ಅಡುಗೆ ರುಚಿಯಿಲ್ಲ ಎಂದು ಹೆತ್ತ ಅಮ್ಮನನ್ನೇ ಕೊಲೆಗೈದ ಪಾಪಿ ಮಗ, ಕತ್ತು ಕೊಯ್ದು ಹತ್ಯೆ……!

Follow Us :

ಕೋಪ, ವೈಶಮ್ಯ ಸೇರಿದಂತೆ ವಿವಿಧ ಕಾರಣಗಳಿಂದ ಹಲ್ಲೆಗಳು, ಕೊಲೆಗಳು ನಡೆಯುತ್ತಿರುತ್ತದೆ. ಊಟ ಸರಿಯಿಲ್ಲ ಎಂದು ಹೆತ್ತ ತಾಯಿಯನ್ನೇ ಹೆತ್ತ ಮಗನೇ ಕೊಲೆಗೈದ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆ ಜಿಲ್ಲೆಯ ಮುರ್ಬಾದ್ ತಾಲೂಕಿನ ವೇಲು ಗ್ರಾಮದ ಯುವಕ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾರೆ.

ಆರೋಪಿ ಯುವಕ ಆಗಾಗ ಮನೆಯಲ್ಲಿ ಪೋಷಕರೊಂದಿಗೆ ಜಗಳ ಆಡುತ್ತಿದ್ದ ಎನ್ನಲಾಗಿದೆ. ಕಳೆದ ಭಾನುವಾರ ಸಂಜೆ ತಾಯಿ ಮಗನಿಗೆ ಊಟ ಬಡಿಸಿದ್ದಾರೆ. ಈ ವೇಳೆ ಊಟ ತಿಂದ ಮಗ ರುಚಿಯಾಗಿಲ್ಲ ಎಂದು ತಾಯಿಯೊಂದಿಗೆ ಜಗಳ ಆಡಿದ್ದಾನೆ. ಇದರಿಂದ ಕೋಪಗೊಂಡ ಮಗ ಕುಡುಗೋಲಿನಿಂದ ತಾಯಿಯ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದಾಗಿ ಮೃತ ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನೂ ಈ ಘಟನೆ ನಡೆದ ಬಳಿ ಆರೋಪಿ ಸಹ ನಿದ್ರೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಬಗ್ಗೆ ಆರೋಪಿ ಯುವಕ ತನ್ನ ತಾಯಿಯೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರ ಸಹ ಊಟದ ವಿಚಾರಕ್ಕೆ ಜಗಳವಾಗಿದ್ದು, ಈ ಕೋಪದಲ್ಲಿ ಆರೋಪಿ ತಾಯಿಗೆ ಕುಡುಗೋಲಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆರೋಪಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಕಾರಣದಿಂದ ಆರೋಪಿಯನ್ನು ಇನ್ನೂ ಬಂಧನ ಮಾಡಿಲ್ಲ ಎಂದು ಹೇಳಲಾಗಿದೆ.