ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಮಾಡಿಕೊಂಡ್ರಾ ರಶ್ಮಿಕಾ, ಬೇರೆ ನಟನೊಂದಿಗೆ ಡೇಟಿಂಗ್, ವೈರಲ್ ಆದ ಪೊಟೋಸ್….!

ಸುಮಾರು ದಿನಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಈ ಬಗ್ಗೆ ರಶ್ಮಿಕಾ ಅನೇಕ ಬಾರಿ ವಿಜಯ್ ದೇವರಕೊಂಡ ನನಗೆ ಒಳ್ಳೆಯ ಸ್ನೇಹಿತ ಅಷ್ಟು ಬಿಟ್ಟರೇ ಬೇರೆ ಏನು ಇಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರಿಬ್ಬರು ಜೋಡಿಯಾಗಿ ವೆಕೇಷನ್ ಗೆ ಹಾರುವುದು ಅಲ್ಲಿನ ಪೊಟೋಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ  ಅವರ ನಡುವೆ ಅಫೈರ್‍ ಇದೆ ಎಂದು ಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ರಶ್ಮಿಕಾ ವಿಜಯ್ ದೇವರಕೊಂಡಗೆ ಕೈಕೊಟ್ಟು ಬೇರೆ ನಟನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ರೌಡಿ ಹಿರೋ ಎಂದೇ ಕರೆಯಲಾಗುವ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಗೀತಾಗೋವಿಂದಂ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಅವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿತ್ತು. ಈ ಸಿನೆಮಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರ ಏರ್ಪಟ್ಟು, ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹರಿದಾಡಲು ಶುರುವಾಗಿತ್ತು. ಬಳಿಕ ಡಿಯರ್‍ ಕಾಮ್ರೇಡ್ ಸಿನೆಮಾದಲ್ಲಿ ಸಹ ಇಬ್ಬರೂ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾದ ಬಳಿಕ ಅವರ ಬಗ್ಗೆ ಮತಷ್ಟು ರೂಮರ್‍ ಗಳು ಹರಿದಾಡಿದವು. ಇದರ ಜೊತೆಗೆ ಅವರಿಬ್ಬರೂ ಆಗಾಗ ವೆಕೇಷನ್ ಗಳಗೆ ಹೋಗುವುದು ಆ ರೂಮರ್‍ ಗಳಿಗೆ ಮತಷ್ಟು ಬಲ ಸಿಕ್ಕಂತಾಗಿದೆ. ಆದರೆ ಕೆಲವು ದಿನಗಳಿಂದ ಅವರಿಬ್ಬರೂ ಬೇರೆಯಾಗಿದ್ದಾರೆ, ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ.De

ಸದ್ಯ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಸಮಯದಲ್ಲೇ ವಿಜಯ್ ಹಾಗೂ ರಶ್ಮಿಕಾ ಬ್ರೇಕಪ್ ಮಾಡಿಕೊಂಡಿದ್ದಾರಂತೆ. ಸದ್ಯ ವಿಜಯ್ ಸಮಂತಾ ಜೊತೆಗೆ ಕ್ಲೋಜ್ ಆಗಿದ್ದಾರೆ ಎಂದು ಮತ್ತೊಂದು ರೂಮರ್‍ ಸಹ ಕೇಳಿಬರುತ್ತಿದೆ. ಇದೀಗ ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗೆ ಬ್ರೇಕಪ್ ಮಾಡಿಕೊಂಡ ಮತ್ತೊಬ್ಬ ಹಿರೋ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಹಾಟ್ ಟಾಪಿಕ್ ಆಗುತ್ತಿದೆ. ಆ ನಟ ಬೇರೆ ಯಾರೂ ಅಲ್ಲ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್. ಇತ್ತೀಚಿಗೆ ನಡೆದ ಈವೆಂಟ್ ಒಂದರಲ್ಲಿ ಜೊತೆಗೆ ಪೋಸ್ ಕೊಟ್ಟಿದ್ದರು. ಆ ಕಾರ್ಯಕ್ರಮದಲ್ಲಿ ಇಬ್ಬರೂ ತುಂಬಾ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದರು. ಅಂದೇ ಇಬ್ಬರ ನಡುವೆ ಅನುಮಾನಗಳು ಹುಟ್ಟಿಕೊಂಡವು. ಇದೀಗ ವಿಮಾನ ನಿಲ್ದಾಣದಲ್ಲಿ ಅವರಿಬ್ಬರು ಜೊತೆಗೆ ಕಾಣಿಸಿಕೊಂಡಿದ್ದು, ಅಲ್ಲಿನ ಕೆಲವೊಂದು ಪೊಟೋಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ವಿಮಾನನಿಲ್ದಾಣದಲ್ಲಿ ರಶ್ಮಿಕಾ ಸ್ಕೈ ಬ್ಲೂ ಡ್ರೆಸ್ ಧರಿಸಿದ್ದಾರೆ. ಅಲ್ಲಿನ ಕ್ಯಾಮೆರಾಗಳಿಗೆ ಆಕೆ ಸಿಕ್ಕಿಬಿದ್ದಿದ್ದಾರೆ. ಕ್ಯೂಟ್ ಆಗಿ ಹಾಗೂ ನಾಚಿಕೆ ಪಡುತ್ತಾ ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಸಹ ಬ್ರೌನ್ ಕಲರ್‍ ಪ್ಯಾಂಟ್ ಹಾಗೂ ಸಿಲ್ವರ್‍ ಕಲರ್‍ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಧರಿಸಿದ ಡ್ರೆಸ್ ಕಾರಣದಿಂದ ಆಕೆಯನ್ನು ಟ್ರೋಲ್ ಸಹ ಮಾಡಲಾಗುತ್ತಿದೆ. ಆದರೆ ಟ್ರೋಲ್ ಗಿಂತ ಅವರಿಬ್ಬರೂ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಮಾತ್ರ ಜೋರಾಗಿಯೇ ಹರಿದಾಡುತ್ತಿದೆ. ಈ ಹಿಂದೆ ಎಂದೂ ಅವರಿಬ್ಬರೂ ಯಾವುದೇ ಸಿನೆಮಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಅವರ ನಡುವೆ ಅಫೈರ್‍ ಸುದ್ದಿ ಕೇಳಿಬರುತ್ತಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ.