ಎಮೋಷನಲ್ ಆದ ಯಂಗ್ ಬ್ಯೂಟಿ ಕಲ್ಯಾಣಿ ಪ್ರಿಯದರ್ಶನ್, ಕಣ್ಣೀರು, ಗಾಯಗಳು, ಕಿರು ನಗೆ ನಿಜವಾದುದು ಎಂದ ನಟಿ…..!

Follow Us :

ಯಂಗ್ ಬ್ಯೂಟಿ ಕಲ್ಯಾಣಿ ಪ್ರಿಯದರ್ಶಿನಿ ಸೌತ್ ಸಿನಿರಂಗದಲ್ಲಿ ಅದರಲ್ಲೂ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ತೆಲುಗಿನ ಅನೇಕ ಸಿನೆಮಾಗಳ ನಟಿಸಿದ್ದಾರೆ. ಹಲೋ, ಚಿತ್ರಲಹರಿ, ರಣರಂಗಂ ಎಂಬ ಸಿನೆಮಾಗಳ ಮೂಲಕ ಯುವಕರಲ್ಲಿ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡರು. ಸೌತ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲವಾಗಿದ್ದಾರೆ. ಇದೀಗ ಆಕೆ ಎಮೋಷನಲ್ ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿವೆ.

ಸದ್ಯ ನಟಿ ಕಲ್ಯಾಣಿ ಪ್ರಿಯದರ್ಶನ್ ಮಲಯಾಳಂ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸದಾ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಕಲ್ಯಾಣಿ ಇದೀಗ ತನ್ನ ಇನ್ಸ್ಟಾ ಖಾತೆಯಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಡಿ.1 ರಂದು ತೆರೆಕಂಡ ಆಂಟೋನಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.

ಆಂಟೋನಿ ಸಿನೆಮಾದಲ್ಲಿ ಕಲ್ಯಾಣಿ ಬಾಕ್ಸಿಂಗ್ ಆಟಗಾರ್ತಿಯಾಗಿ ನಟಿಸಿದ್ದಾರೆ. ಈ ಸಿನೆಮಾ ಪೂರ್ಣ ಪ್ರಮಾಣದ ಆಕ್ಷನ್ ಡ್ರಾಮಾ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ಆಕೆ ಕೆಲವೊಂದು ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುವಾಗ ಗಾಯಗೊಂಡಿದ್ದು, ಆ ಗಾಯಗಳ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೊಟೋಗಳಿಗೆ ಎಮೋಷನಲ್ ಕಾಮೆಂಟ್ಸ್ ಸಹ ಮಾಡಿದ್ದಾರೆ. ಕಂಫರ್ಟ್ ಜೋನ್ ಬೆಳವಣಿಗೆಯಿಲ್ಲ. ಗ್ರೋತ್ ಜೋನ್ ನಲ್ಲಿ ಸೌಕರ್ಯವಿಲ್ಲ. ಇದು ನನಗೆ ತುಂಬಾ ತಡವಾಗಿ ಅರ್ಥವಾಗಿದೆ. ಪಂಚ್ ಗಳು ನಿಜವಾಯ್ತು, ಕಿಕ್ಸ್ ನಿಜವಾಯ್ತು, ಗಾಯಗಳು ನಿಜ, ಕಣ್ಣೀರು ನಿಜ, ಕಿರು ನಗೆ ಸಹ ನಿಜವಾದುದು. ಆದರೆ ರಕ್ತ ಮಾತ್ರ ನಿಜವಲ್ಲ. ಕ್ಲಾಪ್ಸ್ ಹೊಡೆದಿದ್ದಕ್ಕೆ ಧನ್ಯವಾದಗಳು ಹುಡುಗರೇ, ಕೇಕೆಗಳಿಗೆ ಧನ್ಯವಾದಗಳು ಎಲ್ಲದಕ್ಕಿಂತ ನೀವು ಆನ್ ಲೈನ್ ನಲ್ಲಿ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಕಲ್ಯಾಣಿ ಪ್ರಿಯದರ್ಶನ್ ಹಂಚಿಕೊಂಡ ಪೋಟೋಗಳು, ಪೋಸ್ಟ್ ವೈರಲ್ ಆಗುತ್ತಿದೆ. ಆಂಟೋನಿ ಸಿನೆಮಾದ ಮೂಲಕ ಕಲ್ಯಾಣಿ ಒಳ್ಳೆಯ ಸಕ್ಸಸ್ ಪಡೆದುಕೊಂಡರು ಎನ್ನಬಹುದಾಗಿದೆ. ಈ ಸಿನೆಮಾ ಐನ್ ಸ್ಟಿನ್ ಮಿಡಿಯಾಮ ನೆಕ್ಸ್ ಟೆಲ್ ಸ್ಟುಡಿಯೋಸ್, ಅಲ್ಟ್ರಾ ಮಿಡೀಯಾ ಎಂಟರ್‍ ಟೈನ್ ಮೆಂಟ್ ಸಂಯುಕ್ತಾಶ್ರದಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರದರ್ಶನವಾಗುತ್ತಿದೆ.