ತನ್ನ ಮನೆಯಲ್ಲಿ ಕೆಲಸ ಮಾಡುವಂತಹ ಹುಡುಗಿಗೆ ಹೆಲ್ಪ್ ಮಾಡಿದ ಬನ್ನಿ, ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಲು ಹೆಲ್ಪ್…!

ಟಾಲಿವುಡ್ ಸಿನಿರಂಗದ ಸ್ಟಾರ್‍ ನಟ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಮೂಲಕ ಇಡೀ ವಿಶ್ವವನ್ನೇ ಸೆಳೆದಿದ್ದಾರೆ ಎನ್ನಬಹುದು. ಸದ್ಯ ಪುಷ್ಪಾ-2 ಸಿನೆಮಾಗಾಗಿ ಇಡೀ ವಿಶ್ವವೇ ಕಾಯುತ್ತಿದೆ. ಸಿನೆಮಾದ ಶೂಟಿಂಗ್ ಸಹ ಭರದಿಂದ…

ಟಾಲಿವುಡ್ ಸಿನಿರಂಗದ ಸ್ಟಾರ್‍ ನಟ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಮೂಲಕ ಇಡೀ ವಿಶ್ವವನ್ನೇ ಸೆಳೆದಿದ್ದಾರೆ ಎನ್ನಬಹುದು. ಸದ್ಯ ಪುಷ್ಪಾ-2 ಸಿನೆಮಾಗಾಗಿ ಇಡೀ ವಿಶ್ವವೇ ಕಾಯುತ್ತಿದೆ. ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ನ.30 ರಂದು ಅಲ್ಲು ಅರ್ಜುನ್ ತೆಲಂಗಾಣ ವಿಧಾನಸಭಾ ಚುಣಾವಣಾ ನಿಮಿತ್ತ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಸರಳತೆ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಇದೀಗ ತನ್ನ ಮನೆಯಲ್ಲಿ ಕೆಲಸ ಮಾಡುವ ಯುವತಿಯ ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್ ಗಳನ್ನು ಹೆಚ್ಚಿಸಲು ಸಹಾಯ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅವಾರ್ಡ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರಿಂದ ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡರು. ರಾಷ್ಟ್ರೀಯ ಉತ್ತಮ ನಟ ಎಂಬ ಅವಾರ್ಡ್ ಸಹ ಪಡೆದುಕೊಂಡ ತೆಲುಗು ನಟನಾಗಿ ಫೇಂ ಪಡೆದುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಕೆಲವೊಂದು ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಕೂಲ್ ಆಟಿಟ್ಯೂಡ್ ನಲ್ಲೇ ಇರುತ್ತಾರೆ. ಇದೀಗ ಅಲ್ಲು ಅರ್ಜುನ್ ಮತ್ತೊಮ್ಮೆ ಒಳ್ಳೆಯ ಮನಸ್ಸನ್ನು ಪ್ರದರ್ಶನ ಮಾಡಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡುವಂತಹ ಯುವತಿಗೆ ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್ ಏರಿಸಲು ಸಹಾಯ ಮಾಡಿದ್ದಾರೆ. ಯಾವುದೇ ರೀತಿಯ ಗರ್ವ ತೋರದೆ ಆಕೆಗಾಗಿ ವೀಡಿಯೋ ಮಾಡಿದ್ದಾರೆ.

ಇನ್ನೂ ವಿಡಿಯೋದಲ್ಲಿ ನಿನಗೆ ಎಷ್ಟು ಮಂದಿ ಫಾಲೋವರ್ಸ್ ಬೇಕು, ಈಗ ಎಷ್ಟು ಇದ್ದಾರೆ ಎಂದು ಬನ್ನಿ ಕೇಳಿದ್ದಾರೆ. ಅದಕ್ಕೆ ಆಕೆ ಸದ್ಯ 13k ಫಾಲೋವರ್ಸ್ ಇದ್ದಾರೆ ಎಂದಿದ್ದಾರೆ. 20 ಬೇಕಾ 30 ಸಾವಿರ ಬಂದರೇ ಸಾಕು ಎಂದು ಆಕೆ ಹೇಳಿದ್ದು, ಅದಕ್ಕೆ ಒಕೆ 30k ಫಿಕ್ಸ್ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ಪೊಟೋ ಸಖತ್ ವೈರಲ್ ಆಗಿದೆ. ಇನ್ನೂ ತಾವು ಅಭಿಮಾನಿಸುವ ನಟ ಹೇಳಿದರೇ ಅವರ ಫ್ಯಾನ್ಸ್ ಸುಮ್ಮನಿರುತ್ತಾರೆಯೇ ಕೂಡಲೇ ಆಕೆಯ ಇನ್ಸ್ಟಾ ಖಾತೆಯನ್ನು ಫಾಲೋ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.