ಲೆಹಂಗಾ ದವಣಿಯಲ್ಲಿ ಸೊಂಟದ ಮೈಮಾಟ ಪ್ರದರ್ಶನ ಮಾಡಿದ ಸ್ಟಾರ್ ನಟಿ ಶ್ರೀಲೀಲಾ, ವೈರಲ್ ಆದ ಲೇಟೆಸ್ಟ್ ಪೊಟೋಸ್….!

Follow Us :

ಸ್ಯಾಂಡಲ್ ವುಡ್ ಯಂಗ್ ಬ್ಯೂಟಿ ಶ್ರೀಲೀಲಾ ಸದ್ಯ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ನಟಿಯರಿಗೆ ಪೈಪೋಟಿಯಾಗಿದ್ದಾರೆ. ಇದೀಗ ಟ್ರೆಡಿಷನಲ್ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.

ಯಂಗ್ ಬ್ಯೂಟಿ ಶ್ರೀಲೀಲಾ ಇತ್ತೀಚಿಗಷ್ಟೆ ತೆರೆಕಂಡ ನಂದಮೂರಿ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಬಾಲಕೃಷ್ಣರವರ ಪುತ್ರಿಯಾಗಿ ನಟಿಸಿದ್ದರು. ಈ ಸಿನೆಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನೆಮಾದ ಸಕ್ಸಸ್ ಪಾರ್ಟಿಯನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಯ ಮೇಲೆ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಿನೆಮಾದಲ್ಲಿನ ಬಾಲಯ್ಯ ಹೇಳಿದಂತೆ ಬ್ರೋ ಐ ಡೋಂಟ್ ಕೇರ್‍ ಎಂಬ ಡೈಲಾಗ್ ಅನ್ನು ಸ್ಟೇಜ್ ಮೇಲೆ ಹೇಳಿದ್ದಾರೆ. ಮಗಳಂತಹ ಪಾತ್ರಗಳನ್ನು ಮಾಡಬೇಡ ಎಂದು ಹೇಳಿದವರಿಗೆ ಐ ಡೋಂಡ್ ಕೇರ್‍ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಂತಹವರನ್ನು ಹಿಡಿಸಿಕೊಳ್ಳುವುದಿಲ್ಲ ಎಂದೂ, ನನ್ನನ್ನು ಸುಮಾರು ಮಂದಿ ಡಿಸ್ಕರೇಜ್ ಮಾಡಿದ್ದಾರೆ ಎಂತಲೂ ಶ್ರೀಲೀಲಾ ಹೇಳಿದ್ದಾರೆ.

ಇನ್ನೂ ಆಕೆ ಹೆಣ್ಣಾಗಿ ಹುಟ್ಟಿರುವುದಕ್ಕೆ ತುಂಬಾ ಗರ್ವ ಇದೆ ಎಂದು ಹೇಳಿದ ಆಕೆ, ಬಾಲಕೃಷ್ಣರವರನ್ನು ಸಹ ಹೊಗಳಿದ್ದಾರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ತುಂಬಾ ಪ್ರೋತ್ಸಾಹ ನೀಡುತ್ತಾರೆ, ನಗೆ ರಿಯಲ್ ಲೈಫ್ ನಲ್ಲೂ ಸಹ ತುಂಬಾ ಸಪೋರ್ಟಿವ್ ಆಗಿರುತ್ತಾರೆ. ಇನ್ನು ಮುಂದೆ ನನ್ನನ್ನು ಚಿಚ್ಚಾ ರಂತೆ ನೋಡಿಕೊಳ್ಳುತ್ತಾರೆ, ನಾನೂ ಸಹ ಹಾಗೇ ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ಟ್ರೆಡಿಷನಲ್ ವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಕ್ಯೂಟ್ ಪೋಸ್ ಕೊಡುತ್ತಾ, ಸೊಂಟದ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಶ್ರೀಲೀಲಾ ಕೈಯಲ್ಲಿ ಹತ್ತು ಸಿನೆಮಾಗಳಿಗೂ ಅಧಿಕವಿದೆ. ಮಹೇಶ್ ಬಾಬು ಜೊತೆಗೆ ಗುಂಟೂರು ಖಾರಂ, ಪವನ್ ಕಲ್ಯಾಣ್ ಜೊತೆಗೆ ಉಸ್ತಾದ್ ಭಗತ್ ಸಿಂಗ್, ನಿತಿನ್ ಜೊತೆಗೆ ಎಕ್ಸ್ಟ್ರಾಡಿನರಿ ಮ್ಯಾನ್, ವೈಷ್ಣವ್ ತೇಜ್ ಜೊತೆಗೆ ಆದಿ ಕೇಶವ ಸೇರಿದಂತೆ ರವಿತೇಜ ಜೊತೆಗೆ ಸಿನೆಮಾ ಮಾಡುತ್ತಿದ್ದು, ತೆಲುಗು ಹಾಗೂ ಕನ್ನಡದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.