ಬಾಲಿವುಡ್ ನಲ್ಲಿ ತುಂಬಾನೆ ಬೋಲ್ಡ್ ಆದ ರಶ್ಮಿಕಾ, ಅನಿಮಲ್ ಸಿನೆಮಾದಲ್ಲಿ ಮಿತಿಮೀರಿದ ರಶ್ಮಿಕಾ ಬೋಲ್ಡ್ ದೃಶ್ಯಗಳು…..!

Follow Us :

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಸ್ಟಾರ್‍ ನಟ ರಣಬೀರ್‍ ಕಪೂರ್‍ ಜೊತೆಗೆ ಯಾನಿಮಲ್ ಸಿನೆಮಾದಲ್ಲಿ ಕೆಲವೊಂದು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದು, ಈ ದೃಶ್ಯಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಸಿನೆಮಾಗಳಲ್ಲಿ ಸಾಮಾನ್ಯವಾಗಿ ಕೆಲವೊಂದು ಬೋಲ್ಡ್ ದೃಸ್ಯಗಳಿರುತ್ತವೆ. ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಅದನ್ನು ತಿಳಿಯಬಹುದಾಗಿದೆ. ಸದ್ಯ ರಣಬೀರ್‍ ಹಾಗೂ ರಶ್ಮಿಕಾ ಕಾಂಬಿನೇಷನ್ ನಲ್ಲಿ ಸೆಟ್ಟೇರಿದಂತಹ ಅನಿಮಲ್ ಸಿನೆಮಾವನ್ನು ಸಹ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ರಶ್ಮಿಕಾ ಕೆಲವೊಂದು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ರಶ್ಮಿಕಾ ರವರ ಕೆಲವೊಂದು ಬೋಲ್ಡ್ ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಈ ದೃಶ್ಯಗಳಿಗೆ ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಜೊತೆಗೆ ಸಖತ್ ಟ್ರೋಲ್ ಸಹ ಮಾಡುತ್ತಿದ್ದಾರೆ.

ಕನ್ನಡ ಸಿನೆಮಾಗಳಲ್ಲಿ ಸಿಂಪಲ್ ಆಗಿಯೇ ಕಾಣಿಸಿಕೊಂಡ ರಶ್ಮಿಕಾ ಬಳಿಕ ಟಾಲಿವುಡ್ ನಲ್ಲಿ ನಟಿಸಲು ಶುರು ಮಾಡಿದ ಬಳಿಕ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡರು. ಗೀತಾ ಗೋವಿಂದಂ, ಡಿಯರ್‍ ಕಾಮ್ರೇಡ್ ಸಿನೆಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳೂ ಸಹ ಇದ್ದರು. ಇದೀಗ ಅನಿಮಲ್ ಸಿನೆಮಾದಲ್ಲೂ ಸಹ ರಶ್ಮಿಕಾ ಹಾಟ್ ಆಗಿ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ಟ್ರೈಲರ್‍ ನಲ್ಲಿ ಲಿಪ್ ಲಾಕ್ ದೃಶ್ಯಗಳಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ಸಿನೆಮಾ ಸಹ ಬಿಡುಗಡೆಯಾಗಿದ್ದು, ಆಕೆ ಬೋಲ್ಡ್ ದೃಶ್ಯಗಳಲ್ಲಿ ಸಹ ನಟಿಸಿದ್ದಾರೆ. ಈ ಸಂಬಂಧ ಕೆಲವೊಂದು ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಆಗಿದ್ದು, ಭಾರಿ ವೈರಲ್ ಆಗುತ್ತಿದೆ.

ಈ ಸಿನೆಮಾದಲ್ಲಿ ರಣಬೀರ್‍ ಪತ್ನಿಯಾಗಿ ರಶ್ಮಿಕಾ ನಟಿಸಿದ್ದು, ಕೆಲವೊಂದು ದೃಶ್ಯಗಳಲ್ಲಿ ವಿವಸ್ತ್ರಳಾಗಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಟ್ರೋಲ್ ಮಾಡುತ್ತಿದ್ದರೂ ಸಹ ಈ ಕುರಿತು ರಶ್ಮಿಕಾ ತಲೆಕೆಡಿಸಿಕೊಂಡಿಲ್ಲ ಎನ್ನಬಹುದಾಗಿದೆ. ಇನ್ನೂ ಅನಿಮಲ್ ಸಿನೆಮಾ ಬಿಡುಗಡೆಯಾದ ಮೊದಲನೇ ದಿನವೇ 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶೀಘ್ರದಲ್ಲೇ ಈ ಸಿನೆಮಾ ಮೂನ್ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಸಿನೆಮಾ ತಜ್ಞರು ಅಂದಾಜಿಸಿದ್ದಾರೆ.