ಶೂಟಿಂಗ್ ಸೆಟ್ ನಲ್ಲಿ ಮಾಜಿ ಪ್ರಿಯಕರನನ್ನು ನೆನಪಿಸಿಕೊಂಡು ಹಿರೋ ಕೆನ್ನೆಗೆ ಬಾರಿಸಿದ್ದರಂತೆ ಮೃಣಾಲ್ ಠಾಕೂರ್….!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಿಗದ ಕ್ರೇಜ್ ಒಂದೇ ಸಿನೆಮಾದಲ್ಲಿ ಸಿಗುತ್ತದೆ. ಈ ಸಾಲಿಗೆ ಕ್ರೇಜಿ ಬ್ಯೂಟಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಮೃಣಾಲ್ ಠಾಕೂರ್‍ ಭಾರಿ ಫೇಂ ಪಡೆದುಕೊಂಡರು. ಅದರಲ್ಲೂ ಟಾಲಿವುಡ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡರು. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮೃಣಾಲ್ ಠಾಕೂರ್‍ ಶೂಟಿಂಗ್ ನಲ್ಲಿ ಹಿರೋ ಕೆನ್ನೆಗೆ ಬಾರಿದ್ದ ವಿಚಾರವನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಇತ್ತೀಚಿಗೆ ಆಕೆ ಹಾಯ್ ನಾನ್ನ, ಫ್ಯಾಮಿಲಿ ಸ್ಟಾರ್‍ ಸಿನೆಮಾಗಳಲ್ಲಿ ನಟಿಸಿದ್ದರು. ಹಾಯ್ ನಾನ್ನ ಸಿನೆಮಾ ಕೊಂಚ ಸಕ್ಸಸ್ ಕಂಡರೇ, ಫ್ಯಾಮಿಲಿ ಸ್ಟಾರ್‍ ಡಿಜಾಸ್ಟರ್‍ ಆಗಿತ್ತು. ನಟಿ ಮೃಣಾಲ್ ಠಾಕೂರ್‍ ಹಿಂದಿಯಲ್ಲಿ ಜೆರ್ಸಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಷಾಹಿದ್ ಕಪೂರ್‍ ಹಾಗೂ ಮೃಣಾಲ್ ಠಾಕೂರ್‍ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾದಲ್ಲಿನ ಎಮೋಷನಲ್ ದೃಶ್ಯವೊಂದನ್ನು ಶೂಟ್ ಮಾಡುವಾಗ ನಡೆದ ಸನ್ನಿವೇಶದ ಬಗ್ಗೆ ಮೃಣಾಲ್ ಠಾಕೂರ್‍ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಮಗನಿಗೆ ಜೆರ್ಸಿ ತಂದುಕೊಡಲು ಹಿರೋ ಬಳಿ ಹಣ ಇಲ್ಲದ ಕಾರಣ ಆತ ಹೆಂಡತಿಯ ಪರ್ಸ್ ನಲ್ಲಿ ಹಣ ತೆಗೆದುಕೊಂಡು ಮಗನಿಗೆ ಜೆರ್ಸಿ ತಂದುಕೊಡಲು ಮುಂದಾಗುತ್ತಾನೆ. ಈ ವೇಳೆ ಪತ್ನಿಯ ಬಳಿ ಕಳ್ಳತನ ಮಾಡುತ್ತೀಯಾ ಎಂದು ಗಲಾಟೆ ಆಗುತ್ತದೆ. ಈ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಮೃಣಾಲ್ ಹಿರೋ ಕೆನ್ನೆಗೆ ಬಾರಿಸುತ್ತಾಳೆ. ಈ ದೃಶ್ಯ ಸಿನೆಮಾದಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ.

ಇನ್ನೂ ಸಂದರ್ಶನದಲ್ಲಿ ಈ ದೃಶ್ಯವನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. ಈ ದೃಶ್ಯದಲ್ಲಿ ನಾನು ಸರಿಯಾಗಿ ನಟಿಸೋಕೆ ಆಗಲಿಲ್ಲ. ಶಾಹಿದ್ ಕಪೂರ್‍ ನನಗೆ ತುಂಬಾ ಇಷ್ಟವಾದ ಹಿರೋ. ಆತನ ಕೆನ್ನೆಗೆ ಜೋರಾಗಿ ಹೊಡೆಯಲಾಗಲಿಲ್ಲ. ತುಂಬಾ ಕಿರಿಕಿರಿಯಾಗಿತ್ತು. ಜೊತೆಗೆ ಭಯವಾಗಿತ್ತು. ಅವರೊಂದಿಗೆ ನಟಿಸುವ ಅವಕಾಶ ಬಂದಲೂ ಕೂಡಲೇ ನಾನು ಒಪ್ಪಿಕೊಂಡೆ. ಮೊದಲ ದಿನ ಶೂಟಿಂಗ್ ಸಮಯದಲ್ಲಿ ಶಾಹಿದ್ ಕಪೂರ್‍ ನಗು ನೋಡುತ್ತಾ ಇದ್ದೆ. ಆತನೊಂದಿಗೆ ನಟಿಸುವುದು ಅದ್ಬುತವಾದ ಅನುಭವ. ಆದರೆ ಹಿರೋ ಕೆನ್ನೆಗೆ ಬಾರಿಸಿದ ದೃಶ್ಯದ ಶೂಟಿಂಗ್ ಸಮಯದಲ್ಲಿ ತುಂಬಾ ಸಮಸ್ಯೆಯಾಗಿತ್ತು. ನಾನು ನಿದಾನವಾಗಿ ಹೊಡೆಯುತ್ತೇನೆ. ಎಡಿಟ್ ನಲ್ಲಿ ಜೋರಾಗಿ ಹೊಡೆದಂತೆ ಮಾಡಿಕೊಳ್ಳಿ ಎಂದಿದ್ದೆ. ಆದರೆ ನಿರ್ದೇಶಕ ಒಪ್ಪಿಕೊಳ್ಳಲಿಲ್ಲ. ಈ ಸಮಯದಲ್ಲಿ ಶಾಹಿದ್ ಕಪೂರ್‍ ನಿಮ್ಮ ಮಾಜಿ ಬಾಯ್ ಫ್ರೆಂಡ್ ನೆನಪಿಸಿಕೊಂಡು ನನ್ನನ್ನು ಹೊಡೆಯಿರಿ ಎಂದು ಸಲಹೆ ಕೊಟ್ಟರಂತೆ. ಈ ದೃಶ್ಯ ಮಾಡಲು ಮೂರು ಗಂಟೆ ಸಮಯ ಬೇಕಾಗಿತ್ತಂತೆ. ಆಕೆಯ ಈ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