ನಾನು ಹೇಳಿದ್ದು ತಮಾಷೆಗೆ, ಆದರೆ ಲಾವಣ್ಯ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ನಮ್ಮ ಹುಡುಗನನ್ನೆ ಪಟಾಯಿಸಿಬಿಟ್ಲು ಎಂದ ಅಲ್ಲು ಅರವಿಂದ್, ವೈರಲ್ ಆದ ಕಾಮೆಂಟ್ಸ್…..!

ತೆಲುಗು ಸಿನಿರಂಗದ ಸ್ಟಾರ್‍ ಪ್ರೊಡ್ಯೂಸರ್‍ ಅಲ್ಲು ಅರವಿಂದ್ ನಟಿ ಲಾವಣ್ಯ ತ್ರಿಪಾಠಿಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ನಡೆದಿದ್ದು, ಶೀಘ್ರದಲ್ಲೆ ಮದುವೆ ಸಹ ಅದ್ದೂರಿಯಾಗಿ ನಡೆಯಲಿದೆ. ಕಳೆದೆರಡು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಲಾವಣ್ಯ ತ್ರಿಪಾಠಿಗೆ ಅಲ್ಲು ಅರವಿಂದ್ ತೆಲುಗು ಹುಡುಗನನ್ನು ನೋಡಿ ಮದುವೆಯಾಗು ಎಂದು ತಮಾಷೆಗೆ ಹೇಳಿದ್ದರು. ಅದರ ಬಗ್ಗೆ ಇದೀಗ ಅಲ್ಲು ಅರವಿಂದ್ ರಿಯಾಕ್ಟ್ ಆಗಿದ್ದಾರೆ.

ಸುಮಾರು ದಿನಗಳ ಹಿಂದೆ ಚಾವು ಕಬುರು ಚಲ್ಲಗಾ ಎಂಬ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಅಲ್ಲು ಅರವಿಂದ್ ಸಹ ಭಾಗಿಯಾಗಿದ್ದರು. ಈ ವೇದಿಕೆಯಲ್ಲಿದ್ದ ಲಾವಣ್ಯ ತ್ರಿಪಾಠಿಯನ್ನು ಉದ್ದೇಶಿಸಿ ನಾರ್ತ್‌ನಲ್ಲಿ ಹುಟ್ಟಿ ತೆಲುಗು ಕಲಿತು ಚೆನ್ನಾಗಿ ಮಾತನಾಡುತ್ತಿದ್ದೀಯಾ, ಇಲ್ಲೆ ಒಂದು ಹುಡುಗನನ್ನು ನೋಡಿ ಮದುವೆಯಾಗು ಎಂದು ಲಾವಣ್ಯ ಗೆ ತಿಳಿಸಿದ್ದರು. ಅದನ್ನು ಕೇಳಿ ಲಾವಣ್ಯ ಜೋರಾಗಿ ನಕ್ಕಿದ್ದರು.  ಇದೀಗ ಬೇಬಿ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ನಲ್ಲೂ ಸಹ ಅಲ್ಲು ಅರವಿಂದ್ ಭಾಗಿಯಾಗಿದ್ದರು. ಈ ವೇಳೆ ಅಲ್ಲು ಅರವಿಂದ್ ರವರಿಗೆ ಇದೇ ವಿಚಾರ ಕೇಳಲಾಗಿದ್ದು, ಅದಕ್ಕೆ ಅಲ್ಲು ಅರವಿಂದ್ ರಿಯಾಕ್ಟ್ ಆಗಿದ್ದಾರೆ. ಲಾವಣ್ಯ ತುಂಬಾ ಒಳ್ಳೆಯ ಹುಡುಗಿ, ಆಕೆ ಅಂದರೇ ನನಗೂ ತುಂಬಾ ಇಷ್ಟ. ನನ್ನ ಬ್ಯಾನರ್‍ ನಲ್ಲಿ ಆಕೆ ಮೂರು ಸಿನೆಮಾಗಳನ್ನು ಮಾಡಿದ್ದಾರೆ. ನಾನು ಆಕೆಗೆ ಇಲ್ಲಿಯೇ ಒಂದು ಹುಡುಗನನ್ನು ನೋಡಿ ಮದುವೆಯಾಗು ಎಂದಿದ್ದೆ.  ಆದರೆ ಆಕೆ ಅದನ್ನೇ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ನಮ್ಮ ಹುಡುಗನನ್ನೆ ಪ್ರೀತಿಸಿದ್ದಾಳೆ ಎಂದು ಹೇಳಿದ್ದಾರೆ.

ಇನ್ನೂ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲು ಅರವಿಂದ್ ರವರಿಗೆ ಆಗಲೇ ವರುಣ್ ಲಾವಣ್ಯ ಲವ್ ಮ್ಯಾಟರ್‍ ತಿಳಿದಿತ್ತು ಎಂಬ ಅನುಮಾನಗಳನ್ನು ಹೊರಹಾಕುತ್ತಿದ್ದಾರೆ. ಕಳೆದ ಜೂನ್ 9 ರಂದು ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ಅದ್ದೂರಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ, ಸಾಯಿಧರಮ್ ತೇಜ್, ವೈಷ್ಣವ್ ತೇಜ್ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು. ಆದರೆ ಮದುವೆ ಎಲ್ಲ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಮಿಸ್ಟರ್‍ ಎಂಬ ಸಿನೆಮಾದಲ್ಲಿ ವರುಣ್ ಹಾಗೂ ಲಾವಣ್ಯ ಜಂಟಿಯಾಗಿ ನಟಿಸಿದ್ದರು. ಈ ಸಿನೆಮಾದ ಬಳಿಕ ಅವರಿಬ್ಬರಲ್ಲಿ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ. ಅನೇಕ ಬಾರಿ ಈ ರೂಮರ್‍ ಗಳು ಕೇಳಿಬಂದಾಗ ಲಾವಣ್ಯ ಅದೆಲ್ಲಾ ಸುಳ್ಳು ಎಂದು ತಳ್ಳಿಹಾಕುತ್ತಿದ್ದರು. ಕೊನೆಯದಾಗಿ ಅವರ ಎಂಗೇಜ್ ಮೆಂಟ್ ನಡೆದಿದ್ದು, ಈ ವರ್ಷದ ಕೊನೆಯಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.