ಮಗಳೊಂದಿಗೆ ಬೀಚ್ ನಲ್ಲಿ ಹ್ಯಾಪಿ ಮೋಡ್ ನಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಕುಟುಂಬ, ಕ್ಯೂಟ್ ವಿಡಿಯೋ ವೈರಲ್…..!

ಮೆಗಾ ಕುಟುಂಬದ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಸದ್ಯ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರಾಮ್ ಚರಣ್ ಹಾಗೂ ಉಪಾಸನಾ ದಂಪಂತಿಗೆ ಮುದ್ದಿನ ಹೆಣ್ಣು ಮಗಳು ಜನಿಸಿದ್ದು, ಮಗುವಿಗೆ ಕ್ಲೀನ್ ಕಾರಾ ಎಂದು ಹೆಸರನ್ನಿಟ್ಟಿದ್ದಾರೆ. ಇದೀಗ ರಾಮ್ ಚರಣ್ ಹಾಗೂ ಉಪಾಸನಾ ತಮ್ಮ ಮುದ್ದಿನ ಮಗಳೊಂದಿಗೆ ವೈಜಾಗ್ ಬೀಚ್ ನಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಹಾಗೂ ಉಪಸಾನಾ ಜೋಡಿಗೆ ಹೆಣ್ಣು ಮಗುವಿನ ಜನನವಾಗಿದೆ. ಮೆಗಾ ಕುಟುಂಬದ ಜೊತೆಗೆ ಅಭಿಮಾನಿಗಳೂ ಸಹ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿಯವರು ಸಹ ತುಂಬಾ ಸಂತಸದಲ್ಲಿದ್ದಾರೆ. ತಮ್ಮ ಟ್ವಿಟರ್‍ ಖಾತೆಯ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಸಿನೆಮಾಗಳ ಜೊತೆಗೆ ಕುಟುಂಬಕ್ಕೂ ತುಂಬಾನೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಬಿಡುವ ಸಿಕ್ಕಾಗಲೆಲ್ಲಾ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ವೈಜಾಗ್ ಬೀಚ್ ನಲ್ಲಿ ರಾಮ್ ಚರಣ್ ಆಟವಾಡಿದ್ದಾರೆ. ಈ ವಿಡಿಯೋ ಉಪಾಸನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಮ್ ಚರಣ್ ಪತ್ನಿ ಉಪಾಸನಾ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ರಾಮ್ ಚರಣ್, ಉಪಾಸನಾ ಹಾಗೂ ಕ್ಲಿಂಕಾರ ಜೊತೆಗೆ ರಾಮ್ ಚರಣ್ ಪೆಟ್ ರೈಮ್ ಜೊತೆಗೆ ವೈಜಾಗ್ ಬೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳೊಂದಿಗೆ ರಾಮ್ ಚರಣ್ ಚಿಕ್ಕ ಮಗುವಂತೆ ಆಟವಾಡಿದ್ದಾರೆ. ಮಾರ್ನಿಂಗ್ ಸನ್ ರೈಜ್ ನೋಡುತ್ತಾ ಸಮುದ್ರದ ದಡದಲ್ಲಿ ರೈಮ್ ಜೊತೆಗೆ ಆಟವಾಡಿದ್ದಾರೆ. ಮಗಳ ಪಾದಗಳನ್ನು ನೀರಿನಲ್ಲಿ ಇಡಿಸುತ್ತಾ ಎಂಜಾಯ್ ಮಾಡಿದ್ದಾರೆ. ಈ ಮುದ್ದಾದ ಸಂತಸದ ಕ್ಷಣಗಳನ್ನು ವಿಡಿಯೋ ಮಾಡಿ ಬ್ಯಾಗ್ ರೌಂಡ್ ನಲ್ಲಿ ಆರೆಂಜ್ ಸಿನೆಮಾದ ರೂಬಾ ರೂಬಾ ಹಾಡು ಮಿಕ್ಸ್ ಮಾಡಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ರಾಮ್ ಚರಣ್ ಖ್ಯಾತ ನಿರ್ದೇಶಕ ಶಂಕರ್‍ ಜೊತೆಗೆ ಗೇಮ್ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ. ಇದರ ಜೊತೆಗೆ ಬುಚ್ಚಿಬಾಬು ನಿರ್ದೇಶನದಲ್ಲಿ RC16 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ‌