Film News

ಸಾಮಿ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕದಿರಲು ರಷ್ಮಿಕಾ ಮಂದಣ್ಣ ನಿರ್ಧಾರವಂತೆ, ಕಾರಣ ಸಹ ತಿಳಿಸಿದ ಬ್ಯೂಟಿ….!

ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಫೇಂ ಸಂಪಾದಿಸಿಕೊಂಡ ನಟಿ ರಷ್ಮಿಕಾ ಮಂದಣ್ಣ  ತೆಲುಗಿನಲ್ಲಿ ಪುಷ್ಪಾ ಸಿನೆಮಾದ ಬಳಿಕವಂತೂ ನ್ಯಾಷನಲ್ ಲೆವೆಲ್ ನಲ್ಲಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಸಹ ಈ ಸಿನೆಮಾದ ಹಾಡುಗಳು, ಡೈಲಾಗ್ ಗಳು ಮಾತ್ರ ಇನ್ನೂ ಹಳೆಯದಾಗಿಲ್ಲ ಎನ್ನಬಹುದಾಗಿದೆ. ಇಂದಿಗೂ ಸಹ ಈ ಸಿನೆಮಾದ ಹಾಡುಗಳು ಹಾಗೂ ಡೈಲಾಗ್ ಗಳು ಸಿನಿರಸಿಕರ ಬಾಯಲ್ಲಿ ಬರುತ್ತಿರುತ್ತವೆ. ಇನ್ನೂ ಈ ಸಿನೆಮಾದಲ್ಲಿನ ಸ್ವಾಮಿ ಸ್ವಾಮಿ ಹಾಡು ಮಾತ್ರ ತುಂಬಾನೆ ಫೇಂ ಪಡೆದುಕೊಂಡಿದ್ದು, ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

ಇನ್ನೂ ರಷ್ಮಿಕಾ ಮಂದಣ್ಣ ಪುಷ್ಪಾ ಸಿನೆಮಾದಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಸ್ವಾಮಿ ಸ್ವಾಮಿ ಹಾಡು ತುಂಬಾನೆ ಫೇಮಸ್ ಆಗಿದೆ. ಈ ಹಾಡಿನಲ್ಲಿ ಆಕೆಯ ನೃತ್ಯಕ್ಕೆ ಅನೇಕರು ಫಿದಾ ಆಗಿದ್ದರು. ಜೊತೆಗೆ ಆಕೆ ಅನೇಕ ವೇದಿಕೆಗಳಲ್ಲಿ ಸಹ ಈ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಆದರೆ ಇನ್ನು ಮುಂದೆ ಈಕೆ ಯಾವುದೇ ಸಮಾರಂಭದಲ್ಲಿ ಈ ಹಾಡಿಗೆ ಸ್ಟೆಪ್ಟ್ ಹಾಕದಿರಲು ತಿರ್ಮಾನ ತೆಗೆದುಕೊಂಡಿದ್ದಾರಂತೆ. ಇನ್ನೂ ಆಕೆ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುವ ಸಮಯದಲ್ಲಿ ಹೇಳಿದ್ದಾರೆ. ಆದರೆ ಆಕೆ ಈ ವಿಚಾರವನ್ನು ಸೀರಿಯಸ್ ಆಗಿ ಹೇಳಿದ್ರಾ ಅಥವಾ ತಮಾಷೆಯಾಗಿ ಹೇಳಿದ್ರಾ ಎಂಬುದು ಮಾತ್ರ ಇನ್ನು ಮುಂದೆ ತಿಳಿದು ಬರಬೇಕಿದೆ.

ಇನ್ನೂ ರಷ್ಮಿಕಾ ಮಂದಣ್ಣ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆಗಾಗ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಸಂವಾದ ಮಾಡುತ್ತಿರುತ್ತಾರೆ. ಈ ವೇಳೆ ಆಕೆ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಹಾದಿಯಲ್ಲೇ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸ್ವಾಮಿ ಸ್ವಾಮಿ ಹಾಡಿನ ಬಗ್ಗೆ ಪ್ರಶ್ನೆ ಎದುರಾಗಿದೆ. ಅಭಿಮಾನಿಯೊಬ್ಬ ನಾನು ನಿಮ್ಮ ಜೊತೆ ಸ್ವಾಮಿ ಸ್ವಾಮಿ ಹಾಡಿಗೆ ಡ್ಯಾನ್ಸ್ ಮಾಡಲು ಇಷ್ಟಪಟ್ಟಿದ್ದೇನೆ ಎಂದು ಅಭಿಮಾನಿ ಕೇಳಿದ್ದು, ಅದಕ್ಕೆ ಉತ್ತರ ನೀಡಿದ ರಷ್ಮಿಕಾ ನಾನು ಈಗಾಗಲೇ ಅನೇಕ ಬಾರಿ ಸ್ವಾಮಿ ಸ್ವಾಮಿ ಹಾಡಿಗೆ ಸ್ಟೆಪ್ಸ್ ಹಾಕಿದ್ದೇನೆ. ನನಗೆ ವಯಸ್ಸಾದಾಗ ನಂಗೆ ಬೆನ್ನಿನ ಸಮಸ್ಯೆ ಬರಬಹುದು ಎಂದು ನಾವು ಭೇಟಿಯಾದಾಗ ಈ ಬಗ್ಗೆ ಯೋಚನೆ ಮಾಡೋಣ ಎಂದು ರಶ್ಮಿಕಾ ಉತ್ತರ ನೀಡಿದ್ದಾರೆ.

ಇನ್ನೂ ರಶ್ಮಿಕಾ ರವರ ಈ ಉತ್ತರವನ್ನು ನೆಟ್ಟಿಗರೂ ಬೇರೆ ರೀತಿಯಲ್ಲೆ ಅರ್ಥೈಸಿಕೊಳ್ಳುತ್ತಿದ್ದಾರೆ. ಇನ್ನೂ ರಷ್ಮಿಕಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಪುಷ್ಪಾ-2 ಹಾಗೂ ಹಿಂದಿಯಲ್ಲಿ ಯಾನಿಮಲ್ ಎಂಬ ಬಿಗ್ ಬಜೆಟ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ-2 ಸಿನೆಮಾದ ಮೇಲೆ ರಷ್ಮಿಕಾ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top