ಮೊಬೈಲ್ ಚಾರ್ಜ್ ಹಾಕುವಾಗ ಶಾಕ್, ತಾಯಿ ಮಗು ವಿದ್ಯುತ್ ಶಾಕ್ ಗೆ ಬಲಿ……!

ಇದೀಗ ಪ್ರತಿಯೊಂದು ಮನೆಯಲ್ಲೂ ಒಂದು ಮೊಬೈಲ್ ಆದರೂ ಇದ್ದೇ ಇರುತ್ತದೆ. ಮೊಬೈಲ್ ಬ್ಲಾಸ್ಟ್ ಆಗಿ ಮೊಬೈಲ್ ಚಾರ್ಜರ್‍ ನಿಂದ ಅನಾಹುತಗಳೂ ಸಹ ನಡೆದಿದೆ. ಇದೀಗ ಉತ್ತರ ಪ್ರದೇಶದ ಭವಾನಿಪುರ ಎಂಬ ಗ್ರಾಮದಲ್ಲಿ ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ತಾಯಿ ಹಾಗೂ ಮಗ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದೆ. ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳೆದೆರಡು ದಿನಗಳ ಹಿಂದೆ ಭವಾನಿಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಮಸಾಹೇಲಿ ಹಾಗೂ ಆಕೆಯ ಪುತ್ರ ರೋಹಿತ್ ಜೈಸ್ವಾಲ್ ಮೃತ ದುರ್ದೈವಿಗಳು. 15 ವರ್ಷ ವಯಸ್ಸಿನ ರೋಹಿತ್ ಜೈಸ್ವಾಲ್ ರಾತ್ರಿ ಮನೆಯಲ್ಲಿ ಮಲಗಿದ್ದ, ಅವರ ತಾಯಿ ಸಹ ಅದೇ ಕೋಣೆಯಲ್ಲಿ ಮಲಗಿದ್ದಾನೆ. ರೋಹಿತ್ ರಾತ್ರಿ ಎದ್ದು ಮೊಬೈಲ್ ಚಾರ್ಜಿಂಗ್ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಶಾಕ್ ತಗಲಿ ಒದ್ದಾಡಿದ್ದಾನೆ. ಅದನ್ನು ಕಂಡ ತಾಯಿ ಸಹ ಮಗನನ್ನು ರಕ್ಷಣೆ ಮಾಡಲು ಹೋಗಿ ವಿದ್ಯುತ್ ಸ್ಪರ್ಷ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಕುಟುಂಬಸ್ಥರು ಕೋಣೆಯ ಬಾಗಿಲು ತೆಗೆದು ನೋಡುವಷ್ಟರಲ್ಲಿ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸದೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಇನ್ನೂ ಕರ್ನಾಟಕದಲ್ಲೂ ಸಹ ಅಂತಹುದೇ ಘಟನೆಯೊಂದು ನಡೆದಿತ್ತು. ಕರ್ನಾಟಕದ ಕಾರವಾರದಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿದ್ದ ಚಾರ್ಜರ್‍ ವೈರ್‍ ಬಾಯಿಗೆ ಇಟ್ಟುಕೊಂಡ 8 ತಿಂಗಳ ಮಗು ಮೃತಪಟ್ಟಿತ್ತು. ಆದ್ದರಿಂದ ಮೊಬೈಲ್ ಚಾರ್ಜ್ ಗೆ ಹಾಕುವಾಗ ಹಾಗೂ ತೆಗೆಯುವಾಗ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು.