ಕೆಜಿಎಫ್ ಸಿನೆಮಾಗೂ ಕಬ್ಜಾ ಸಿನೆಮಾಗೂ ಹೋಲಿಕೆ ಬೇಡ ಎಂದ ರಿಯಲ್ ಸ್ಟಾರ್ ಉಪೇಂದ್ರ….!

Follow Us :

ಕೆಜಿಎಫ್ ಸಿನೆಮಾದ ಬಳಿಕ ಸ್ಯಾಂಡಲ್ ವುಡ್ ಮೂಲಕ ಸಿನಿರಂಗದಲ್ಲಿ ಕಮಾಲ್ ಮಾಡಲು ಮತ್ತೊಂದು ಸಿನೆಮಾ ಬರಲಿದ್ದು, ಅದೇ ಉಪ್ಪಿ ಅಭಿನಯದ ಕಬ್ಜ ಸಿನೆಮಾ. ಈಗಾಗಲೇ ಈ ಸಿನೆಮಾದ ಮೇಲೆ ತುಂಬಾ ನಿರೀಕ್ಷೆ ಹುಟ್ಟಿಸಿತ್ತು. ಸಿನೆಮಾದ ಟ್ರೈಲರ್‍, ಟೀಸರ್‍ ಗಳು ಕೆಲ ಪೋಸ್ಟರ್‍ ಗಳೂ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲಿನ ನಿರೀಕ್ಷೆ ಮತಷ್ಟು ಹೆಚ್ಚಿಸಿದೆ. ಇನ್ನೂ ಕೆಲವರು ಕಬ್ಜಾ ಸಿನೆಮಾಗೂ ಹಾಗೂ ಕೆಜಿಎಫ್ ಸಿನೆಮಾಗೂ ಹೋಲಿಕೆ ಮಾಡುತ್ತಿದ್ದು, ಇದೀಗ ಈ ಬಗ್ಗೆ ರಿಯಲ್ ಸ್ಟಾರ್‍ ಉಪೇಂದ್ರ ರಿಯಾಕ್ಟ್ ಆಗಿದ್ದಾರೆ. ಎರಡೂ ಸಿನೆಮಾಗಳಿಗೂ ಹೋಲಿಕೆ ಮಾಡಬೇಡಿ ಎಂದು ಅದಕ್ಕೆ ಕಾರಣವನ್ನು ಸಹ ರಿವೀಲ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಸಿನೆಮಾ ಕಬ್ಜಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಈ ಸಿನೆಮಾವನ್ನು ನಿರ್ದೇಶಕ ಆರ್‍. ಚಂದ್ರು ಸಾರಥ್ಯದಲ್ಲಿ ರಿಯಲ್ ಸ್ಟಾರ್‍ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಸ್ಟಾರ್‍ ನಟ ಕಿಚ್ಚ ಸುದೀಪ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉಪೇಂದ್ರ ಗೆ ಜೋಡಿಯಾಗಿ ಸೌತ್ ನ ಸ್ಟಾರ್‍ ನಟಿ ಶ್ರೇಯಾ ಶರಣ್ ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಸಿನೆಮಾದ ಟೀಸರ್‍ ಹಾಗೂ ಟ್ರೈಲರ್‍ ನೋಡಿದ ಅನೇಕರು ಕಬ್ಜಾ ಇನ್ನೊಂದು ಕೆಜಿಎಫ್ ಸಿನೆಮಾ ಎಂದು ಹೇಳುತ್ತಿದ್ದರು. ಇದೀಗ ಈ ಬಗ್ಗೆ ಉಪೇಂದ್ರ ರವರು ರಿಯಾಕ್ಟ್ ಆಗಿದ್ದು, ಕಬ್ಜಾ ಸಿನೆಮಾವನ್ನು ಕೆಜಿಎಫ್ ಜೊತೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

