News

ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಮದ್ರಸಾ ಶಿಕ್ಷಕನ ಬಂಧನ….!

ಪಾಠ ಹೇಳುವಂತಹ ಶಿಕ್ಷಕನೇ 10 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆಯೊಂದು ನಡೆದಿದೆ. ಗುಜರಾತ್ ನ ಜುನಾಗಢ್ ಜಿಲ್ಲೆಯ ಮದ್ರಸಾವೊಂದರ 25 ವರ್ಷದ ಶಿಕ್ಷಕ ಈ ನೀಚ ಕೃತ್ಯವೆಸಗಿದ್ದಾನೆ ಎನ್ನಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಆ ಶಿಕ್ಷಕನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗುಜರಾತ್ ನ ಜುನಾಘಡ್ ಜಿಲ್ಲೆಯ ಮದರಸಾವೊಂದರ ಶಿಕ್ಷಕ ಮೌಲಾನಾ ಎಂಬಾತನ ವಿರುದ್ದ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ದೂರು ನೀಡಿದ್ದರು. ಆದರೆ ಆ ಶಿಕ್ಷಕನ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಆರೋಪದ ಮೇರೆಗೆ ಮದ್ರಸಾದ 55 ವರ್ಷದ ಟ್ರಸ್ಟಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಆರೋಪಿ ಶಿಕ್ಷಕನನ್ನು ಸೂರತ್ ನ ಅಡಗು ತಾಣದಿಂದ ಬಂದಿಸಲಾಗಿದೆ. ಪರಾರಿಯಾಗಿದ್ದಂತಹ ಮದರಸಾ ಟ್ರಸ್ಟಿಯನ್ನು ಜುನಾಗಡ್ ನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಕಿರುಕುಳ ಕೊಟ್ಟ 25 ವರ್ಷದ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧನ ಮಾಡಲಾಗಿದೆ.

ಜುನಾಗಢದ ಮಂಗ್ರೋಲ್ ಎಂಬ ತಾಲೂಕಿನ ಮದರಸಾದಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಮತಷ್ಟು ಸತ್ಯಾಂಶ ಹೊರಬಂದಿದೆ. ಮದರಸಾದಲ್ಲಿದ್ದ ಬೇರೆ ಮಕ್ಕಳ ಮೇಲೂ ಸಹ ದೌರ್ಜನ್ಯ ನಡೆದಿದೆಯಂತೆ. ಹಣದ ಆಮಿಷದ ಜೊತೆಗೆ ಬೆದರಿಕೆ ಸಹ ಹಾಕಿದ್ದನಂತೆ. ಕಳೆದ ಎರಡು ವರ್ಷದಿಂದ ಆರೋಪಿ ಮದರಸಾದಲ್ಲಿ ಉರ್ದು ಕಲಿಸುತ್ತಿದ್ದ ಎಂದು ಹೇಳಲಾಗಿದೆ.

Most Popular

To Top