ಹೆಲಿಕಾಪ್ಟರ್ ಹತ್ತುವಾಗ ಎಡವಿ ಬಿದ್ದ ಸಿಎಂ, ಮತ್ತೆ ಗಾಯಗೊಂಡ ಪಶ್ಚಿಮ ಬಂಗಾಳ ಸಿಎಂ….!

Follow Us :

ಪಶ್ಚಿಮ ಬಂಗಾಳದ ಸಿಎಂ ಚುನಾವಣಾ ಪ್ರಚಾರ ನಿಮಿತ್ತ ಹೆಲಿಕಾಪ್ಟರ್‍ ನಲ್ಲಿ ಪ್ರಯಾಣಿಸಲು ಹತ್ತುವಾಗ ಎಡವಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ದುರ್ಗಾಪುರದಿಂದ ಅಸನ್ಸೋಲ್ ಗೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆ ಮೂಲಕ ಪಶ್ಚಿಮ ಬಂಗಾಳದ ಸಿಎಂ ಮತ್ತೊಮ್ಮೆ ಗಾಯಗೊಂಡಿದ್ದಾರೆ.

ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅಸನ್ಸೋಲ್ ನಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವನೆಗೆ ಸ್ಪರ್ಧೆ ಮಾಡಿದ್ದಾರೆ. ಈ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ ನಡೆಸಲು ಹೆಲಿಕಾಪ್ಟರ್‍ ಒಳಗೆ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ಅವರ ಕಾಲಿಕೆ ಕೊಂಚ ಪೆಟ್ಟಾಗಿದೆ ಎನ್ನಲಾಗಿದೆ. ಆಕೆ ಎಡವಿ ಬೀಳುತ್ತಿದ್ದಂತೆ ಅವರ ಭದ್ರತಾ ಸಿಬ್ಬಂದಿ ಕೂಡಲೇ ಆಕೆಗೆ ಸಹಾಯ ಮಾಡಿದ್ದಾರೆ. ಈ ಘಟನೆ ನಡೆದ ಕೊಂಚ ಸಮಯದ ಬಳಿಕ ಅವರು ದುರ್ಗಾಪುರದಿಂದ ಅಸನ್ಸೊಲ್ಸೆ ಎಂಬ ಪ್ರದೇಶಕ್ಕೆ ತೆರಳಿದರು. ಮೂಲಗಳ ಪ್ರಕಾರ ಅವರಿಗೆ ಅಷ್ಟೊಂದು ಗಂಭೀರ ಗಾಯವಾಗಿಲ್ಲ ಎನ್ನಲಾಗಿದೆ.

ಇನ್ನೂ ಈ ಹಿಂದೆ ಸಹ ಮಮತಾ ಬ್ಯಾನರ್ಜಿ ತಮ್ಮ ಮನೆಯ ಸ್ನಾನಗೃಹದಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಅದೇ ರೀತಿ ಕಳೆದ 2021 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಂದಿಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ ವೇಳೆ ಅಲ್ಲಿದ್ದ ಜನಜಂಗುಳಿಯ ಗಲಾಟೆಯಲ್ಲಿ ಮಮತಾ ಬ್ಯಾನರ್ಜಿ ಅವರ ಕಾಲು ಕಬ್ಬಿಣದ ಕಂಬಕ್ಕೆ ತಗುಲಿ ಗಾಯಗೊಂಡಿದ್ದರು. ಈ ಘಟನೆಗಳ ಬಗ್ಗೆ ಪರ ವಿರೋಧ ಸಹ ವ್ಯಕ್ತವಾಗಿತ್ತು. ಜನರ ಸಹಾನೂಭೂತಿ ಗಳಿಸಲು ಮಮತಾ ಬ್ಯಾನರ್ಜಿ ಗಾಯಗೊಂಡಂತೆ ನಟಿಸುತ್ತಾರೆ ಎಂದು ಅನೇಕರು ಆರೋಪ ಸಹ ಮಾಡಿದ್ದರು.