ಬೆಂಗಳೂರಿನಲ್ಲಿ ರಾಮ್ ಚರಣ್ ಕುಟುಂಬ, ಸಂಕ್ರಾಂತಿ ಆಚರಣೆಗೆ ಕ್ಲೀನ್ ಕಾರಾ ಜೊತೆಗೆ ಆಗಮಿಸಿದ ದಂಪತಿ…..!

Follow Us :

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಸದ್ಯ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರಾಮ್ ಚರಣ್ ಹಾಗೂ ಉಪಾಸನಾ ದಂಪಂತಿಗೆ ಮುದ್ದಿನ ಹೆಣ್ಣು ಮಗಳು ಜನಿಸಿದ್ದು, ಆಕೆಗೆ ಕ್ಲೀನ್ ಕಾರಾ ಎಂದು ಹೆಸರನ್ನಿಟ್ಟಿದ್ದಾರೆ. ಇದೀಗ ರಾಮ್ ಚರಣ್ ತನ್ನ ಪತ್ನಿ ಹಾಗೂ ಮಗಳೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಅವರು ತಮ್ಮ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ತೋಟದ ಮನೆಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.

ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಇತ್ತೀಚಿಗಷ್ಟೆ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದರು. ಗ್ಲೋಬಲ್ ಸ್ಟಾರ್‍ ಆದರೂ ಸಹ ಆತ ಮೊದಲಿನಂತೆ ಇದ್ದಾರೆ. ಸಿಂಪಲ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಬೆಂಗಳೂರಿನಲ್ಲಿ ರಾಮ್ ಚರಣ್ ತಮ್ಮ ಫಾರಂ ಹೌಸ್ ಹೊಂದಿದ್ದು, ಆಗಾಗ ಭೇಟಿ ನೀಡುತ್ತಿರುತ್ತಾರೆ. ಆತ ಬೆಂಗಳೂರಿಗೆ ಬರಬೇಕು ಎಂದಾಗ ದೇವನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ತಂಗುತ್ತಾರೆ. ಅಲ್ಲಿಯೇ ಇದ್ದು ಬೆಳಗ್ಗೆ ಸೈಕ್ಲೀಂಗ್ ವಾಕಿಂಗ್ ಸಹ ಮಾಡುತ್ತಾರೆ. ರಾಮ್ ಚರಣ್ ಸಹೋದರಿಯ ಮದುವೆ ಸಹ ಇಲ್ಲಿಯೇ ನಡೆದಿತ್ತು. ಇಡಿ ಮೆಗಾ ಕುಟುಂಬ ಎರಡು ಮೂರು ದಿನ ದೇವನಹಳ್ಳಿಯಲ್ಲೇ ತಂಗಿತ್ತು. ಈ ಫಾರ್ಮ್ ಹೌಸ್ ಎಂದರೇ ಮೆಗಾ ಕುಟುಂಬಕ್ಕೆ ತುಂಬಾನೆ ವಿಶೇಷ ಎಂದು ಹೇಳಬಹುದಾಗಿದೆ. ಇನ್ನೂ ಮೆಗಾ ಕುಟುಂಬದಲ್ಲಿ ಏನಾದರೂ ಸ್ಪೇಷಲ್ ಈವೆಂಟ್, ಸಂಭ್ರಮ ಮಾಡಬೇಕು ಎಂದಾಗ ಇದೇ ಫಾರ್ಮ್ ಹೌಸ್ ಗೆ ಬರುತ್ತಾರೆ.

ಇನ್ನೂ ರಾಮ್ ಚರಣ್ ಹಾಗೂ ತನ್ನ ಕುಟುಂಬ ಇದೀಗ ಸಂಕ್ರಾಂತಿ ಹಬ್ಬವನ್ನು ಆಚರಿಸಲು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ದೇವನಹಳ್ಳಿ ಸಮೀಪದ ಈ ಫಾರ್ಮ್ ಹೌಸ್ ನಲ್ಲಿ ರಾಮ್ ಚರಣ್, ಉಪಾಸನಾ ಹಾಗೂ ಮಗಳು ಕಾರಾ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಎನ್ನಲಾಗಿದೆ. ಹಳ್ಳಿ ವಾತಾವರಣ ಇರುವ ಕಾರಣದಿಂದ ಚರಣ್ ಕುಟುಂಬ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ. ಇದೀಗ ರಾಮ್ ಚರಣ್ ರವರು ಹೈದರಾಬಾದ್ ನಿಂದ ಬೆಂಗಳೂರಿಗೆ ಬರುವಾಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಸದ್ಯ ರಾಮ್ ಚರಣ್ ಸ್ಟಾರ್‍ ನಿರ್ದೇಶಕ ಶಂಕರ್‍ ರವರ ನಿರ್ದೇಶನದಲ್ಲಿ ಗೇಮ್ ಚೇಂಜರ್‍ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಯಿದೆ. ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಿದ್ದಾರೆ.