Film News

ತನ್ನ ಸಾಕು ಬೆಕ್ಕಿಗೆ ಲಿಪ್ ಕಿಸ್ ಕೊಟ್ಟ ನಟಿ ಭೂಮಿ ಶೆಟ್ಟಿ, ವೈರಲ್ ಜೊತೆಗೆ ಟ್ರೋಲ್ ಆದ ನಟಿಯ ವಿಡಿಯೋ…..!

ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳು, ವಿಡಿಯೋಗಳು, ಪೊಟೋಗಳ ಕಾರಣದಿಂದ ಅನೇಕರು ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಅದರಲ್ಲೂ ಬಣ್ಣದ ಲೋಕದ ಸೆಲೆಬ್ರೆಟಿಗಳು ಮತಷ್ಟು ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕನ್ನಡ ಕಿರುತೆರೆ ಮೂಲಕ ಫೇಂ ಪಡೆದುಕೊಂಡ ಭೂಮಿ ಶೆಟ್ಟಿ ತನ್ನ ಸಾಕು ಬೆಕ್ಕಿಗೆ ಕಿಸ್ ಮಾಡುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಆಕೆ ಈ ವಿಡಿಯೋ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದ್ದಾರೆ.

ಕಿರುತೆರೆಯ ಕಿನ್ನರಿ ಎಂಬ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ಭೂಮಿ ಶೆಟ್ಟಿ ಸದ್ಯ ತುಂಭಾನೆ ಫೇಮಸ್ ಆಗಿದ್ದಾರೆ. ಕುಂದಾಪುರ ಮೂಲದ ಈ ಬೆಡಗಿ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ವೆಕೇಷನ್, ಬೈಕ್ ರೈಡ್ ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಕೆಲವೊಂದು ಪೊಟೋಶೂಟ್ಸ್ ಮೂಲಕ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಭೂಮಿ ಶೆಟ್ಟಿಗೆ ಸಾಕು ಪ್ರಾಣಿಗಳೆಂದರೇ ತುಂಬಾನೆ ಇಷ್ಟ ಎಂದು ಹೇಳಲಾಗಿದೆ. ಇದೀಗ ಭೂಮಿ ತನ್ನ ಸಾಕು ಬೆಕ್ಕಿಗೆ ಮುತ್ತಿಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೇ ಆಕೆಗೆ ಸಾಕು ಪ್ರಾಣಿಗಳೆಂದರೇ ಎಷ್ಟು ಇಷ್ಟ ಎಂಬುದು ತಿಳಿಯುತ್ತದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿದೆಯೋ ಅದೇ ರೀತಿ ಟ್ರೋಲ್ ಸಹ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಬೆಕ್ಕಿನ ತುಟಿಗೆ ಮುತ್ತಿಟ್ಟಿದ್ದಾರೆ. ಜೊತೆಗೆ ಒಳ ಉಡುಪು ಕಾಣಿಸುವಂತೆ ಪೋಸ್ ಕೊಟ್ಟಿದ್ದಾರೆ. ಎದೆಯ ಮೇಲೆ ಡ್ಯಾಗನ್ ಟ್ಯಾಟೂ ಸಹ ಕಾಣುತ್ತಿದೆ. ಈ ಪೊಟೋ ನೋಡಿದ ಅನೇಕರು ಆಕೆಯ ವಿರುದ್ದ ಗರಂ ಆಗಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನೇಕರು ಆಕೆ ಡ್ರೆಸ್ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಈ ರೀತಿಯ ಡ್ರೆಸ್ ಗಳನ್ನು ಧರಿಸದಂತೆ ಸಲಹೆ ಗಳನ್ನು ಸಹ ನೀಡುತ್ತಿದ್ದಾರೆ. ಇನ್ನೂ ಆಕೆ ಈ ನೆಟ್ಟಿಗರ ಕಾಮೆಂಟ್ ಗಳನ್ನು ಗಂಭೀರವಾಗಿ ಪರಗಣಿಸುತ್ತಾರಾ ಅಥವಾ ಅನೇಕ ನಟಿಯರಂತೆ ಲೈಟ್ ಆಗಿ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ನಟಿ ಭೂಮಿ ಶೆಟ್ಟಿ ಕನ್ನಡದ ಬಿಗ್ ಬಾಸ್ ಸೀಸನ್ 7 ರಲ್ಲಿ ಫೈನಲಿಸ್ಟ್ ಆಗಿದ್ದರು. ಆಕೆ ಕಿನ್ನರಿ ಧಾರವಾಹಿ ಹಾಗೂ ಬಿಗ್ ಬಾಸ್ ಶೋ ಮೂಲಕ ತುಂಬಾನೆ ಫೇಮಸ್ ಆದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ಭೂಮಿ ಶೆಟ್ಟಿ ವೆಕೇಷನ್ ಗಳಿಗೆ ಹಾರುತ್ತಾ ಅಲ್ಲಿ ತೆಗೆದಂತಹ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬೋಲ್ಡ್ ಅಂಡ್ ಹಾಟ್ ಪೊಟೋಶೂಟ್ಸ್ ಮೂಲಕ ತನ್ನ ಫಾಲೋಯಿಂಗ್ ಅನ್ನು ಮತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ.

Most Popular

To Top