ಬ್ಲಾಕ್ ಕಲರ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಮಾಡಿದ ಕನ್ನಡದ ಮಿಲ್ಕಿ ಬ್ಯೂಟಿ, ಸೀರೆಯಲ್ಲಿ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಆಶಿಕಾ……!

Follow Us :

ಕನ್ನಡ ಸಿನಿರಂಗದಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡಿರುವ ಆಶಿಕಾ ರಂಗನಾಥ್ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅನೇಕ ಕನ್ನಡದ ನಟಿಯರು ತೆಲುಗು ಸಿನೆಮಾಗಳಲ್ಲಿ ನಟಿಸುವ ಮೂಲಕ ಹವಾ ಸೃಷ್ಟಿಸಿದ್ದಾರೆ. ಸದ್ಯ ಆಶಿಕಾ ರಂಗನಾಥ್ ಸಹ ತೆಲುಗಿನಲ್ಲಿ ಸಕ್ಸಸ್ ಕಾಣಲು ಪ್ರಯತ್ನಿಸುತ್ತಿದ್ದಾರೆ. ಇದೀಗ ನಟಿ ಆಶಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬ್ಲಾಕ್ ಸೀರೆಯಲ್ಲಿ ಪೊಟೋಶೂಟ್ಸ್ ಹಂಚಿಕೊಂಡಿದ್ದು, ಆಕೆಯ ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಸ್ಯಾಂಡಲ್ ವುಡ್ ನಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಶಿಕಾ ರಂಗನಾಥ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಿನಿರಂಗದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಅಮಿಗೋಸ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಆಶಿಕಾ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆದರು. ಇದೀಗ ಆಕೆ ಅಕ್ಕಿನೇನಿ ನಾಗಾರ್ಜುನ್ ರವರ ಜೊತೆಗೆ ನಾ ಸಾಮಿ ರಂಗ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ನಿಮಿತ್ತ ಬ್ಲಾಕ್ ಕಲರ್‍ ಸೀರೆಯಲ್ಲಿ ಪೊಟೋಶೂಟ್ಸ್ ಮಾಡಿಸಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಆಶಿಕಾ ಕನ್ನಡ ಸಿನೆಮಾಗಳ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ರವರ ಜೊತೆಗೆ ಆಶಿಕಾ ನಾ ಸಾಮಿ ರಂಗ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಜ.14 ರಂದು ಸಂಕ್ರಾಂತಿ ಹಬ್ಬದ ಅಂಗವಾಗಿ ರಿಲೀಸ್ ಆಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗಿದೆ. ಈ ಸಿನೆಮಾ ಪ್ರಿ ರಿಲೀಸ್ ಈವೆಂಟ್ ಸಹ ಇತ್ತಿಚಿಗಷ್ಟೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಆಶಿಕಾ ಬ್ಲಾಕ್ ಕಲರ್‍ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರನ್ನು ತನ್ನತ್ತ ಸೆಳೆದುಕೊಂಡಿದ್ದರು. ಬ್ಲಾಕ್ ಕಲರ್‍ ಲೆಹಂಗಾ, ಬ್ಲಾಕ್ ಕಲರ್‍ ಸ್ಲೀವ್ ಲೆಸ್ ಬ್ಲೌಜ್ ಜೊತೆಗೆ ಟ್ರಾನ್ಸಫರೆಂಟ್ ಸೀರೆಯಲ್ಲಿ ಆಕೆ ಕಾಣಿಸಿಕೊಂಡು ಪಡ್ಡೆಹುಡುಗರ ಟೆಂಪರೇಚರ ಏರಿಸಿದ್ದಾರೆ. ಆಕೆಯನ್ನು ನೋಡಿದ ಅನೇಕರು ಫಿದಾ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಸಹ ಮಾಡುತ್ತಿದ್ದಾರೆ.

ಇನ್ನೂ ಈಗಾಗಲೇ ನಾ ಸಾಮಿ ರಂಗ ಸಿನೆಮಾದ ಟ್ರೈಲರ್‍, ಹಾಡುಗಳು ತುಂಬಾನೆ ಸದ್ದು ಮಾಡುತ್ತಿವೆ. ಈ ಸಿನೆಮಾದಲ್ಲಿ ಆಶಿಕಾ ರಂಗನಾಥ್ ಜೊತೆಗೆ ಅಲ್ಲರಿ ನರೇಶ್, ರಾಜ್ ತರುಣ್, ಮಿರ್ನ ಮೆನನ್, ರುಕ್ಸಾರ್‍ ದಿಲ್ಲಾನ್ ಸೇರಿದಂತೆ ಅನೇಕ ನಟ/ನಟಿಯರು ಬಣ್ಣ ಹಚ್ಚಿದ್ದಾರೆ. ಈ ಸಿನೆಮಾಗಳ ಜೊತೆಗೆ ಆಶಿಕಾ ಕನ್ನಡದಲ್ಲಿ ಎರಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ, ಶ್ರೀಲೀಲಾ ರವರಂತೆ ಆಶಿಕಾ ಸಹ ಸೌತ್ ನಲ್ಲಿ ಸ್ಟಾರ್‍ ನಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.