ಸಾರ್ವಜನಿಕ ಸ್ಥಳದಲ್ಲಿ ಐಸ್ ಕ್ರೀಂ ಮಾರಾಟಗಾರ ಹಸ್ತಮೈಥುನ, ಫಲೂಡಾಗೆ ವೀರ್ಯ ಮಿಕ್ಸ್ ಮಾರಾಟ ಮಾಡಿದ ವಿಡಿಯೋ ವೈರಲ್…..!

Follow Us :

ಐಸ್ ಕ್ರೀಂ ಮಾರಾಟಗಾರನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಮಾಡಿದ ನೀಚ ಕೆಲಸದಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಐಸ್ ಕ್ರೀಂ ಮಾರಾಟ ಮಾಡುವ ವ್ಯಕ್ತಿ ಹಸ್ತಮೈಥುನ ಮಾಡಿಕೊಂಡು, ವೀರ್ಯವನ್ನು ಫಲೂಡಾ ಐಸ್ ಕ್ರೀಂ ಗೆ ಮಿಕ್ಸ್ ಮಾಡಿದ್ದಾರೆ. ಈ ಅಸಹ್ಯಕರವಾದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಷ ಹೊರಹಾಕಿದ್ದಾರೆ.

ಈ ಆಘಾತಕಾರಿ ಘಟನೆ ತೆಲಂಗಾಣದ ವರಂಗಲ್ ಜಿಲ್ಲೆ ನೆಕ್ಕೊಂಡಾ ಪ್ರದೇಶದಲ್ಲಿ ನಡೆದಿದೆ. ಸಾರ್ವಜನಿಕ ಪ್ರದೇಶದಲ್ಲಿ ತಳ್ಳುವ ಐಸ್ ಕ್ರೀಂ ಮಾರಾಟ ಮಾಡುವ ಆತ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅದು ಸಾಲದು ಎಂಬಂತೆ ವೀರ್ಯವನ್ನು ಫಲೂಡಾ ಐಸ್ ಕ್ರೀಂ ನಲ್ಲಿ ಮಿಕ್ಸ್ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆಯಿಂದ ಸುತ್ತಮುತ್ತಲಿನ ಜನರಲ್ಲಿ ಆಕ್ರೋಷ ಹೆಚ್ಚಾಗುತ್ತಿದೆ. ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲಿಯೇ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ಕಾಯ್ದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇನ್ನೂ ಐಸ್ ಕ್ರೀಂ ಮಾರಾಟಗಾರನ ಕುರಿತಾಗಿ ದೂರು ದಾಖಲು ಮಾಡಲಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಕಾನೂನು ಜಾರಿ ಅಧಿಕಾರಿಗಳು ಬಾಲಾಜಿ ಹೆಸರಿನ ಐಸ್ ಕ್ರೀಂ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಅದರೊಂದಿಗೆ ಕಲುಷಿತ ಐಸ್ ಕ್ರೀಂ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿರುವ ಹಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ. ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿ, ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಷ್ಟೇಅಲ್ಲದೇ ರಸ್ತೆಬದಿಗಳಲ್ಲಿ ಗಾಡಿಗಳಿಂದ ಫಲೂಡಾ ಐಸ್ ಕ್ರೀಂ ಮಾರಾಟ ಮಾಡುವ ಮಾರಾಟಗಾರರಿಗೆ ಹಾಗೂ ರಸ್ತೆ ಬದಿಯ ಆಹಾರ ಅಂಗಡಿಗಳ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.