ತನ್ನನ್ನು ಪ್ರೀತಿಸಿ ಮೋಸ ಮಾಡಿದ ಲವರ್ ಮೇಲೆ ಆಸಿಡ್ ಎರಚಿದ ಯುವತಿ, ಪ್ರಕರಣ ದಾಖಲು….!

Follow Us :

ಪ್ರೀತಿಯಲ್ಲಿ ಮೋಸ ಹೋದ ಕಾರಣದಿಂದ ವಿವಿಧ ರೀತಿಯ ಹಲ್ಲೆಗಳು, ಕೊಲೆಗಳು ನಡೆದಿರುತ್ತವೆ. ತನ್ನ ಪ್ರೀತಿಯನ್ನು ಒಪ್ಪದ ಯುವತಿಯರ ಮೇಲೆ ಹಲ್ಲೆ, ಕೊಲೆಯಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲಿ ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ತನ್ನನ್ನು ಪ್ರೀತಿಸಿ ಮೋಸ ಮಾಡಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನ ಮುಖಕ್ಕೆ ಆಸಿಡ್ ಎರಚಿದ ಘಟನೆಯೊಂದು ನಡೆದಿದೆ.

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಏ.23 ರಂದು ಈ ಘಟನೆ ನಡೆದಿದ್ದು, ಪ್ರೀತಿಸ ಮೋಸ ಮಾಡಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಪ್ರಿಯಕರನ ಮುಖಕ್ಕೆ ಆತನ ಮದುವೆಯ ದಿನವೇ ಮೋಸಹೋದ ಯುವತಿ ಆಸಿಡ್ ಎರಚಿದ್ದಾಳೆ. ಬಳಿಕ ಆ ಯುವಕನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸಿಡ್ ಎರಚಿದ ಯುವತಿಯನ್ನು ಹಿಡಿದು ಆಕೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾದ ಯುವಕ ಆ ಯುವತಿಯನ್ನು ಪ್ರೀತಿಸಿದ್ದನಂತೆ, ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದರಂತೆ. ಜೊತೆಗೆ ಇಬ್ಬರೂ ದೈಹಿಕ ಸಂಪರ್ಕ ಸಹ ಹೊಂದಿದ್ದರಂತೆ. ಆದರೆ ಅವರ ಪ್ರೀತಿಯನ್ನು ಎರಡೂ ಕುಟುಂಬಗಳು ವಿರೋಧ ಮಾಡಿದ್ದರು ಎಂದು ತಿಳಿದುಬಂದಿದೆ.

ಕಳೆದ ಏ.22 ರಂದು ಯುವಕನ ಮನೆಯವರು ಬೇರೊಂದು ಯುವತಿಯೊಂದಿಗೆ ಮದುವೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಈ ಸುದ್ದಿ ತಿಳಿದ ಯುವತಿ ಆತನ ಮೇಲೆ ಸೇಡು ತೀರಿಸಿಕೊಳ್ಳು ನಿರ್ಧಾರ ಮಾಡಿದ್ದಾಳೆ. ಮಾರುವೇಷ ಧರಿಸಿ ಮೆರವಣಿಗೆಯಲ್ಲಿ ಸೇರಿಕೊಂಡು ಆತನ ಮೇಲೆ ಆಸಿಡ್ ಹಾಕಿದ್ದಾಳೆ. ಆ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಯುವಕನನ್ನು ಮನೆಗೆ ಕರೆತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯುವತಿಯ ದೂರಿನಂತೆ ಐಪಿಸಿ ಸೆಕ್ಷನ್ 326ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.