Film News

ಕಣ್ಣೀರು ಹಾಕಿದ ಮೃಣಾಲ್ ಠಾಕೂರ್, ಅಷ್ಟಕ್ಕೂ ಮೃಣಾಲ್ ಗೆ ಏನಾಯ್ತು, ಗಾಬರಿಗೊಂಡ ಅಭಿಮಾನಿಗಳು…!

ನಟಿ ಮೃಣಾಲ್ ಠಾಕೂರ್‍ ಸಿತಾರಾಮಂ ಸಿನೆಮಾ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ನಟಿಯಾಗಿದ್ದಾರೆ. ಇನ್ನೂ ಮೊದಲನೇ ಸಿನೆಮಾದ ಮೂಲಕವೇ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದರು. ಒಂದೇ ಸಿನೆಮಾದ ಮೂಲಕವೇ ಸ್ಟಾರ್‍ ನಟಿಯ ಸ್ಥಾನಕ್ಕೆ ಹೋದರು. ಸೌಂದರ್ಯ, ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡರು. ಇನ್ನೂ ಈ ಸಿನೆಮಾದ ಬಳಿಕ ಆಫರ್‍ ಗಳೂ ಸಹ ಹರಿದು ಬರುತ್ತಿದ್ದು, ಟಾಲಿವುಡ್ ನಲ್ಲೇ ಸೆಟಲ್ ಆಗಲು ಹೈದರಾಬಾದ್ ನಲ್ಲಿ ಮನೆಯನ್ನು ಸಹ ಖರೀದಿಸದ್ದಾರಂತೆ. ಸದ್ಯ ಬಾಲಿವುಡ್ ಹಾಗೂ ಟಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಮೃಣಾಲ್ ಸೀತಾರಾಮಂ ಸಿನೆಮಾದ ಹಿಟ್ ಮೂಲಕ ಭಾರಿ ಇಮೇಜ್ ಸಂಪಾದಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಆಕ್ಟೀವ್ ಆಗಿದ್ದು, ಆಕೆಯ ಕುರಿತ ಅನೇಕ ವಿಚಾರಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಅಪ್ಡೇಟ್ ನೀಡುತ್ತಿರುತ್ತಾರೆ. ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನೂ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆಕೆ ಕಣ್ಣೀರುಡುತ್ತಿದ್ದಾರೆ. ಅದನ್ನು ಕಂಡ ಆಕೆಯ ಅಭಿಮಾನಿಗಳು ಆಕೆಗೆ ಏನಾಗಿದೆ ಎಂದು ಗಾಬರಿಗೊಂಡಿದ್ದಾರೆ. ಜೊತೆಗೆ ಆಕೆಗೆ ಏನಾಗಿದೆ ಎಂಬ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಮೃಣಾಲ್ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಳೆಯ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಆಕೆಯ ಮನಸ್ಸು ಸರಿಯಿಲ್ಲದೇ ನೋವನ್ನು ಅನುಭವಿಸುತ್ತಿರುವ ಸಮಯದಲ್ಲಿ ಆಕೆ ಈ ಪೊಟೋ ಶೇರ್‍ ಮಾಡಿದ್ದಾರೆ. ಸಾಮಾನ್ಯ ಸಿನೆಮಾ ಸೆಲೆಬ್ರೆಟಿಗಳು  ಎಂದ ಕೂಡಲೇ ದುಬಾರಿ ಜೀವನ ಸಂತೋಷಕರವಾದ ಜೀವನ ಅನುಭವಿಸುತ್ತಾರೆ ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಆದರೆ ಅವರ ರಿಯಲ್ ಲೈಫ್ ನಲ್ಲಿ ತುಂಬಾನೆ ನೋವುಗಳೂ ಸಹ ಇರುತ್ತವೆ. ಆದರೆ ಅವರ ನೋವನ್ನು ಯಾರೂ ಸಹ ಅಷ್ಟೊಂದು ಹಿಡಿಸಿಕೊಳ್ಳುವುದಿಲ್ಲ. ಸೆಲೆಬ್ರೆಟಿಗಳು ಸೋಷಿಯಲ್ ಮಿಡಿಯಾದಲ್ಲಿ ಹೇಳದ ಹೊರತು ಅವರ ನೋವು ಯಾರಿಗೂ ತಿಳಿಯುವುದಿಲ್ಲ. ಅವರ ನೋವನ್ನು ತಿಳಿಯದೆ ಕಾಮೆಂಟ್ ಗಳ ಮೂಲಕ ಚುಚ್ಚು ಮಾತುಗಳನ್ನು ಹೇಳಲು ಸಹ ಸೋಷಿಯಲ್ ಮಿಡಿಯಾದಲ್ಲಿ ಒಂದು ವರ್ಗ ಸಿದ್ದವಾಗಿರುತ್ತದೆ. ಅಂತಹುದೇ ಸಮಸ್ಯೆಯನ್ನು ಮೃಣಾಲ್ ಸಹ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ನಟಿ ಮೃಣಾಲ್ ತನ್ನ ಜೀವನದಲ್ಲಿ ಎದುರಿಸಿದ ನೋವನ್ನು ಹೇಳಿಕೊಂಡಿದ್ದು, ಅಂದು ತೆಗೆದುಕೊಂಡ ಪೊಟೋ ಇದು ಎಂದು ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದ್ದಾರೆ. ತುಂಬಾ ಡಿಪ್ರೆಷನ್ ನಲ್ಲಿರುವಾಗ ಈ ಪೊಟೋ ತೆಗೆದುಕೊಳ್ಳಲಾಗಿದೆ. ಆದರೆ ಈಗ ನಾನು ಚೆನ್ನಾಗಿಯೇ ಇದ್ದೀನಿ. ನಿನ್ನೆ ಕಷ್ಟವಾಗಿತ್ತು. ಆದರೆ ಇಂದು ಮಾತ್ರ ನಾನು ತುಂಬಾ ಸ್ಟ್ರಾಂಗ್ ಆಗಿ ಸಂತೋಷವಾಗಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಇಂತಹ ಸನ್ನಿವೇಶಗಳು ಇರುತ್ತದೆ. ಆದರೆ ಅದನ್ನು ಸುಮಾರು ಜನತೆ ಹೇಳಿಕೊಳ್ಳುವುದಿಲ್ಲ. ಆದರೆ ನಾನು ಮಾತ್ರ ಅದನ್ನು ಹೇಳಿಕೊಂಡಿದ್ದೇನೆ ಎಂದು ಮೃಣಾಲ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ.

Most Popular

To Top