News

ಹಿಂದೂ ಸಾಧುಗಳ ಮೇಲೆ ಭೀಕರ ಹಲ್ಲೆ, ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ, ವಿಶ್ವ ಹಿಂದು ಪರಿಷತ್ ಗರಂ…..!

ಇತ್ತಿಚೀಗಷ್ಟೆ ಪಲ್ವಾರ್‍ ಸಾಧುಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಇನ್ನೂ ಹಸಿಯಾಗಿರುವಾಗಲೇ ಇದೀಗ ಮತ್ತೆ ಮೂರು ಮಂದಿ ಸಾಧುಗಳ ಮೇಲೆ ಭೀಕರವಾದ ಹಲ್ಲೆ ನಡೆದಿದೆ. ಈ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಬಳಿ ನಡೆದಿದೆ. ಗಂಗಾಸಾಗರಕ್ಕೆ ತೆರಳುತ್ತಿದ್ದಂತಹ ವೇಳೆ ಕೆಲ ಸಾರ್ವಜನಿಕರು ಸಾಧುಗಳ ಮೇಲೆ ಏಕಾಏಕಿ ಧಾಳಿ ನಡೆಸಿದ್ದು, ಈ ಧಾಳಿಯಲ್ಲಿ ಮೂರು ಮಂದಿ ಸಾಧುಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೃತ್ಯವನ್ನು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.

ಪಶ್ಚಿಮ ಬಂಗಾಳದ ಪುರುಲಿಯಾ ಬಳಿ ಈ ಧಾರುಣ ಘಟನೆಯಲ್ಲಿ ಮೂರು ಮಂದಿ ಸಾಧುಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಧುಗಳ ಮೇಲೆ ದಾಳಿ ನಡೆಸಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ತುಂಬಾನೆ ಹದೆಗಟ್ಟಿದ್ದು, ಗೂಂಡಾ ವರ್ತನೆಗಳು ಹೆಚ್ಚಾಗಿದೆ. ಅಲ್ಲಿನ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಬಿಜೆಪಿ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದ ಗೂಂಡಾಗಳು ಇದೀಗ ಹಿಂದೂ ಸಾಧು ಸಂತರನ್ನು ಟಾರ್ಗೆಟ್ ಮಾಡಿದೆ ಎಂದು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಆಕ್ರೋಷ ಹೊರಹಾಕಿದ್ದು, ಪಶ್ಚಿಮ ಬಂಗಾಳದ ಸರ್ಕಾರದ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಕೋರಬೇಕೆಂದು ಒತ್ತಾಯ ಸಹ ಮಾಡುತ್ತಿದ್ದಾರೆ.

ಇನ್ನೂ ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಘಟನೆಯ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ. ಟಿಎಂಸಿ ಗೂಂಡಾಗಳು ಹಿಂದೂ ಸಾಧು ಸಂತರ ಮೇಲೆ ದಾಳಿ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಸಾಧುಗಳ ಮೇಲಿನ ಹಲ್ಲೆಯಿಂದ ತೀವ್ರ ನೋವಾಗಿದೆ. ಸಮಸ್ತ ಹಿಂದೂಗಳಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ದಾಳಿಗೊಳಗಾದ ಸಾಧುಗಳು ಪುರುಲಿಯಾ ಬಳಿಯಿದ್ದ ಮಹಿಳೆಯರು ಗುಂಪಿನ ಬಳಿ ತೆರಳಿ ಗಂಗಾಸಾಗರ ಕ್ಕೆ ಹೋಗುವ ದಾರಿ ಕುರಿತು ಮಾಹಿತಿ ಕೇಳಿದ್ದಾರೆ. ಆದರೆ ಮಹಿಳೆಯರು ಅವರನ್ನು ಮಕ್ಕಳ ಕಳ್ಳರು ಎಂದು ಬೇರೆಯವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಾವು ಯಾರ ವಿರುದ್ದ ದೂರು ನೀಡಲ್ಲ ನಮಗೆ ಯಾತ್ರೆ ಮಾಡಲು ಅವಕಾಶ ನೀಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top