Film News

ಮದುವೆಯಾದ ನರೇಶ್ ಪವಿತ್ರಾ, ಆತ್ಮಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ, ವೈರಲ್ ಆದ ವಿಡಿಯೋ….!

ಸುಮಾರು ತಿಂಗಳುಗಳಿಂದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ರವರ ಅಫೈರ್‍ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಇಬ್ಬರೂ ಸುಮಾರು ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇನ್ನೂ ಶೀಘ್ರದಲ್ಲೇ ತಾವು ಮದುವೆಯಾಗುವುದಾಗಿ ಹೊಸ ವರ್ಷದ ಆಚರಣೆಯ ವೇಳೆ ಸ್ಪೇಷಲ್ ವಿಡಿಯೋ ಮೂಲಕ ತಿಳಿಸಿದ್ದರು. ಇದೀಗ ಅವರು ಅಧಿಕೃತವಾಗಿ ಮದುವೆಯಾಗಿದ್ದಾರೆ. ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದು, ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಕಳೆದ ವರ್ಷದಲ್ಲಿ (2022) ತೆಲುಗು ಸಿನಿರಂಗದಲ್ಲಿ ತುಂಬಾನೆ ಸದ್ದು ಮಾಡಿದ ವಿಚಾರವೆಂದರೇ ಅದು ಪೋಷಕ ನಟಿ ಪವಿತ್ರ ಹಾಗೂ ನಟ ನರೇಶ್ ರವರ ಬಗೆಗಿನ ಸಂಬಂಧದ ಸುದ್ದಿ. ಸದ್ಯ ಈ ಜೋಡಿ ಸಹಜೀವನ ನಡೆಸುತ್ತಿದ್ದು, ಅವರ ಬಗ್ಗೆ ಅನೇಕ ರೂಮರ್‍ ಗಳು, ಕಥನಗಳು ಕೇಳಿಬರುತ್ತಲೇ ಇತ್ತು. ಜೊತೆಗೆ ಸೂಪರ್‍ ಸ್ಟಾರ್‍ ಕೃಷ್ಣ ಮರಣದ ಸಮಯದಲ್ಲೂ ಸಹ ಪವಿತ್ರಾ ಭಾಗಿಯಾಗಿದ್ದರು. ಈ ಹಿಂದೆ ತೆಲುಗು ನಟ ನರೇಶ್ ಹಾಗೂ ಆತನ ಪತ್ನಿರಮ್ಯಾರಘುಪತಿ ನಡುವೆ ಕೌಟುಂಬಿಕ ಕಲಹ ಬೀದಿಗೆ ಬಂದಿತ್ತು.  ಈ ಕಲಹಕ್ಕೆ ನೇರ ಕಾರಣ ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ ಪತಿ ರಮ್ಯಾ ಆರೋಪಿಸಿದ್ದರು. ಜೊತೆಗೆ ನರೇಶ್ ಹಾಗೂ ಪವಿತ್ರಾ ರಹಸ್ಯವಾಗಿ ಮದುವೆಯಾಗಿದ್ದು, ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನರೇಶ್ ಹಾಗೂ ಪವಿತ್ರಾ ಇದ್ದರು. ರಮ್ಯಾ ಗೆ ರೆಡ್ ಹ್ಯಾಂಡ್ ಆಗಿ ಸಹ ಇವರು ಸಿಕ್ಕಿಬಿದ್ದಿದ್ದರು. ಅಂದಿನಿಂದ ಅವರ ಬಗ್ಗೆ ರೂಮರ್‍ ಗಳು ಹರಿದಾಡುತ್ತಲೇ ಇದೆ. ಬಳಿಕ ಇದೇ ವರ್ಷದ ಹೊಸ ವರ್ಷದ ಆಚರಣೆಯ ವೇಳೆ ಅವರು ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಣೆ ಮಾಡಿದ್ದರು.

ಇನ್ನೂ ನರೇಶ್ ತನ್ನ ಟ್ವಿಟರ್‍ ಖಾತೆಯ ಮೂಲಕ ಮದುವೆಯ ವಿಡಿಯೋ ಶೇರ್‍ ಮಾಡಿದ್ದಾರೆ. ಅಭಿಮಾನಿಗಳು, ಶ್ರೇಯೋಭಿಲಾಷಿಗಳ ಆರ್ಶಿವಾದ ಕೋರಿದ್ದಾರೆ. ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ನರೇಶ್, ನಮ್ಮ ಈ ಹೊಸ ಪಯಣದಲ್ಲಿ ಜೀವನ ಪರ್ಯಂತ ಶಾಂತಿ, ಸಂತೋಷಕ್ಕಾಗಿ ನಿಮ್ಮ ಆರ್ಶಿವಾದ ಕೋರುತ್ತಿದ್ದೇನೆ. ಒಂದು ಪವಿತ್ರವಾದ ಬಂಧ, ಎರಡು ಮನಸುಗಳು, ಮೂರು ಗಂಟು, ಸಪ್ತಪದಿ ನಿಮ್ಮ ಆರ್ಶಿವಾದ ಕೋರುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಪವಿತ್ರಾ ಹಾಗೂ ನರೇಶ್ ಮದುವೆ ಸಮಾರಂಭದಲ್ಲಿ ಅತೀ ಕಡಿಮೆ ಮಂದಿ ಇದ್ದರಂತೆ. ಇನ್ನೂ ಅನೇಕರು ನವ ದಂಪತಿಗೆ ಶುಭಾಷಯಗಳನ್ನು ಕೋರುತ್ತಿದ್ದಾರೆ. ಕಳೆದ ವರ್ಷ ನರೇಶ್ ತನ್ನ ಮೂರನೇ ಪತ್ನಿ ರಮ್ಯ ರಘುಪತಿ ನಡುವೆ ವಿಬೇದಗಳು ಹುಟ್ಟಿದ್ದು, ಬೇರೆಯಾದರು. ಇನ್ನೂ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ಇದೊಂದು ಸಿನೆಮಾದಲ್ಲಿನ ಭಾಗ ಮಾತ್ರ ಎಂಬ ಪ್ರಚಾರ ಸಹ ನಡೆಯುತ್ತಿದೆ. ಇನ್ನೂ ಈ ಬಗ್ಗೆ ನರೇಶ್ ಅಥವಾ ಪವಿತ್ರಾ ಯಾವ ರೀತಿಯಲ್ಲಿ ಸ್ಪಷ್ಟನೆ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top