ಸಲಾರ್ ಸ್ಟೋರಿ ಬಗ್ಗೆ ಹಿಂಟ್ ಕೊಟ್ಟ ಪ್ರಶಾಂತ್ ನೀಲ್, ಮತಷ್ಟು ಹೈಪ್ ಹೆಚ್ಚಿಸಿದ ನೀಲ್ ಹಿಂಟ್…..!

ಕೆಜಿಎಫ್ ಸಿನೆಮಾದ ಮೂಲಕ ನ್ಯಾಷನಲ್ ಫೇಮ್ ಡೈರೆಕ್ಟರ್‍ ಎನ್ನಿಸಿಕೊಂಡ ಸ್ಯಾಂಡಲ್ ವುಡ್ ನಿರ್ದೇಶ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್‍…

ಕೆಜಿಎಫ್ ಸಿನೆಮಾದ ಮೂಲಕ ನ್ಯಾಷನಲ್ ಫೇಮ್ ಡೈರೆಕ್ಟರ್‍ ಎನ್ನಿಸಿಕೊಂಡ ಸ್ಯಾಂಡಲ್ ವುಡ್ ನಿರ್ದೇಶ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್‍ ಸಿನೆಮಾ ಈಗಾಗಲೇ ದೊಡ್ಡ ರೇಂಜ್ ನಲ್ಲೇ ಹವಾ ಸೃಷ್ಟಿಸಿದೆ. ಇದೀಗ ನಿರ್ದೇಶಕ ಪ್ರಶಾಂತ ನೀಲ್ ಸಿನೆಮಾದ ಸ್ಟೋರಿಯ ಬಗ್ಗೆ ಹಿಂಟ್ ನೀಡಿದ್ದು, ಸಿನೆಮಾದ ಮೇಲಿನ ಹೈಪ್ ಮತಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಬಾಲಿವುಡ್ ನ್ಯೂಸ್ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಸಲಾರ್‍ ಸಿನೆಮಾದ ಸ್ಟೋರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸಲಾರ್‍ ಸಿನೆಮಾ ಆತ್ಮೀಯ ಇಬ್ಬರು ಗೆಳೆಯರು ಬದ್ದ ವೈರಿಗಳಾಗುವಂತಹ ಕಥೆಯಾಗಿದೆ. ಈ ಸಿನೆಮಾದಲ್ಲಿ ಸ್ನೇಹಾ ಎಂಬುವುದು ಮೈನ್ ಎಮೋಷನ್ ಆಗಿದೆ. ಇದೀಗ ಸಲಾರ್‍ ಪಾರ್ಟ್-1 ರಲ್ಲಿ ಅರ್ಧ ಕಥೆಯನ್ನು ಮಾತ್ರ ಹೇಳುತ್ತಿದ್ದೇವೆ. ಇಬ್ಬರೂ ಸ್ನೇಹಿತರ ಜರ್ನಿಯನ್ನೆ ಎರಡು ಭಾಗಗಳ ಸಿನೆಮಾದಲ್ಲಿ ತೋರಿಸಲಿದ್ದೇವೆ. ಡಿ.1 ರಂದು ಟ್ರೈಲರ್‍ ಬಿಡುಗಡೆಯಾಗಲಿದೆ. ಸಲಾರ್‍ ಸಿನೆಮಾ ಹಾಗೂ ಕೆಜಿಎಫ್ ಸಿನೆಮಾಗೂ ಯಾವುದೇ ಹೋಲಿಕೆ ಇಲ್ಲ. ಸ್ಟೋರಿ ಸಹ ವಿಭಿನ್ನವಾಗಿರುತ್ತದೆ. ಸಲಾರ್‍-1 ಬಿಡುಗಡೆಯಾದ ಬಳಿಕ ಕೆಲವು ದಿನಗಳ ಗ್ಯಾಪ್ ಕೊಟ್ಟು ಸಲಾರ್‍-2 ಶೂಟಿಂಗ್ ಪ್ರಾರಂಭಿಸುತ್ತೇವೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಇನ್ನೂ ಪ್ರಶಾಂತ್ ನೀಲ್ ಹಂಚಿಕೊಂಡ ಈ ಮಾಹಿತಿ ಕೇಳಿದ ಅಭಿಮಾನಿಗಳು ಸಲಾರ್‍ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಬೆಳೆಸಿಕೊಂಡಿದ್ದಾರೆ. ಸಿನೆಮಾ ನೋಡಲು ಈಗರ್‍ ಆಗಿ ಕಾಯುತ್ತಿದ್ದಾರೆ. ಈ ಹಿಂದೆ ಸಲಾರ್‍ ಸಿನೆಮಾ ಕನ್ನಡದ ಉಗ್ರಂ ಸಿನೆಮಾದ ರಿಮೇಕ್ ಎಂದು ಹೇಳಲಾಗಿತ್ತು. ಉಗ್ರಂ ಸಿನೆಮಾವನ್ನು ಸಹ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರಿಂದ ಉಗ್ರಂ ಸಿನೆಮಾದ ರಿಮೇಕ್ ಎಂದು ಹೇಳಲಾಗಿತ್ತು. ಈ ಸಿನೆಮಾದಲ್ಲೂ ಸಹ ಹಿರೋ ಶ್ರೀಮುರಳಿ ಹಾಗೂ ತಿಲಕ್ ಮೊದಲಿಗೆ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಬದ್ದ ವೈರಿಗಳಾಗುತ್ತಾರೆ. ಇದೀಗ ಪ್ರಶಾಂತ್ ನೀಲ್ ಸಲಾರ್‍ ಸಿನೆಮಾದ ಸ್ಟೋರಿಯ ಬಗ್ಗೆ ಒನ್ ಲೈನ್ ಹೇಳಿಕೆ ನೀಡಿದ್ದು, ಉಗ್ರಂ ಸಿನೆಮಾದ ರಿಮೇಕ್ ಎಂಬ ವಾದಕ್ಕೆ ಮತಷ್ಟು ಬಲ ತಂದಂತಾಗಿದೆ.

ಇನ್ನೂ ಸಲಾರ್‍ ಸಿನೆಮಾ ಡಿ.22 ರಂದು ಬಿಡುಗಡೆಯಾಗಲಿದೆ. ಸಿನೆಮಾದಲ್ಲಿ ನಾಯಕನಾಗಿ ಪ್ರಭಾಸ್ ನಟಿಸಲಿದ್ದು, ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ಅವರ ಜೊತೆಗೆ ಸುಕುಮಾರ್‍, ಜಗಪತಿ ಬಾಬು, ಕನ್ನಡಿಗ ಮಧು ಗುರುಸ್ವಾಮಿ, ಬಾಲಿವುಡ್ ನಟ ಟೀನು ಆನಂದ್ ಸೇರಿದಂತೆ ಅನೇಕ ಸ್ಟಾರ್‍ ಗಳು ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದ್ದಾರೆ.