ನಟ ರಾಮ್ ಚರಣ್ ಮೇಲೆ ಕಣ್ಣಾಕಿದ ಮಾಜಿ ವಿಶ್ವ ಸುಂದರಿ, ಆತನೊಂದಿಗೆ ನಟಿಸಬೇಕೆಂಬ ಬಯಕೆ ಇದೆ ಎಂದ ಮಾನುಷಿ….!

Follow Us :

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್‍ ಕಳೆದ 2017 ರ ಮಿಸ್ ವರ್ಲ್ಡ್ ವಿಜೇತೆಯಾಗಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್‍ ರೊಂದಿಗೆ ಪೃಥ್ವಿರಾಜ್ ಚೌಹಾಣ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 2022 ರಲ್ಲಿ ತೆರೆಕಂಡ ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು. ಆಕೆ ನಟಿಸಿದ ನಾಲ್ಕೂ ಸಿನೆಮಾಗಳೂ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಇದೀಗ ಆಕೆ ಸಂದರ್ಶನವೊಂದರಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಕುರಿತು ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಅವರು ವೈರಲ್ ಆಗುತ್ತಿವೆ.

ಸ್ಟಾರ್‍ ನಟ ರಾಮ್ ಚರಣ್ RRR ಸಿನೆಮಾದ ಮೂಲಕ ವಿಶ್ವಮಟ್ಟದಲ್ಲಿ ಕ್ರೇಜ್ ಪಡೆದುಕೊಂಡು ಗ್ಲೋಬಲ್ ಸ್ಟಾರ್‍ ಎಂಬ ಖ್ಯಾತಿಗೆ ಗುರಿಯಾಗಿದ್ದಾರೆ. ರಾಮ್ ಚರಣ್ ಜೊತೆಗೆ ನಟಿಸಬೇಕೆಂದು ಅನೇಕ ನಟಿಯರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಹೆಚ್ಚು ಸ್ಟಾರ್‍ ನಟಿಯರೇ ಎಂಬುದು ಗಮನಾರ್ಹವಾದ ವಿಚಾರ ಎನ್ನಬಹುದು. ಇದೀಗ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್‍ ಸಹ ರಾಮ್ ಚರಣ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮಾನುಷಿ ಚಿಲ್ಲರ್‍ ರಾಮ್ ಚರಣ್ ಕುರಿತು ಕೆಲವೊಂದು ಕ್ರೇಜಿ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸಂದರ್ಶನದಲ್ಲಿ ಚರಣ್ ಬಗ್ಗೆ ಕಾಮೆಂಟ್ಸ್ ಮಾಡಿರುವ ಮಾನುಷಿ ಚಿಲ್ಲರ್‍ ತನ್ನ ಮನದಾಳದ ಬಯಕೆಯನ್ನು ಹೊರಹಾಕಿದ್ದಾರೆ. ರಾಮ್ ಚರಣ್ ಎಂದರೇ ತನಗೆ ತುಂಬಾ ಇಷ್ಟ. ಆತನೊಂದಿಗೆ ನಟಿಸಲು ತುಂಬಾ ಕಾಯುತ್ತಿದ್ದೇನೆ. ಅವರ ಡ್ಯಾನ್ಸ್ ತುಂಬಾ ಅದ್ಬುತವಾಗಿರುತ್ತದೆ. ರಾಮ್ ಚರಣ್ ಜೊತೆಗೆ ನಟಿಸುವುದು ನನ್ನ ಕನಸು ಎಂದು ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ನಿಮ್ಮ ಬಯಕೆ ಶೀಘ್ರ ಈಡೇರಲಿ ಎಂದು ಶುಭ ಕೋರುತ್ತಿದ್ದಾರೆ. ಇನ್ನೂ ನಟಿಯಾಗಿ ಮಾನುಷಿಗೆ ಅಷ್ಟೊಂದು ಸಕ್ಸಸ್ ಸಿಗುತ್ತಿಲ್ಲ. ಕೆರಿಯರ್‍ ಆರಂಭದಿಂದಲೂ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳು ಎದುರಾಗುತ್ತಲೇ ಇದೆ. ತನಗಂತ ವಯಸ್ಸಿನಲ್ಲಿ ತುಂಬಾ ಹಿರಿಯ ನಟ ಅಕ್ಷಯ್ ಕುಮಾರ್‍ ಜೊತೆಗೆ ನಟಿಸಿದ ಕಾರಣದಿಂದ ಕೆಲವೊಂದು ವಿಮರ್ಶೆಗಳಿಗೆ ಗುರಿಯಾಗಿದ್ದರು. ಆದರೆ ಆಕೆ ಮಾತ್ರ ತನಗಿಂತ ದೊಡ್ಡವರ ಜೊತೆಗೆ ನಟಿಸಲು ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳುತ್ತಿದ್ದಾರೆ.

ಇನ್ನೂ ಮಾನುಷಿ, ವರುಣ್ ತೇಜ್ ಜೊತೆಗೆ ಆಪರೇಷನ್ ವಾಲೆಂಟೈನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಡಿಜಾಸ್ಟರ್‍ ಆಗಿದೆ. ಕೊನೆಯದಾಗಿ ಆಕೆ ಬಡೆ ಮಿಯಾ ಚೊಟೆ ಮಿಯಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನೆಮಾ ಸಹ ಆಕೆಗೆ ನಿರಾಸೆಯನ್ನು ತಂದುಕೊಟ್ಟಿದೆ ಎನ್ನಲಾಗಿದೆ.