Film News

ಹೈದರಾಬಾದ್ ನ ಚಾರ್ಮಿನಾರ್ ಬಳಿ ಸಾಮಾನ್ಯರಂತೆ ಶಾಪಿಂಗ್ ಮಾಡಿದ ಜೂನಿಯರ್ ಎನ್.ಟಿ.ಆರ್ ಪತ್ನಿ ಪ್ರಣತಿ…..!

ಗ್ಲೋಬರ್‍ ಸ್ಟಾರ್‍ ಯಂಗ್ ಟೈಗರ್‍ ಎನ್.ಟಿ.ಆರ್‍ RRR ಸಿನೆಮಾದ ಮೂಲಕ ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಈ ಸಿನೆಮಾದ ನಾಟು ನಾಟು ಹಾಡು ಆಸ್ಕರ್‍ ಪಡೆದುಕೊಂಡ ಬಳಿಕ ಮತಷ್ಟು ಕ್ರೇಜ್ ಹೆಚ್ಚಿದೆ. ಇನ್ನೂ ಟಾಲಿವುಡ್ ಲ್ಲಿ ಕ್ಯೂಟ್ ಕಪಲ್ ಎಂದು ಎನ್.ಟಿ.ಆರ್‍ ಹಾಗೂ ಪ್ರಣತಿ ಜೋಡಿಯನ್ನು ಕರೆಯಲಾಗುತ್ತದೆ.  ಅವರ ಅನ್ಯೋನ್ಯ ದಾಂಪತ್ಯ ಅನೇಕರಿಗೆ ಮಾದರಿಯಾಗಿದೆ ಎಂದು ಹೇಳಬಹುದಾಗಿದೆ. ಇನ್ನೂ ಪ್ರಣತಿ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ಪೊಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸಿಂಪ್ಲಿಸಿಟಿ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೂನಿಯರ್‍ ಎನ್.ಟಿ.ಆರ್‍ ಪತ್ನಿ ಪ್ರಣತಿ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರುವುದಿಲ್ಲ. ಆದರೆ ಆಕೆ ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಆ ಪೊಟೋಗಳು ಕ್ಷಣದಲ್ಲೆ ವೈರಲ್ ಆಗುತ್ತಿರುತ್ತದೆ. ಇದೀಗ ಲಕ್ಷ್ಮೀ ಪ್ರಣತಿಗೆ ಸಂಬಂಧಿಸಿದ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ಚಾರ್ಮಿನಾರ್‍ ಬಳಿ ನೈಟ್ ಬಜಾರ್‍ ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಶಾಪಿಂಗ್ ಮಾಡಿದ್ದಾರೆ. ಈ ವೇಳೆ ಪ್ರಣತಿ ಒಬ್ಬರೇ ಬಂದು ಸಾಮಾನ್ಯರಂತೆ ಶಾಪಿಂಗ್ ಮಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಆಕೆಯನ್ನು ಅಕ್ಕರೆಯಿಂದ ಅತ್ತಿಗೆ ಎಂದು ಕ್ಯಾಪ್ಷನ್ ಗಳನ್ನು ಹಾಕುತ್ತಾ ಪೊಟೊಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಲಕ್ಷ್ಮೀ ಪ್ರಣತಿ ಓರ್ವ ಸ್ಟಾರ್‍ ನಟನ ಹೆಂಡತಿಯಾದರೂ ಸಹ ತುಂಬಾ ಸಿಂಪಲ್ ಆಗಿ ಜನರ ಮಧ್ಯೆ ಶಾಪಿಂಗ್ ಮಾಡಿರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಆಕೆಯ ಈ ಸರಳತೆಯನ್ನು ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಲಕ್ಷ್ಮೀ ಪ್ರಣತಿ ಹೆಚ್ಚಾಗಿ ಸಿನೆಮಾ ಈವೆಂಟ್ ಗಳಲ್ಲಾಗಲಿ, ಅಥವಾ ಬೇರೆ ಫಂಕ್ಷನ್ ಗಳಲ್ಲಾಗಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದೀಗ ಆಕೆ ಚಾರ್ಮಿನಾರ್‍ ಬಳಿ ಸರಳವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೂ RRR ಗೆ ಆಸ್ಕಾರ್‍ ಅವಾರ್ಡ್ ಬಂದಿದ್ದು, ಈ ಅವಾರ್ಡ್ ಫಂಕ್ಷನ್ ನಲ್ಲೂ ಎನ್.ಟಿ.ಆರ್‍ ಜೊತೆಗೆ ಪ್ರಣತಿ ಸಹ ಬಂದಿದ್ದರು. ಈ ವೇಳೆ ಆಕೆ ಟ್ರೆಂಡಿ ಡ್ರೆಸ್ ಗಳಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಪ್ರಣತಿ ರವರ ಮದುವೆ ಕಳೆದ 2011 ರಲ್ಲಿ ಭಾರಿ ಅದ್ದೂರಿಯಾಗಿ ನಡೆದಿತ್ತು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು. ಜೂನಿಯರ್‍ ಎನ್.ಟಿ.ಆರ್‍ ತಮ್ಮ ಸಿನೆಮಾಗಳ ಶೂಟಿಂಗ್ ನಿಂದ ಬಿಡುವು ಸಿಕ್ಕರೇ ಸಾಕು ಕುಟುಂಬದೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಜೊತೆಗೆ ಹಲವು ಕಡೆ ವೇಕೇಷನ್ ಗೆ ಸಹ ಹಾರುತ್ತಿರುತ್ತಾರೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ NTR30 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಪೋಸ್ಟರ್‍ ಗಳು ಈಗಾಗಲೇ ಅಭಿಮಾನಿಗಳು ಹೈಪ್ ಕ್ರಿಯೇಟ್ ಮಾಡಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ.

Most Popular

To Top