Film News

ಮೂರು ದಶಕಗಳ ಬಳಿಕ ಒಂದಾಗಿ ಕಾಣಿಸಿಕೊಳ್ಳಲಿದ್ದಾರಂತೆ ಚಿರು-ವಿಜಯಶಾಂತಿ, ಟ್ರೆಂಡ್ ಆದ ಸುದ್ದಿ…..!

ದಶಕಗಳ ಹಿಂದೆ ತೆಲುಗಿನಲ್ಲಿ ಅನೇಕ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಪಡೆದುಕೊಂಡ ಬೆಸ್ಟ್ ಜೋಡಿಗಳಲ್ಲಿ ಚಿರಂಜೀವಿ ಹಾಗೂ ವಿಜಯಶಾಂತಿ ಒಂದು ಎಂದು ಹೇಳಬಹುದಾಗಿದೆ. ಮೋಸ್ಟ್ ಸಕ್ಸಸ್ ಪುಲ್ ಜೋಡಿ ಎಂದೇ ಕರೆಯಲಾಗುತ್ತಿತ್ತು. ಅನೇಕ ಸೂರಪ್ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಈ ಜೋಡಿ ಮತ್ತೊಮ್ಮೆ ನಟಿಸಲಿದ್ದಾರೆ. ಸುಮಾರು ಮೂರು ದಶಕಗಳ ಬಳಿಕ ಮತ್ತೊಮ್ಮೆ ಈ ಜೋಡಿ ನಟಿಸಲಿದ್ದು ಈ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಪುಲ್ ಥ್ರಿಲ್ ಆಗಿದ್ದಾರೆ ಎನ್ನಲಾಗಿದೆ.

ಟಾಲಿವುಡ್ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ಲೇಡಿ ಸೂಪರ್‍ ಸ್ಟಾರ್‍ ವಿಜಯಶಾಂತಿ ಕಾಂಬಿನೇಷನ್ ನಲ್ಲಿ ಅನೇಕ ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳು ಬಂದವು. ಸುಮಾರು 20ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾಗಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಸುಮಾರು ಸಿನೆಮಾಗಳಲ್ಲಿ ಅವರು ಜೋಡಿಯಾಗಿ ನಟಿಸಿದ ಬಳಿಕ ವಿಜಯಶಾಂತಿ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ಬ್ಯುಸಿಯಾದರು. ದೊಡ್ಡ ಹಿರೋಗಳ ಜೊತೆಗೆ ನಟಿಸಲಿಲ್ಲ. ಆ ಸಿನೆಮಾಗಳ ಬಳಿಕ ಆಕೆ ಸಿನೆಮಾಗಳಿಂದ ದೂರವಾದರು. ಸುಮಾರು ವರ್ಷಗಳ ಬಳಿಕ ಆಕೆ ಸೂಪರ್‍ ಸ್ಟಾರ್‍ ಮಹೇಶ್ ಬಾಬು ರವರ ಸರಿಲೇರು ನೀಕೆವ್ವರು ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದರಿಂದ ಮತ್ತೆ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ನಡೆಯಲಿಲ್ಲ ಎಂದೇ ಹೇಳಬಹುದು.

ಇದೀಗ ನಟಿ ವಿಜಯಶಾಂತಿ ಮತ್ತೊಮ್ಮೆ ಸಿನೆಮಾ ಮಾಡಲಿದ್ದಾರಂತೆ. ಆಕೆ ಚಿರಂಜೀವಿಗಾಗಿ ಸಿನೆಮಾ ಒಪ್ಪಿಕೊಂಡಿದ್ದಾಗಿ ಹೇಳಲಾಗಿದೆ. ಸುಮಾರು ಮೂರು ದಶಕಗಳ ಬಳಿಕ ಮತ್ತೊಮ್ಮೆ ಈ ಜೋಡಿ ಒಂದೇ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಹುನಿರೀಕ್ಷಿತ ವಿಶ್ವಂಭರ ಎಂಬ ಸಿನೆಮಾದಲ್ಲಿ ವಿಜಯಶಾಂತಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಮುಖ ಪಾತ್ರವೊಂದಕ್ಕಾಗಿ ವಿಜಯಶಾಂತಿಯವರನ್ನು ಸಂಪರ್ಕ ಮಾಡಲಾಗಿತ್ತಂತೆ. ಆಕೆಯೊಂದಿಗೆ ಚಿತ್ರತಂಡ ಚರ್ಚೆ ನಡೆಸುತ್ತಿದೆ ಎನ್ನಲಾಗಿದ್ದು, ಆಕೆ ಸಿನೆಮಾಗೆ ಒಪ್ಪಿಗೆ ನೀಡುತ್ತಾರಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಈ ಸಿನೆಮಾದಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಸ್ಟಾರ್‍ ನಟಿ ತ್ರಿಷಾ ನಾಯಕಿಯಾಗಿ, ಯಂಗ್ ಬ್ಯೂಟಿ ಮೀನಾಕ್ಷಿ ಚೌದರಿ, ಸುರಭಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಷಿಯೋ ಫ್ಯಾಂಟಸಿ ಕಥೆಯೊಂದಿಗೆ ಈ ಸಿನೆಮಾ ಸೆಟ್ಟೇರಿದ್ದು, ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ.

ಸದ್ಯ ಹರಿದಾಡುತ್ತಿರುವ ಸುದ್ದಿ ನಿಜವೇ ಆದರೇ ಮತ್ತೊಂದು ಬ್ಲಾಕ್ ಬ್ಲಸ್ಟರ್‍ ಹಿಟ್ ಪಕ್ಕಾ ಎಂದೇ ಹೇಳಲಾಗುತ್ತಿದೆ. ಚಿರಂಜೀವಿ ಹಾಗೂ ವಿಜಯಶಾಂತಿ ಸೂಪರ್‍ ಹಿಟ್ ಜೋಡಿಯೆಂದೇ ಹೇಳಲಾಗುತ್ತಿದೆ. ಅದರಲ್ಲೂ ಈ ಜೋಡಿಯ ಡ್ಯಾನ್ಸ್ ನಲ್ಲಿ ಬೀಟ್ ಹೊಡೆಯೋಕೆ ಯಾರಿಂದಲೂ ಆಗುತ್ತಿಲ್ಲ ಎಂಬ ಮಾತಿದೆ.

Most Popular

To Top