ಭಯಂಕರವಾದ ವ್ಯಾಧಿಯಿಂದ ಬಳಲಿದ್ದರಂತೆ ರಾಘವ ಲಾರೆನ್ಸ್, ವೈರಲ್ ಆದ ಸುದ್ದಿ…..!

Follow Us :

ಸೌತ್ ಸಿನಿರಂಗದ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟನಾಗಿ, ಕೊರಿಯೋಗ್ರಾಫರ್‍ ಆಗಿ ನಿರ್ದೇಶಕನಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ರಾಘವ ಲಾರೆನ್ಸ್ ರವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಟನಾಗಿ, ಕೊರಿಯೋಗ್ರಾಫರ್‍ ಆಗಿ, ನಿರ್ದೇಶಕನಾಗಿ, ನಿರ್ಮಪಕನಾಗಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ರಾಘವ ಲಾರೆನ್ಸ್ ಆರೋಗ್ಯದ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದ್ದು, ರಾಘವ ಲಾರೆನ್ಸ್ ಭಯಂಕರವಾದ ವ್ಯಾಧಿಯಿಂದ ಬಳಲಿದ್ದರಂತೆ.

ಸಿನಿರಂಗದಲ್ಲಿ ಇರುವಂತಹ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್‍ ಗಳಲ್ಲಿ ರಾಘವ ಲಾರೆನ್ಸ್ ಸಹ ಒಬ್ಬರಾಗಿದ್ದಾರೆ ಎನ್ನಬಹುದಾಗಿದೆ. ಸಿನೆಮಾಗಳ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಹ ಪಡೆದುಕೊಂಡಿದ್ದಾರೆ. ತನ್ನ ಟ್ರಸ್ಟ್ ಮೂಲಕ ಅನೇಕ ಪುಟಾಣಿಗಳ ಹಾರ್ಟ್ ಆಪರೇಷನ್ ಮಾಡಿಸಿ, ಅನೇಕರಿಗೆ ಹೊಸ ಜನ್ಮ ಕೊಟ್ಟಿದ್ದಾರೆ. ಇದರ ಜೊತೆಗೆ ಓದಬೇಕೆಂಬ ಹಂಬಲ, ಪ್ರತಿಭೆಯಿದ್ದು, ಹಣಕಾಸಿನ ಸಮಸ್ಯೆಯಿರುವಂತಹ ಬಡ ಮಕ್ಕಳನ್ನು ಸಹ ಓದಿಸುತ್ತಾ ಅವರ ಜೀವನ ರೂಪಿಸಿಕೊಳ್ಳಲು ನೆರವಾಗುತ್ತಿದ್ದಾರೆ. ರಾಘವ ಲಾರೆನ್ಸ್ ಬಾಲ್ಯದಲ್ಲಿ ಮಾರಕ ವ್ಯಾಧಿಯಿಂದ ಬಳಲುತ್ತಿದ್ದರಂತೆ. ಬಳಿಕ ರಾಘವೇಂದ್ರ ಲಾರೆನ್ಸ್ ರಾಘವೇಂದ್ರ ಸ್ವಾಮಿಯ ಕೃಪೆಯಿಂದ ತಮ್ಮ ವ್ಯಾಧಿಯಿಂದ ಗುಣಮುಖರಾದರು ಎಂಬ ಸುದ್ದಿ ಇದೀಗ ವೈರಲ್ ಆಗಿದೆ.

ನಟ ರಾಘವ ಲಾರೆನ್ಸ್ ರಾಘವೇಂದ್ರಸ್ವಾಮಿಯನ್ನು ತುಂಬಾ ಆರಾಧಿಸುತ್ತಾರೆ. ರಾಘವ ಎಂಬ ಹೆಸರು ಬರಲು ಸಹ ಒಂದು ಕಾರಣವಿದೆ ಎನ್ನಲಾಗಿದೆ. ರಾಘವ ಲಾರೆನ್ಸ್ ಬಾಲ್ಯದಲ್ಲಿ ಬ್ರೈನ್ ಟ್ಯೂಮರ್‍ ವ್ಯಾಧಿಯಿಂದ ಬಳಲುತ್ತಿದ್ದರಂತೆ. ಈ ವ್ಯಾಧಿಗೆ ಗುರಿಯಾದ ಲಾರೆನ್ಸ್ ರನ್ನು ಅವರ ತಾಯಿ ಅನೇಕ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಸಹ ವ್ಯಾಧಿ ವಾಸಿಯಾಗಿರಲಿಲ್ಲವಂತೆ. ಬಳಿಕ ಆಕೆ ಶ್ರೀ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿ ಪೂಜೆ ಮಾಡುತ್ತಾ, ಮಗನಿಗೆ ಚಿಕಿತ್ಸೆ ಕೊಡಿಸಿದ್ದರಂತೆ. ಬಳಿಕ ಲಾರೆನ್ಸ್ ರವರು ಆ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದರಂತೆ. ಬಳಿಕ ಲಾರೆನ್ಸ್ ಹೆಸರು ರಾಘವ ಲಾರೆನ್ಸ್ ಆಗಿ ಬದಲಾಯ್ತು ಎನ್ನಲಾಗಿದೆ.

ಬಳಿಕ ರಾಘವ ಲಾರೆನ್ಸ್ ತನ್ನಲ್ಲಿನ ಟ್ಯಾಲೆಂಟ್ ಮೂಲಕ ಸಿನಿರಂಗದಲ್ಲಿ ತನ್ನದೇ ಆದ ಮುದ್ರೆಯನ್ನು ಹಾಕಿಕೊಂಡರು. ನನ್ನ ತಾಯಿಯಂತೆ ಬೇರೆ ಯಾವುದೇ ತಾಯಿ ಆ ರೀತಿಯಲ್ಲಿ ನೋವು ಪಡಬಾರದೆಂದು ಲಾರೆನ್ಸ್ ತನ್ನ ಟ್ರಸ್ಟ್ ಮೂಲಕ ಪುಟಾಣಿಗಳ ಟ್ರೀಟ್ ಮೆಂಟ್ ಗಾಗಿ ಶ್ರಮಿಸುತ್ತಿದ್ದಾರೆ.