ದೇವರ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಮಿಂಚಲಿದ್ದಾರಂತೆ ಆ ಸ್ಟಾರ್ ನಟಿ, ವೈರಲ್ ಆದ ರೂಮರ್….!

RRR ಸಿನೆಮಾದ ಬಳಿಕ ಯಂಗ್ ಟೈಗರ್‍ ಎನ್.ಟಿ.ಆರ್‍ ದೇವರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಈ ಸಿನೆಮಾ ಟೀಸರ್‍ ಹಾಗೂ ಪೋಸ್ಟರ್‍ ನೋಡಿದ ಬಳಿಕ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟು ಆಗಿದೆ ಎಂದು ಹೇಳಬಹುದಾಗಿದೆ. ಇದೀಗ ಈ ಸಿನೆಮಾದ ಕುರಿತು ರೂಮರ್‍ ಒಂದು ಕೇಳಿಬರುತ್ತಿದೆ. ಅದರಂತೆ ಈ ಸಿನೆಮಾದಲ್ಲಿನ ಸ್ಪೇಷಲ್ ಸಾಂಗ್ ನಲ್ಲಿ ಸೌತ್ ಸ್ಟಾರ್‍ ನಟಿ ಸ್ಟೆಪ್ಸ್ ಹಾಕಲಿದ್ದಾರಂತೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟಿಯಾರು ಎಂಬ ವಿಚಾರಕ್ಕೆ ಬಂದರೇ,

ಟಾಲಿವುಡ್ ಸಿನಿರಂಗದ ನಂದಮೂರಿ ಕುಟುಂಬದ ಜೂನಿಯರ್‍ ಎನ್.ಟಿ.ಆರ್‍ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ತನ್ನದೇ ಆದ ಇಮೇಜ್ ಕ್ರಿಯೇಟ್ ಮಾಡಿಕೊಂಡು ಸಕ್ಸಸ್ ಪುಲ್ ಆಗಿ ಜರ್ನಿ ಸಾಗಿಸುತ್ತಿದ್ದಾರೆ. ಕೊನೆಯದಾಗಿ ಅವರು RRR ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡಿದ್ದರು. ಇದೀಗ ಅವರು ಸ್ಟಾರ್‍ ನಿರ್ದೇಶಕ ಕೊರಟಾಲ ಶಿವ ಸಾರಥ್ಯದಲ್ಲಿ ಸೆಟ್ಟೇರಿದ ದೇವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ಸಿನೆಮಾದ ಶೂಟಿಂಗ್ ಮುಗಿಯುತ್ತಿದ್ದಂತೆ ಜೂನಿಯರ್‍ ಎನ್.ಟಿ.ಆರ್‍ ರವರು ವಾರ್‍-2 ಎಂಬ ಸಿನೆಮಾದಲ್ಲಿ ನಟಿಸಲು ಮುಂಬೈಗೆ ಹಾರಿದ್ದಾರೆ.

ಇನ್ನೂ ಬಹುತೇಕ ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ ತುಂಬಾನೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು. ಇತ್ತೀಚಿಗೆ ಸ್ಟಾರ್‍ ನಟಿಯರೂ ಸಹ ಸ್ಪೇಷಲ್ ಸಾಂಗ್ ಗಳಲ್ಲಿ ನಟಿಸಿದ್ದನ್ನು ನಾವು ನೋಡಿದ್ದೇವೆ. ಇದೀಗ ದೇವರ ಸಿನೆಮಾದಲ್ಲೂ ಸಹ ಸ್ಟಾರ್‍ ನಟಿಯೊಬ್ಬರು ಹೆಜ್ಜೆ ಹಾಕಲಿದ್ದಾರಂತೆ. ಆಕೆ ಬೇರೆ ಯಾರೂ ಅಲ್ಲ ಸೌತ್ ಸ್ಟಾರ್‍ ನಟಿ ಪೂಜಾ ಹೆಗ್ಡೆ. ಹೌದು ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ದೇವರ ಸಿನೆಮಾದಲ್ಲಿ ಸ್ಪೇಷಲ್ ಹಾಡೊಂದಕ್ಕೆ ಪೂಜಾ ಹೆಗ್ಡೆ ಸೊಂಟ ಬಳುಕಿಸಲಿದ್ದಾರಂತೆ. ಈಗಾಗಲೇ ರಂಗಸ್ಥಳಂ ಸಿನೆಮಾದಲ್ಲಿ ಸ್ಟಾರ್‍ ನಟ ರಾಮ್ ಚರಣ್ ಜೊತೆಗೆ ಸ್ಪೇಷಲ್ ಸಾಂಗ್ ಮಾಡಿದ್ದರು. ಜೂನಿಯರ್‍ ಎನ್.ಟಿ.ಆರ್‍ ರವರ ಅರವಿಂದ ಸಮೇತ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾದಲ್ಲಿ ಸ್ಪೇಷಲ್ ಹಾಡಿನಲ್ಲಿ ಸದ್ದು ಮಾಡಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಇನ್ನೂ ದೇವರ ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರ ಜೊತೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಸಿದೆ ಎನ್ನಲಾಗಿದೆ. ಇದೀಗ ಪೂಜಾ ಹೆಗ್ಡೆ ಸ್ಪೇಷಲ್ ಹಾಡಿನಲ್ಲಿ ನೃತ್ಯ ಮಾಡುತ್ತಿರುವ ಸುದ್ದಿ ಕೇಳಿದ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ. ಈ ಸಿನೆಮಾ ಇದೇ ಅ.10 ರಂದು ತೆರೆಕಾಣಲಿದೆ.