ಬಿಜೆಪಿ ಸಂಸೆದೆಗೆ ಫ್ಲೈಯಿಂಗ್ ಕಿಸ್ ಕೊಟ್ಟರಂತೆ ರಾಹುಲ್ ಗಾಂಧಿ, ಸ್ಪೀಕರ್ ಗೆ ದೂರು ನೀಡಿದ ಸಚಿವೆ ಶೋಭಾ….!

Follow Us :

ಲೋಕಸಭಾ ಅಧಿವೇಶನದ ಸಮಯದಲ್ಲಿ ಸಂಸದ ರಾಹುಲ್ ಗಾಂಧಿ ಬಿಜೆಪಿ ಮಹಿಳಾ ಸಂಸದೆಯರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪೀಕರ್‍ ಓಂ ಬಿರ್ಲಾರವರಿಗೆ ಔಪಚಾರಿಕ ದೂರು ನೀಡಿದ್ದಾರೆ. ಬುಧವಾರ ಮಾತನಾಡಲು ಅವಕಾಶ ಪಡೆದ ರಾಹುಲ್ ಗಾಂಧಿ ಭಾಷಣ ಮುಗಿಸಿ ನಿರ್ಗಮಿಸಿದರು. ನಿರ್ಗಮಿಸುವುದಕ್ಕೂ ಮುಂಚೆ ಅವರು ತಮಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ದೂರು ನೀಡಿದ ಪತ್ರದಲ್ಲಿ ಕೇರಳದ ವಯನಾಡಿನ ಸಂಸದರಾದ ರಾಹುಲ್ ಗಾಂಧಿಯವರು ನಡೆದುಕೊಂಡ ವರ್ತನೆಯ ಬಗ್ಗೆ ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಕೇಂದ್ರ ಸಚಿವೆ ಹಗೂ ಈ ಸದನದ ಸದಸ್ಯೆಯಾಗಿರುವ ಸ್ಮೃತಿ ಜುಬಿನ್ ಇರಾನಿಯವರು ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರತ್ತ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಅನುಚಿತ ವರ್ತನೆ ತೋರಿದ್ದಾರೆ. ಸದನದಲ್ಲೇ ಮಹಿಳಾ ಸದಸ್ಯೆಯರಿಗೆ ಅವಮಾನ ಮಾಡಿದ್ದಲ್ಲದೇ ಈ ಮಾಹ ಸದನದ ಘನತೆಗೆ ಕುಂದು ತಂದಂತಹ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸ್ಪೀಕರ್‍ ರವರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಲಾಗಿದೆ.

ಇನ್ನೂ ಈ ಬಗ್ಗೆ ಸದನದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಸದನದಲ್ಲಿ ಸಂಸದರೊಬ್ಬರ ವರ್ತನೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಅವರು ಸದನದಲ್ಲಿರುವ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದೇವೆ ಎಂದಿದ್ದಾರೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ರಾಹುಲ್ ಗಾಂಧಿಯವರ ಬಗ್ಗೆ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ನಡೆ ಅಶ್ಲೀಲವಾಗಿದೆ. ಸ್ತ್ರೀ ದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ ಎಂದಿದ್ದಾರೆ.

ಇನ್ನೂ ಸಂಸದರಾಗಿ ಮತ್ತೇ ಸೇರ್ಪಡೆಗೊಂಡ ಬಳಿಕ ರಾಹುಲ್ ಗಾಂಧಿ ಮೊದಲು ಭಾಷಣ ಮಾಡಿ ಸದನದಿಂದ ಹೊರ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಈ ದೃಶ್ಯ ಯಾವುದೇ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಇನ್ನೂ ಈ ಬಗ್ಗೆ ಪ್ರತ್ಯಕ್ಷದರ್ಶಿ ಸಂಸದರು ನೀಡಿದ ಮಾಹಿತಿ ಮೆರೇಗೆ ಬಿಜೆಪಿ ಮಹಿಳಾ ಸಂಸದರು ರಾಹುಲ್ ಗಾಂಧಿ ನಡೆ ಅನುಚಿತವಾಗಿತ್ತು ಎಂದು ಆರೋಪಿಸಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ದೂರಿಗೆ 21 ಮಂದಿ ಮಹಿಳಾ ಸಂಸದರು ಸಹಿ ಹಾಕಿದ್ದಾರೆ.