ವ್ಯಭಿಚಾರದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಕಮೆಡಿಯನ್, ಅದು ಕೂಲ್ ಫ್ರೊಫೆಷನ್ ಇದ್ದಂತೆ ಎಂದ ವಿಧೂಷಿ….!

ಸ್ಟಾಂಡಪ್ ಕಮೆಡಿಯನ್ ವಿದೂಷಿ ಭಾರಿ ಫೇಮಸ್ ಆಗಿದ್ದಾರೆ. ವಿದೂಷಿ ಸ್ವರೂಪ್ ಅನೇಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಕಾರ್ಯಕ್ರಮವೊಂದರಲ್ಲಿ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ…

ಸ್ಟಾಂಡಪ್ ಕಮೆಡಿಯನ್ ವಿದೂಷಿ ಭಾರಿ ಫೇಮಸ್ ಆಗಿದ್ದಾರೆ. ವಿದೂಷಿ ಸ್ವರೂಪ್ ಅನೇಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಕಾರ್ಯಕ್ರಮವೊಂದರಲ್ಲಿ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ವ್ಯಭಿಚಾರ ಎಂಬುದು ಕೂಲ್ ಪ್ರೋಫೆಷನ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಕಮೆಡಿಯನ್ ವಿದೂಷಿ ಕಡಿಮೆ ಸಮಯದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ತಮ್ಮ ಕಾರ್ಯಕ್ರಮಗಳಲ್ಲಿ ಅನೇಕ ವಿಚಾರಗಳ ಬಗ್ಗೆ ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುತ್ತಿರುತ್ತಾರೆ. ಇದೀಗ ಆಕೆ ಕಾಮಿಡಿಯಾಗಿ ಹೇಳಿದರೋ ಅಥವಾ ಕಾಮಿಡಿಯ ಭಾಗವಾಗಿ ಹೇಳಿದರೋ ಆಕೆ ನೀಡಿದ ಹೇಳಿಕೆಯೊಂದು ಭಾರಿ ಸದ್ದು ಮಾಡುತ್ತಿದೆ. ವ್ಯಭಿಚಾರದ ಬಗ್ಗೆ ಆಕೆ ಮಾತನಾಡಿದ ಮಾತುಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅನೇಕರು, ತಮ್ಮ ಸಮಸ್ಯೆಗಳ ಕಾರಣದಿಂದಲೋ ಅಥವಾ ಬಲವಂತವಾಗಿಯೋ ವ್ಯಭಿಚಾರ ಎಂಬ ಕತ್ತಲಲ್ಲಿ ಜೀವನ ಸಾಗಿಸಬೇಕಾಗಿರುತ್ತದೆ. ಇದೀಗ ಕಮೆಡಿಯನ್ ವಿಧೂಷಿ ನೀಡಿದ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದೆ.

ಆಕೆ ವ್ಯಭಿಚಾರದ ಬಗ್ಗೆ ಮಾತನಾಡುತ್ತಾ, ವ್ಯಭಿಚಾರ ಎಂಬುದು ಕೂಲ್ ಫ್ರೊಫೆಷನ್. ಪ್ರಶಾಂತವಾದ ವೃತ್ತಿಯಾಗಿದೆ ಎಂದು ಹೇಳಿದ್ದಾರೆ. ಆಕೆ ಬೇರೆ ವೃತ್ತಿಗಳಿಗಿಂತ ಈ ವೃತ್ತಿ ಭಿನ್ನವಾದದು ಎಂದು ಹೇಳುವ ಪ್ರಯತ್ನ ಮಾಡಿದ್ದರೋ ಏನೋ ಆಕೆ ನೀಡಿದ ಹೇಳಿಕೆಗಳು ಮಾತ್ರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯ ವಿರುದ್ದ ಭಾರಿ ವಿಮರ್ಶೆಗಳು ಎದುರಾಗುತ್ತಿವೆ. ಆಕೆಯನ್ನು ಕೆಲವರು ಬೆಂಬಲಿಸಿದರೇ, ಮತ್ತೆ ಕೆಲವರು ಆಕೆಯನ್ನು ವಿಮರ್ಶೆ ಮಾಡುತ್ತಿದ್ದಾರೆ. ಮಹಿಳೆಯರನ್ನು ಎಂದಿಗೂ ಗೌರವಿಸುವ ಕೆಲಸ ಮಾಡಿ, ಮಹಿಳೆಯರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಖಾರವಾಗಿಯೇ ಮಾತನಾಡುತ್ತಿದ್ದಾರೆ.

ಆದರೆ ಮತ್ತೊಂದು ವರ್ಗ ವಿದೂಷಿ ಸ್ವರೂಪ್ ರವರ ಹೇಳಿಕೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಹಾಸ್ಯದ ಮೂಲಕ ಸಮಾಜದಲ್ಲಿನ ಅಂಶಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕೆಲವರು ಬೆಂಬಲಿಸುತ್ತಿದ್ದಾರೆ. ಹಾಸ್ಯವನ್ನು ಹಾಸ್ಯವಾಗಿಯೇ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಏನೇ ಇರಲಿ ವಿದೂಷಿ ಹೇಳಿಕೆಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿದೆ ಎನ್ನಬಹುದಾಗಿದೆ.