Film News

ಬಿಕಿನಿ ಧರಿಸಲು ಲೇಡಿ ಸೂಪರ್ ಸ್ಟಾರ್ ನಯನತಾರಾ ತೆಗೆದುಕೊಂಡಿದ್ದು, ಅಷ್ಟು ಕೋಟಿನಾ? ವೈರಲ್ ಆದ ಸುದ್ದಿ….!

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಕಠಿಣ ಪರಿಶ್ರಮದಿಂದ ಸ್ಟಾರ್‍ ನಟಿಯಾಗಿ ಅಭಿವೃದ್ದಿ ಹೊಂದಿರುವ ನಟಿಯರಲ್ಲಿ ನಯನತಾರಾ ಮೊದಲ ಸ್ಥಾನದಲ್ಲಿರುತ್ತಾರೆ. ಆಕೆಯ ಕೆರಿಯರ್‍ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಬೋಲ್ಡ್ ರೋಲ್ಸ್ ಸಹ ಮಾಡಿದ್ದಾರೆ. ಕೆಲವೊಂದು ಸಿನೆಂಆಗಳಲ್ಲಿ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡಿದ್ದಾರೆ. ತಮಿಳಿನ ಬಿಲ್ಲಾ ಸಿನೆಮಾದಲ್ಲಿ ಆಕೆ ಬಿಕಿನಿ ಮಾದರಿಯ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ನಯನತಾರಾ ಜವಾನ್ ಸಿನೆಮಾದಲ್ಲಿ ಬಿಕಿನಿ ಧರಿಸಲು ಭಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಕಾಲಿವುಡ್ ಯಂಗ್ ಡೈರೆಕ್ಟರ್‍ ಅಟ್ಲಿ ಹಾಗೂ ಶಾರುಖ್ ಖಾನ್ ನಿರ್ದೇಶನದಲ್ಲಿ ಮೂಡಿಬರಲಿರುವ  ಜವಾನ್ ಸಿನೆಮಾದಲ್ಲಿ  ನಯನತಾರಾ ಒಂದು ಸನ್ನಿವೇಶದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕಾರಣದಿಂದ ಆಕೆ ಭಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರಂತೆ. ಇನ್ನೂ ನಯನತಾರಾ ಸೌತ್ ನಲ್ಲಿ ಎರಡು ಸಿನೆಮಾಗಳಿಗೆ ತೆಗೆದುಕೊಳ್ಳುವಷ್ಟು ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಅಂದರೇ ಬರೊಬ್ಬರಿ 10 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಮದುವೆಯಾದ ಬಳಿಕ ನಯನತಾರಾ ಮೊದಲ ಬಾರಿಗೆ ಇಂತಹ ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬ ವಿಚಾರ ಸಹ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. ಇನ್ನೂ ಈ ಬಗ್ಗೆ ಇನಷ್ಟೆ ಅಧಿಕೃತವಾದ ಮಾಹಿತಿ ಹೊರಬರಬೇಕಿದೆ.

ಸುಮಾರು ವರ್ಷಗಳ ಕಾಲ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಲವ್ ಟ್ರಾಕ್ ನಡೆಸಿದ್ದರು. ಬಳಿಕ ಕಳೆದ ವರ್ಷ ಜೂನ್ ಮಾಹೆಯಲ್ಲಿ ಈ ಜೋಡಿಯ ಮದುವೆ ಮಹಾಬಲಿಪುರಂ ನಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತ್ತು. ಇನ್ನೂ ಮದುವೆಯಾದಾಗಿನಿಂದಲೂ ನಯನತಾರಾ ಹಾಗೂ ವಿಘ್ನೇಶ್ ಜೋಡಿ ಒಂದಲ್ಲ ಒಂದು ವಿಚಾರಕ್ಕಾಗಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದರು. ತಿರುಮಲದಲ್ಲಿ ಚಪ್ಪಲಿ ಧರಿಸಿದ್ದಾರೆಂಬ ಕಾರಣದಿಂದ ಈ ಜೋಡಿಯ ಮೇಲೆ ಟಿಟಿಡಿ ಸಂಸ್ಥೆ ಹಾಗೂ ಭಕ್ತರು ಸಹ ಆಕ್ರೋಷ ಹೊರಹಾಕಿದ್ದರು. ಬಳಿಕ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಬಹಿರಂಗವಾಗಿ ಕ್ಷಮೆ ಸಹ ಕೋರಿದ ಬಳಿಕ ಈ ವಿವಾದ ಅಂತ್ಯಗೊಂಡಿತ್ತು. ಬಳಿಕ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವಳಿ ಮಕ್ಕಳನ್ನು ಸೆರಗೋಸಿ ಪದ್ದತಿಯ ಮೂಲಕ ಪಡೆದುಕೊಂಡು ಮತ್ತೆ ವಿವಾದಕ್ಕೆ ಗುರಿಯಾದರು. ಬಳಿಕ ತಾವು ಕಾನೂನು ಪ್ರಕಾರವಾಗಿಯೇ ಮಕ್ಕಳನ್ನು ಪಡೆದುಕೊಂಡಿದ್ದಾಗಿ ಆಧಾರ ಸಮೇತ ಆ ವಿವಾದದಿಂದಲೂ ಹೊರಬಂದರು.

ಇನ್ನೂ ಮದುವೆಯಾದರೂ ಸಹ ನಯನತಾರಾ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜವಾನ್ ಸಿನೆಮಾದಲ್ಲಿ ನಯನತಾರಾ ಶಾರುಖ್ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ಸಹ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಬಳಿಕ ನಯನತಾರಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Most Popular

To Top