ಸ್ಟಾರ್ ನಟನೊಂದಿಗೆ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಬಿಗ್ ಬಾಸ್ ಬ್ಯೂಟಿ ರತಿಕಾ ರೋಜ್….!

Follow Us :

ಬಿಗ್ ಬಾಸ್ ಮೂಲಕ ಅನೇಕರು ಫೇಮಸ್ ಆಗುತ್ತಾರೆ, ಜೊತೆಗೆ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಬ್ಬರಿಗೆ ಮಾತ್ರ ಅದೃಷ್ಟ ಅನೂಹ್ಯವಾಗಿ ದೊರೆಯುತ್ತಿದೆ ಎನ್ನಲಾಗುತ್ತದೆ. ಇದೀಗ ಅಂತಹುದೇ ಆಫರ್‍ ಒಂದನ್ನು ಬಿಗ್ ಬಾಸ್ ಫೇಂ ರತಿಕಾ ರೋಜ್ ಪಡೆದುಕೊಂಡಿದ್ದಾರೆ. ಆಕೆ ಕನಸಿನಲ್ಲೂ ಊಹಿಸಿದ ಅವಕಾಶ ಆಕೆಗೆ ದೊರೆತಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಣ್ಣದ ಲೋಕದಲ್ಲಿ ಸೌಂದರ್ಯ, ಅಭಿನಯದ ಜೊತೆಗೆ ಅದೃಷ್ಟ ಸಹ ಇರಬೇಕು ಎಂದು ಹೇಳಲಾಗುತ್ತದೆ. ಕೆಲವರಿಗೆ ಅನೂಹ್ಯವಾಗಿ ಅದೃಷ್ಟ ವರಿಸುತ್ತದೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಅವಕಾಶಗಳಿಗಾಗಿ ಎದುರುನೋಡುತ್ತಿರುವ ಕೆಲವರಿಗೆ ಅವಕಾಶಗಳು ಬರುತ್ತವೆ. ಈ ಹಾದಿಯಲ್ಲೇ ಬಿಗ್ ಬಾಸ್ ಬ್ಯೂಟಿ ರತಿಕಾ ರೋಜ್ ಗೆ ಭರ್ಜರಿ ಆಫರ್‍ ಒಂದು ಬಂದಿದೆ. ರತಿಕಾಗೆ ಸಿಕ್ಕಿದ್ದು ಅಂತಿಂತಾ ಆಫರ್‍ ಅಲ್ಲ ಓರ್ವ ಸ್ಟಾರ್‍ ನಟನ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಆ ನಟ ಬೇರ್ಯಾರು ಅಲ್ಲ ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್. ಹೌದು ರತಿಕಾ ರೋಜ್ ಗೆ ದಳಪತಿ ವಿಜಯ್ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆತಿದೆ ಎನ್ನಲಾಗಿದೆ. ಇಂತಹ ಅವಕಾಶ ದೊರೆಯಲು ತುಂಬಾ ಅದೃಷ್ಟವೇ ಮಾಡಿರಬೇಕು. ಈ ಲಕ್ಕಿ ಚಾನ್ಸ್ ರತಿಕಾಗೆ ದೊರೆತಿದೆ. ಸಣ್ಣ ಪಾತ್ರಗಳ ಮೂಲಕ ಪಾಪ್ಯುಲರ್‍ ಆಗುತ್ತಿದ್ದ ನಟಿಗೆ ಇಂತಹ ದೊಡ್ಡ ಅವಕಾಶ ಸಿಕ್ಕಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ.

ಆದರೆ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶವಿದೆ ಎಂಬುದು ಅಧಿಕೃತವಾಗಿ ಪ್ರಕಟವಾಗಿಲ್ಲ. ಅಧಿಕೃತವಾಗಿ ಘೋಷಣೆಯಾದರೇ ರತಿಕಾ ರೋಜ್ ಗೆ ಅದೃಷ್ಟ ವರಿಸಿದೆ ಎಂದೇ ಹೇಳಬಹುದು. ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಒಂದೇ ಸಮನೇ ಏರಬಹುದು ಎನ್ನಲಾಗುತ್ತಿದೆ. ಬಿಗ್ ಬಾಸ್ ಸೀಸನ್ 7 ಮುಕ್ತಾಯವಾಗಿದೆ. ಈ ಬಿಗ್ ಬಾಸ್ ಶೋ ನಲ್ಲಿ ಭಾಗಿಯಾಗಿದ್ದ ಕೆಲವರಿಗೆ ಬೆಟರ್‍ ಆಗಿರುವಂತಹ ಅವಕಾಶಗಳು ಬಂದಿದೆ. ಅದರಲ್ಲೂ ಆಸ್ಕರ್‍ ವರೆಗೂ ಹೋಗಿದವ ರಾಹುಲ್ ಸಿಂಪ್ಲಿಗಂಜ್. ಈ ಹಿಂದೆ ಸಿರಿ ಹನುಮಂಥ್ ಸಹ ಬಾಲಿವುಡ್ ಸ್ಟಾರ್‍ ನಟ ಶಾರುಖ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಆದರೆ ಇದೀಗ ರತಿಕಾ ರೋಜ್ ಮಾತ್ರ ಕಾಲಿವುಡ್ ಸ್ಟಾರ್‍ ವಿಜಯ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಸದ್ಯ ಈ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ.