Film News

ಕಿರುತೆರೆಯಲ್ಲಿ ಮತ್ತೊಮ್ಮೆ ಮೋಡಿ ಮಾಡಲಿದ್ದಾರೆ ಕಿರುತೆರೆ ಸ್ಟಾರ್ ಸುಧೀರ್ ಅಂಡ್ ರಶ್ಮಿ….!

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಜೋಡಿ ಎಂದೇ ಕರೆಯಲಾಗುವ ಸುಧೀರ್‍ ಹಾಗೂ ರಶ್ಮಿ ಮತ್ತೊಮ್ಮೆ ರಂಜಿಸಲಿದ್ದಾರೆ.  ಜಬರ್ದಸ್ತ್ ಶೋ ನಲ್ಲಿ ಸುಧೀರ್‍ ಅಂಡ್ ರಶ್ಮಿ ತುಂಬಾನೆ ಫೇಮಸ್ ಆಗಿದ್ದರು. ಈ ಜೋಡಿಯ ಲವ್ ಟ್ರಾಕ್ ನೋಡಲೆಂದೆ ಅನೇಕ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಮತ್ತೊಂದು ಶೋನಲ್ಲಿ ಈ ಜೋಡಿ ಮೋಡಿ ಮಾಡಲಿದ್ದಾರೆ. ತೆಲುಗಿನ ಮತ್ತೊಂದು ಫೇಮಸ್ ಶೋ ಆದ ಶ್ರೀದೇವಿ ಡ್ರಾಮಾ ಕಂಪನಿ ಕಾರ್ಯಕ್ರಮದಲ್ಲಿ ಸುಧೀರ್‍ ರಶ್ಮಿ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇತ್ತೀಚಿಗೆ ತೆಲುಗು ಪ್ರೇಕ್ಷಕರನ್ನು ಶ್ರೀದೇವಿ ಡ್ರಾಮಾ ಕಂಪನಿ ಶೋ ತುಂಬಾನೆ ರಂಜಿಸುತ್ತಿದೆ. ಈ ಶೋ ನಲ್ಲಿ ಹೈಪರ್‍ ಆದಿ ಆಕ್ಷನ್ ತುಂಬಾನೆ ಹೈಲೈಟ್ ಆಗಲಿದೆ. ಆಂಕರ್‍ ರಶ್ಮಿ, ಹೈಪರ್‍ ಆದಿ, ಆಟೋ ರಾಂ ಪ್ರಸಾದ್, ನರೇಶ್  ಮೊದಲಾದ ಕಲಾವಿದರು ಶ್ರೀದೇವಿ ಡ್ರಾಮಾ ಕಂಪನಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಶೋ ನಲ್ಲಿ ಹೈಪರ್‍ ಆದಿ ಫರ್ಪಾಮೆನ್ಸ್ ತುಂಬಾನೆ ಚೆನ್ನಾಗಿದೆ ಎಂದು ಹೇಳಲಾಗುತ್ತಿದೆ.  ಜೊತೆಗೆ ಆಂಕರ್‍ ರಶ್ಮಿ ಜೊತೆಗೆ ಕೆಲವು ಕಲಾವಿದರು ಪ್ರೇಕ್ಷಕರನ್ನು ಚೆನ್ನಾಗಿ ನಗಿಸುತ್ತಿದ್ದಾರೆ. ಇದೀಗ ಶ್ರೀದೇವಿ ಡ್ರಾಮಾ ಕಂಪನಿಯ ಪ್ರೊಮೋ ಒಂದು ಬಿಡುಗಡೆಯಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸುಡಿಗಾಲಿ ಸುಧೀರ್‍ ಇದೀಗ ಶ್ರೀದೇವಿ ಡ್ರಾಮಾ ಕಂಪನಿಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ಬಿಡುಗಡೆಯಾದ ಪ್ರೊಮೋ ದಲ್ಲಿ ಸುಧೀರ್‍ ರನ್ನು ಸಂಸ್ಥೆ ಶೋ ಮಾಡಿದೆ. ಆದರೆ ಸುಧೀರ್‍ ಸಂಪೂರ್ಣವಾಗಿ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಕೇವಲ ಅತಿಥಿಯಾಗಿ ಬಂದರೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಪ್ರೋಮೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಸುಧೀರ್‍ ಎನ್ನಬಹುದಾಗಿದೆ. ಸುಧೀರ್‍ ಹಾಗೂ ರಶ್ಮಿ ಆ ಶೋ ನಲ್ಲಿದ್ದರೇ ಪಕ್ಕಾ ಆ ಶೋ ಟಿ.ಆರ್‍.ಪಿ ಏರುತ್ತದೆ ಎಂಬ ಮಾತುಗಳಿವೆ. ಅದು ನಿಜವೂ ಸಹ ಆಗಿದೆ ಎನ್ನಬಹುದಾಗಿದೆ. ಇನ್ನೂ ಬಿಡುಗಡೆಯಾದ ಪ್ರೊಮೋನಲ್ಲಿ ಜಡ್ಜ್ ಆಗಿ ಸೀನಿಯರ್‍ ನಟಿ ಇಂದ್ರಜಾ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಪರ್ಪಲ್ ಕಲರ್‍ ನಲ್ಲಿ ಇಂದ್ರಜಾ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಪ್ರೊಮೋ ನಲ್ಲಿ ಸುಧೀರ್‍ ಜೊತೆಗೆ ಆರ್‍.ಪಿ. ಪಟ್ನಾಯಕ್, ನಿರ್ದೇಶಕ ತೇಜ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಈ ಶೋ ನಲ್ಲಿ ಸುಧೀರ್‍ ಎಂಟ್ರಿ ಮಾತ್ರ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ರಶ್ಮಿ ಹಾಗೂ ಸುಧೀರ್‍ ಯಾವ ರೀತಿಯಲ್ಲಿ  ತೆರೆಯ ಮೇಲೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top