ಇನ್ನೂ ಕಬ್ಜಾ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆದ ಕಾರಣ ಈ ಸಿನೆಮಾದ ಪ್ರಮೋಷನ್ ಗಳು ಜೋರಾಗಿಯೇ ನಡೆಯುತ್ತಿವೆ. ಈ ಹಾದಿಯಲ್ಲೇ ಮುಂಬೈನಲ್ಲಿ ಉಪ್ಪಿ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟೀಸರ್‍ ನೋಡಿದ ಅನೇಕರು ಕೆಜಿಎಫ್ ಸಿನೆಮಾದಂತೆ ಇದೆ ಎಂದು ಭಾವಿಸಿದ್ದರು. ಬಳಿಕ ಟ್ರೈಲರ್‍ ನೋಡಿದ ಬಳಿಕ ಬೇರೆ ಬೇರೆ ಸಿನೆಮಾಗಳು ಎಂದು ಗೊತ್ತಾಗಿದೆ. ಕೆಜಿಎಫ್ ಸಿನೆಮಾದ ಟೀಸರ್‍ ಬಿಡುಗಡೆಯಾದಾಗಿನಿಂತ ಕಬ್ಜಾ ಸಿನೆಮಾ ಸೇಮ್ ಕೆಜಿಎಫ್ ನಂತಿದೆ ಎಂದು ದೊಡ್ಡ ಮಟ್ಟದ ಚರ್ಚೆಗಳೂ ಸಹ ಶುರುವಾಗಿತ್ತು. ಆಗ ಉಪ್ಪಿ ಸಹ ಕೆಜಿಎಫ್ ತರಹ ಸಿನೆಮಾ ಮಾಡಿ ಅಂತಾರೆ, ಕೆಜಿಎಫ್ ತರಹವೇ ಸಿನೆಮಾ ಮಾಡಿದರೇ ಕೆಜಿಎಫ್ ಸಿನೆಮಾ ತರಹವೇ ಇದೆ ಅಂತಾರೆ ಏನು ಮಾಡಿದರೂ ಕೆಲವರು ಟೀಕೆ ಮಾಡುತ್ತಿರುತ್ತಾರೆ ಎಂದು ತಮಾಷೆ ಸಹ ಮಾಡಿದ್ದರು.

ಇನ್ನೂ ಕೆಜಿಎಫ್ ಸಿನೆಮಾದಲ್ಲಿ ಆರಂಭದಿಂದಲೇ ಹಿರೋ ರೌಡಿ ಆಗಿರುತ್ತಾನೆ. ಕಬ್ಜಾ ಸಿನೆಮಾದಲ್ಲಿ ಹಿರೋ ಏರ್‍ ಪೋರ್ಸ್ ಅಧಿಕಾರಿಯಾಗಿರುತ್ತಾರೆ. ಕಬ್ಜ ಸಿನೆಮಾ ಸ್ವತಂತ್ರ ಬರುವುದಕ್ಕೂ ಮುಂಚೆಯ ಕಥೆಯಾಗಿದೆ. ಕೆಜಿಎಫ್ ಸ್ವತಂತ್ರ ಬಂದ ನಂತರದ ಕಥೆಯಾಗಿದೆ. ಅದರಲ್ಲೂ ಮುಖ್ಯವಾಗಿ ಕೆಜಿಎಫ್ ಸಿನೆಮಾದಲ್ಲಿ ರಾಕಿಭಾಯ್ ಪಾತ್ರ ಬಿಟ್ಟು ಬೇರೆ ಯಾವುದೇ ಹಿರೋ ಪಾತ್ರಗಳು ಇರಲಿಲ್ಲ. ಆದರೆ ಕಬ್ಜಾ ಸಿನೆಮಾದಲ್ಲಿ ಸುದೀಪ್, ಶಿವಣ್ಣ ರವರುಗಳೂ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಅನೇಕ ವ್ಯತ್ಯಾಸಗಳು ಕೆಜಿಎಫ್ ಸಿನೆಮಾಗೂ ಕಬ್ಜಾ ಸಿನೆಮಾಗೂ ಇದೆ. ಆದ ಕಾರಣ ಎರಡೂ ಸಿನೆಮಾಗಳಿಗೂ ಹೋಲಿಕೆ ಮಾತ್ರ ಬೇಡ ಎಂದಿದ್ದಾರೆ ಉಪ್ಪಿ.