Film News

ಅನಸೂಯ ಜೊತೆಗಿನ ವಿವಾದದ ಬಗ್ಗೆ ರೌಡಿ ಹಿರೋ ವಿಜಯ್ ದೇವರಕೊಂಡ ರಿಯಾಕ್ಷನ್ ಏನು ಗೊತ್ತಾ?

ತೆಲುಗು ಸ್ಟಾರ್‍ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನಸೂಯ ನಡುವೆ ವಿವಾದವೊಂದು ನಡೆಯುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಪರೋಕ್ಷವಾಗಿ ಆಗಾಗ ಟ್ವೀಟ್ ಗಳ ಮೂಲಕ ವಿಜಯ್ ದೇವರಕೊಂಡ ಬಗ್ಗೆ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಹಾಗೂ ಅನಸೂಯರವರಿಗೆ ಸೋಷಿಯಲ್ ಮಿಡಿಯಾದಲ್ಲಿ ವಾರ್‍ ನಡೆಯುತ್ತಲೇ ಇರುತ್ತದೆ. ಇದೀಗ ಈ ವಿವಾದದ ಬಗ್ಗೆ ವಿಜಯ್ ದೇವರಕೊಂಡ ರಿಯಾಕ್ಟ್ ಆಗಿದ್ದಾರೆ. ಅಷ್ಟಕ್ಕೂ ವಿವಾದದ ಬಗ್ಗೆ ವಿಜಯ್ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನೆಮಾದ ಬಿಡುಗಡೆಯಾದಾಗಿನಿಂದ ವಿವಿಧ ರೀತಿಯಲ್ಲಿ ಅನಸೂಯ ವಿಜಯ್ ದೇವರಕೊಂಡ ಬಗ್ಗೆ ಪರೋಕ್ಷವಾಗಿ ಕಾಮೆಂಟ್ಸ್ ಮಾಡುತ್ತಲೇ ಇದ್ದಾರೆ. ಅಷ್ಟಕ್ಕೂ ಅವರಿಬ್ಬರ ನಡುವೆ ಏನು ನಡೆದಿದೆ ಎಂಬುದರ ಬಗ್ಗೆ ಕ್ಲಾರಿಟಿ ಸಹ ಇಲ್ಲ. ಆದರೆ ಅನಸೂಯ ಮಾತ್ರ ಪರೋಕ್ಷವಾಗಿ ಟ್ವೀಟ್ ಮೂಲಕ ಅತನ ಬಗ್ಗೆ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಈ ಕಾರಣದಿಂದ ಅನಸೂಯರವರನ್ನು ವಿಜಯ್ ಫ್ಯಾನ್ಸ್ ಟ್ರೋಲ್ ಸಹ ಮಾಡುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಈ ವಿವಾದದ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಖುಷಿ ಸಿನೆಮಾ ಟ್ರೈಲರ್‍ ಲಾಂಚ್ ನಿಮಿತ್ತ ನಡೆದಂತಹ ಪ್ರೆಸ್ ಮೀಟ್ ನಲ್ಲಿ ವಿಜಯ್ ದೇವರಕೊಂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಖುಷಿ ಸಿನೆಮಾದ ಟ್ರೈಲರ್‍ ಲಾಂಚ್ ಕಾರ್ಯಕ್ರಮದ ಅಂಗವಾಗಿ ಚಿತ್ರತಂಡ ಪ್ರೆಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ರಿಪೋರ್ಟರ್‍ ಒಬ್ಬರು ಅನಸೂಯ ಜೊತೆಗಿನ ವಿವಾದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅನಸೂಯ ಜೊತೆಗಿನ ವಿವಾದ ಏನು, ಅದಕ್ಕೆ ಯಾವಾಗ ಕೊನೆ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ವಿಜಯ್ ರಿಯಾಕ್ಟ್ ಆಗಿದ್ದು, ಏನೋ ನೀವು ಗಲಾಟೆ ಮಾಡುವವರನ್ನೇ ಕೇಳಬೇಕು. ಸೋಷಿಯಲ್ ಮಿಡಿಯಾದಲ್ಲಿ ಏನು ನಡೆಯುತ್ತಿದೆಯೋ ನನಗೆ ತಿಳಿದಿಲ್ಲ ಎಂದು ಕೂಲ್ ಅಂಡ್ ಸಿಂಪಲ್ ಆಗಿ ಉತ್ತರ ನೀಡಿದ್ದಾರೆ. ವಿಜಯ್ ಈ ವಿವಾದದ ಬಗ್ಗೆ ಅನಸೂಯ ರವರನ್ನೇ ಕೇಳಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೇ ವೇಳೆ ವಿಜಯ್ ಪ್ರೀತಿ, ಮದುವೆಯ ಬಗ್ಗೆ ಸಹ ರಿಯಾಕ್ಟ್ ಆಗಿದ್ದಾರೆ. ಮದುವೆಯಾಗಬೇಕಾದರೇ ಹುಡುಗಿ ಸಿಗಬೇಕಲ್ವಾ, ಇನ್ನೂ ಹುಡುಗಿ ಸಿಕ್ಕಿಲ್ಲ. ಎರಡು ಮೂರು ವರ್ಷದಲ್ಲಿ ಮದುವೆಯಾಗುತ್ತೇನೆ ಎಂದಿದ್ದಾರೆ.

ಇನ್ನೂ ವಿಜಯ್ ದೇವರಕೊಂಡ ಕೊನೆಯದಾಗಿ ಲೈಗರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿ ಉಳಿಯಿತು. ಸದ್ಯ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿ ನಟಿಸಿದ್ದು, ಸೆ.1 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಸಮಂತಾ ವಿಜಯ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

Most Popular

To Top