News

ಅಶ್ಲೀಲ ವಿಡಿಯೋದಲ್ಲಿರುವಂತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ, ಅತಿಯಾದ ಕಾಮದಾಹಕ್ಕೆ ಬಲಿಯಾದ ಆಂಟಿ…..!

ಕಳೆದ ಏ.19 ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ಕೋಡಿಗೇಹಳ್ಳಿಯಲ್ಲಿ ವಾಸವಿದ್ದ ಮಹಿಳೆಯೊಬ್ಬಳ ಶವ ನಗ್ನವಾಗಿ ಪತ್ತೆಯಾಗಿತ್ತು. ಈ ಪ್ರಕರಣದಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದೆ. ಈ ಪ್ರಕರಣದ ಸಂಬಂಧ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಹೊರಬಂದಿದೆ. ಕೊಲೆಯಾದ ಮಹಿಳೆಯೊಂದಿಗೆ ನವೀನ್ ಅಕ್ರಮ ಸಂಬಂಧವಿಟ್ಟುಕೊಂಡಿದ್ದ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಲ್ಲಿರುವಂತೆ ಲೈಂಗಿಕ ಕ್ರಿಯೆ ನಡೆಸಲು ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ಕಾರಣದಿಂದ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೊಡಿಗೇಹಳ್ಳಿಯ ನಿವಾಸಿ ಶೋಭ (48) ಕೊಲೆಯಾದ ಮಹಿಳೆಯಾಗಿದ್ದಾಳೆ. ಮೈಸೂರು ಮೂಲದ ಸಾಫ್ಟವೇರ್‍ ಇಂಜನೀಯರ್‍ ಆಗಿರುವ ನವೀನ್ (28) ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇನ್ನೂ ಮೃತಳಾದ ಶೋಭಾಗೆ ಎರಡು ಹೆಣ್ಣು ಮಕ್ಕಳಿದ್ದರು. ಜೀವನ ನಿರ್ವಹಣೆಗಾಗಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಆಕೆಯ ಗಂಡ ಚಿಕ್ಕಪೇಟೆಯಲ್ಲಿ ಉದ್ಯಮ ನಡೆಸುತ್ತಾ ಪ್ರತ್ಯೇಕ ಮನೆಯಲ್ಲಿದ್ದರು. ಒಂಟಿಯಾಗಿದ್ದ ಮೃತ ಮಹಿಳೆ ಸೊಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ಮೂಲಕ ನವೀನ್ ಜೊತೆಗೆ ಸ್ನೇಹ ಬೆಳಸಿದ್ದಾಳೆ. ಬಳಿಕ ಸ್ನೇಹದ ಫಲವಾಗಿ ಮೊಬೈಲ್ ನಂಬರ್‍ ಗಳು ಸಹ ಬದಲಸಿಕೊಂಡು ವಾಟ್ಸಾಪ್ ಚಾಟ್, ವಿಡಿಯೋ ಕಾಲ್ ಮಾಡಿಕೊಳ್ಳುತ್ತಾ ಸಾಗಿದ್ದಾರೆ. ಬಳಿಕ ಅವರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿದೆ.

ಕಳೆದ ಏ.4 ರಂದು ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸಿದ್ದರಿಂದ ಆಕೆ ಒಂಟಿಯಾಗಿ ಮನೆಯಲ್ಲಿದ್ದರು. ಈ ಸಮಯದಲ್ಲಿ ಆಕೆ ನವೀನ್ ರನ್ನು ರಾತ್ರಿ 10 ಗಂಟೆಗೆ ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಶೋಭಾ ಸ್ವಲ್ಪ ಮದ್ಯ ಸೇವನೆ ಮಾಡಿದ್ದಾರೆ. ನಂತರ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಸ್ವಲ್ಪ ಸಮಯದ ಬಳಿಕ ನವೀನ್ ಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಇದೇ ಶೈಲಿಯಲ್ಲಿ ಮಾಡುವಂತೆ ಒತ್ತಾಯ ಮಾಡಿದ್ದಾಳೆ. ಅದು ಇಷ್ಟವಾಗದ ನವೀನ್ ವಿರೋಧ ಮಾಡಿದ್ದಾನೆ. ಈ ಮೊದಲು ನವೀನ್ ಕೈಗೆ ಕೊಂಚ ಗಾಯವಾಗಿತ್ತು. ಆಕೆ ಹೇಳಿದ ರೀತಿಯಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪದ ನವೀನ್ ಕೈಗೆ ಮತ್ತೆ ಗಾಯಗೊಳಿಸಿದ್ದಾಳೆ. ಆದರೂ ಶೋಭಾ ಅದೇ ರೀತಿ ಮಾಡುವಂತೆ ಒತ್ತಾಯಿಸಿದ್ದಾರೆ.

ಆರೋಪಿ ನವೀನ್ ಎಷ್ಟೇ ಹೇಳಿದರೂ ಒಪ್ಪದ ಶೋಭಾ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಬೆತ್ತಲೆ ದೇಹವನ್ನು ಅಲ್ಲಿಯೇ ಬಿಟ್ಟು ಆಕೆಯ ಕಾರಿನ ಕೀ ಮತ್ತು ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿದ್ದಾನೆ. ಮರುದಿನ ಮೊದಲನೇ ಪುತ್ರಿ ಶೋಭಾಳಿಗೆ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸದೇ ಇದ್ದಾಗ ಅನುಮಾನಗೊಂಡು ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಪೊಲೀಸ್ ರಿಗೆ ದೂರು ನೀಡಿದ್ದಾರೆ. ಶೋಭಾಳ ಎಟಿಎಂ ನಲ್ಲಿ 1.80 ಲಕ್ಷ ಡ್ರಾ ಮಾಡಿಕೊಂಡು ಕಾರನ್ನು ಬೆಂಗಳೂರಿನ ಗಡಿ ಭಾಗದಲ್ಲಿಟ್ಟು ಪರಾರಿಯಾಗಿದ್ದನು. ಸಿಸಿಟಿವಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ನವೀನ್ ನನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

Most Popular

To Top