News

ಸಿಎಂ ಸಿದ್ದರಾಮಯ್ಯ ರಾಮ ಭಕ್ತರಲ್ಲ, ರಹೀಂ ಭಕ್ತ ಎಂದ ಸಂಸದ ಪ್ರತಾಪ್ ಸಿಂಹ, ಯಾಕೆ ಗೊತ್ತಾ?

ಸದ್ಯ ಇಡೀ ದೇಶವೇ ಜ.22 ರ ಐತಿಹಾಸಿಕ ದಿನಕ್ಕೆ ಕಾಯುತ್ತಿದ್ದಾರೆ. ಜ.22 ರಂದು ದೇಶ ಕೋಟ್ಯಂತರ ಹಿಂದೂಗಳ ಕನಸಾದ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದೆ. ರಾಮ ಮಂದಿರ ಉದ್ಘಾಟನೆಗೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಿಲ್ಲ. ಈ ಬಗ್ಗೆ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ್ದು, ಸಿದ್ದರಾಮಯ್ಯ ರಾಮ ಭಕ್ತರಲ್ಲ, ಅವರು ರಹೀಂ ಭಕ್ತ ಎಂದು ಪರೋಕ್ಷವಾಗಿ ಆಕ್ರೋಷ ಹೊರಹಾಕಿದ್ದಾರೆ.

ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯ್ಲಲಿ ಅನೇಕ ರಾಜ್ಯಗಳಲ್ಲಿ ರಜೆ ನೀಡಿದೆ. ಆದರೆ ತಮ್ಮ ಹೆಸರಿನಲ್ಲಿ ರಾಮ ಎಂದು ಇಟ್ಟುಕೊಂಡು ರಾಮನ ಬಗ್ಗೆ ಶ್ರದ್ದೆ ಇಲ್ಲದವರು ರಜೆ ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ರವರ ನಡೆಯ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ರಾಮನ ಪ್ರತಿಷ್ಟಾಪನಾ ಕ್ಷಣವನ್ನು ಇಡೀ ದೇಶದ ವಾಸಿಗಳು ಎದುರು ನೋಡುತ್ತಿದ್ದಾರೆ. ದೇಶದಲ್ಲಿ ಒಳ್ಳೆಯ ವಾತಾವರಣ ಸಹ ನಿರ್ಮಾಣವಾಗಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಜನರ ಭಾವನೆಗಳಿಗೆ ಸ್ಪಂಧನೆ ನೀಡುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯವಾಗಿದೆ ಎಂದಿದ್ದಾರೆ.

ಇನ್ನೂ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟೆ ಮಾಡುತ್ತಿರುವುದು ಹಿಂದೂಗಳಿಗೆ ಅತೀವ ಸಂತಸ ತಂದಿದೆ. ಇಡೀ ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಮ್ಮ ರಾಜ್ಯದಲ್ಲಂತೂ ಸಂತಸ ಹಂಚಿಕೊಳ್ಳಲು ಬ್ಯಾನರ್‍ ಹಾಕುವ ವಿಚಾರದಲ್ಲೂ ಸಹ ಕೆಲವೊಂದು ಕಡೆ ಸಮಸ್ಯೆಯಾಗುತ್ತಿದೆ. ಮೈಸೂರು, ಕೊಡುಗು ಜಿಲ್ಲೆಗಳಲ್ಲಿ ಎಲ್ಲಾ ಕಡೆ ಬ್ಯಾನರ್‍ ಹಾಕಲು ಅವಕಾಶ ನೀಡಬೇಕು ಎಂದು ಪೊಲೀಸರಿಗೂ ಸಹ ಹೇಳಿದ್ದೇನೆ. ಇನ್ನೂ ರಾಮನ ಮೂರ್ತಿಯನ್ನು ಕೆತ್ತಲು ಕಲ್ಲು ತೆಗೆದಂತಹ ಜಾಗದಲ್ಲೂ ಸಹ ವಿಶೇಷ ಪೂಜೆ ನಡೆಸಲಾಗುತ್ತದೆ. ಅದೇ ಜಾಗದಲ್ಲಿ ರಾಮನ ದೇವಾಲಯ ನಿರ್ಮಾಣ ಮಾಡಲು ಸಹ ಜಿ.ಟಿ.ದೇವೆಗೌಡರವರು ತಿರ್ಮಾನ ಮಾಡಿದ್ದಾರೆ. ಇನ್ನೂ ರಾಮಭಕ್ತರು ಅಧಿಕಾರ ಮಾಡುತ್ತಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ಮಾತ್ರ ರಜೆ ನೀಡಿಲ್ಲ. ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮನಿದ್ದರೂ ಸಹ ಅವರು ರಹೀಂ ಭಕ್ತರು ಎಂದು ಲೇವಡಿ ಮಾಡಿದ್ದಾರೆ.

Most Popular

To Top