Film News

ಅನಾಥ ಮಕ್ಕಳೊಂದಿಗೆ ಸಿನೆಮಾ ವೀಕ್ಷಿಸಿದ ಸಿತಾರಾ, ಮಹೇಶ್ ಬಾಬು ಪುತ್ರಿಗೆ ಎಲ್ಲರಿಂದ ಪ್ರಶಂಸೆ……!

ತೆಲುಗು ಸ್ಟಾರ್‍ ನಟ ಪ್ರಿನ್ಸ್ ಮಹೇಶ್ ಬಾಬು ರವರ ಪುತ್ರಿ ಸಿತಾರಾ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಸಿತಾರಾ ಗೆ ದೊಡ್ಡದಾದ ಅಭಿಮಾನಿ ಬಳಗವೇ ಸೋಷಿಯಲ್ ಮಿಡಿಯಾದಲ್ಲಿದೆ. ಆಕೆಯ ಪೋಸ್ಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿರುತ್ತವೆ. ಇದೀಗ ಬಾಲ್ಯದಲ್ಲೇ ದೊಡ್ಡ ಮನಸ್ಸನ್ನು ತೋರಿಸಿದ್ದಾರೆ. ಅನಾಥ ಮಕ್ಕಳೊಂದಿಗೆ ಸಿನೆಮಾ ವೀಕ್ಷಣೆ ಮಾಡಿದ್ದು, ಈ ಸಂಬಂಧ ಆಕೆಯನ್ನು ಎಲ್ಲರೂ ಪ್ರಶಂಸೆ ಮಾಡುತ್ತಿದ್ದಾರೆ.

ಸ್ಟಾರ್‍ ಕಿಡ್ ಸಿತಾರಾ ಈಗಾಗಲೇ ಇಂಟರ್‍ ನೆಟ್ ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ತಂದೆಯೊಂದಿಗೆ ಸರ್ಕಾರುವಾರಿ ಪಾಟ ಸಿನೆಮಾದಲ್ಲಿ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸ್ಟಾರ್‍ ನಟಿಯರಿಗಿಂತ ಕಡಿಮೆ ಇಲ್ಲ ಎಂಬಂತೆ ಪಾಪ್ಯುಲರ್‍ ಆಗಿದ್ದಾರೆ. ರೀಲ್ಸ್, ಫನ್ನಿ ವಿಡಿಯೋಗಳು, ಕ್ಯೂಟ್ ಪೊಟೋಗಳ ಮೂಲಕ ಫೇಂ ಪಡೆದುಕೊಂಡಿದ್ದಾರೆ. ಆಕೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೊಬ್ಬರಿ ಹತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಒಳ್ಳೆಯ ಹೆಸರನ್ನು ಗಳಿಸಲು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆಗಾಗ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರನ್ನು ಮೆಚ್ಚಿಸುತ್ತಿರುತ್ತಾರೆ.

ಇನ್ನೂ ಮಹೇಶ್ ಬಾಬು ಮುದ್ದಿನ ಮಗಳು ಸಿತಾರಾ ತನ್ನ ಹುಟ್ಟುಹಬ್ಬದ ಸಮಯದಲ್ಲಿ ಅನಾಥ ಮಕ್ಕಳಿಗೆ ಸೈಕಲ್ ಗಳನ್ನು ವಿತರಣೆ ಮಾಡಿದ್ದ, ತನ್ನ ಮೊದಲ ಜಾಹಿರಾತು ಮೂಲಕ ಬಂದ ರೆನ್ಯುಮರೇಷನ್ ಸಹ ಚಾರಿಟಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದ್ದರು. ಇದೀಗ ಮತ್ತೊಮ್ಮೆ ತನ್ನ ಒಳ್ಳೆಯ ಮನಸ್ಸನ್ನು ಸಾರಿದ್ದಾರೆ. ತಂದೆ ಮಹೇಶ್ ಬಾಬು ಅಭಿನಯದ ಲೇಟೆಸ್ಟ್ ಮೂವಿ ಗುಂಟೂರು ಖಾರಂ ಸಿನೆಮಾವನ್ನು ಆಕೆ ಅನಾಥ ಮಕ್ಕಳೊಂದಿಗೆ ವೀಕ್ಷಣೆ ಮಾಡಿದ್ದಾರೆ. ಚೀರ್ಸ್ ಫೌಂಡೇಷನ್ ನ 40 ಮಂದಿ ಅನಾಥ ಮಕ್ಕಳೊಂದಿಗೆ AMB ಸಿನೆಮಾಸ್ ನಲ್ಲಿ ಗುಂಟೂರು ಖಾರಂ ಸಿನೆಮಾ ವೀಕ್ಷಣೆ ಮಾಡಿದ್ದಾರೆ. AMB ಫೌಂಡೇಷನ್ ವತಿಯಿಂದ ಅನಾಥ ಮಕ್ಕಳಿಗಾಗಿ ಸ್ಪೇಷಲ್ ಶೋ ಸಹ ಏರ್ಪಡಿಸಲಾಗಿತ್ತು ಎನ್ನಲಾಗಿದೆ.

ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಮಹೇಶ್ ಬಾಬು ಪುತ್ರಿಯಾದರೂ ಸಹ ಯಾವುದೇ ರೀತಿಯ ಗರ್ವ ಪಡದೇ ಅನಾಥ ಮಕ್ಕಳೊಂದಿಗೆ ಸಿನೆಮಾ ವೀಕ್ಷಣೆ ಮಾಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Most Popular

To Top