಿಳಾ ಪ್ರಧಾನ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅನೇಕ ವಿಚಾರಗಳ ಬಗ್ಗೆ ಮೇಘನಾ ರಾಜ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.