Film News

ಅಂತೂ ಇಂತೂ ಮದುವೆಗೆ ರೆಡಿಯಾದ ಸುಡಿಗಾಲಿ ಸುಧೀರ್, ಅಷ್ಟಕ್ಕೂ ಸುಧೀರ್ ಮದುವೆಯಾಗಲಿರುವುದು ಯಾರು ಗೊತ್ತಾ?

ತೆಲುಗಿನ ಖ್ಯಾತ ತೆಲುಗು ಕಾಮಿಡಿ ಶೋ ಜಬರ್ದಸ್ತ್ ಮೂಲಕ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಾ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ರಂಜಿಸಿದ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಲ್ಲಿ ಸುಡಿಗಾಲಿ ಸುಧೀರ್‍ ಸಹ ಒಬ್ಬರಾಗಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಸುಧೀರ್‍ ಮದುವೆಯ ಬಗ್ಗೆ ಸಹ ಆಗಾಗ ಪ್ರಶ್ನೆಗಳೂ ಸಹ ಎದುರಾಗುತ್ತಿರುತ್ತದೆ. ಇದೀಗ ಸುಧೀರ್‍ ಮದುವೆಯಾಗಲಿದ್ದಾರೆಂಬ ಸುದ್ದಿಯೊಂದು ಹರಿದಾಡುತ್ತಿದೆ.

ಜಬರ್ದಸ್ತ್ ಶೋನಲ್ಲಿ ಸುಧೀರ್‍ ಜೊತೆಗೆ ಕಾಣಿಸಿಕೊಂಡ ರಾಮ್ ಪ್ರಸಾದ್, ಗೆಟಪ್ ಶ್ರೀನು ಈಗಾಗಲೇ ಮದುವೆಯಾಗಿ ಮಕ್ಕಳನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ಸುಧೀರ್‍ ಮಾತ್ರ ಇನ್ನೂ ಮದುವೆಯಾಗಿಲ್ಲ. ಸುಧೀರ್‍ ಕಿರಿಯ ಸಹೋದರನಿಗೂ ಸಹ ಈಗಾಗಲೇ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಜಬದರ್ಸ್ತ್ ಶೋ ನಲ್ಲಿ ರಶ್ಮಿ ಹಾಗೂ ಸುಧೀರ್‍ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅವರಿಬ್ಬರ ರೊಮ್ಯಾನ್ಸ್ ಕಿರುತೆರೆಯಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಇನ್ನೂ ಒಂದು ಕಡೆ ಈ ಸುದ್ದಿ ಸುಳ್ಳು ಎಂತಲೂ, ಮತ್ತೊಂದು ಕಡೆ ಲವ್ ಇರುವುದು ನಿಜ ಎಂತಲೂ ಹೇಳುವಂತೆ ಹಿಂಟ್ಸ್ ಸಹ ನೀಡುತ್ತಿರುತ್ತಾರೆ. ಆದರೆ ಶೋ ನಲ್ಲಿ ಅವರಿಬ್ಬರೂ ಟಿ.ಆರ್‍.ಪಿ ಗಾಗಿಗಯೇ ಲವರ್ಸ್ ಆಗಿ ನಟಿಸಿದ್ದಾರೆ. ಅವರಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಅವರ ಹತ್ತಿರದವರು ಹೇಳುತ್ತಿರುತ್ತಾರೆ.

ಇನ್ನೂ ಈ ಹಾದಿಯಲ್ಲೇ ಸುಧೀರ್‍ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇನ್ನೂ ಈ ರೂಮರ್‍ ಹರಿದಾಡುತ್ತಿದ್ದಂತೆ ಆ ಹುಡುಗಿ ಯಾರೆಂಬ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ಸುಧೀರ್‍ ತನ್ನ ಸಂಬಂಧಿಕರ ಹುಡುಗಿಯನ್ನು ಮದುವೆಯಾಗಲಿದ್ದಾರಂತೆ. ಸದ್ಯ ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇ‌ನ್ನೂ ಇದೇ ರೀತಿಯ ಸುದ್ದಿಗಳು ಅನೇಕ ಬಾರಿ ಕೇಳಿಬಂದಿತ್ತು. ಅವೆಲ್ಲವೂ ನಿರಾಧಾರವಾದುದು ಎಂದು ಬಳಿಕ ತಿಳಿದು ಬಂದಿತ್ತು. ಇದೀಗ ಮತ್ತೊಮ್ಮೆ ಸುಧೀರ್‍ ಮದುವೆಯ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಇದಾದರೂ ನಿಜವಾದ ಸುದ್ದಿಯೇ ಅಥವಾ ಇದೂ ಸಹ ಫೇಕ್ ಸುದ್ದಿಯೇ ಎಂಬುದನ್ನು ತಿಳಿಯಲು ಕಾದು ನೋಡಬೇಕಿದೆ.

ಇನ್ನೂ ಜಬರ್ದಸ್ತ್ ಶೋ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಸುಧೀರ್‍ ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಸುಧೀರ್‍ ಗಾಲೋಡು ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡ ಹಿನ್ನೆಲೆಯಲ್ಲಿ ಸುಧೀರ್‍ ಗೆ ಮತಷ್ಟು ಆಫರ್‍ ಗಳು ಬರುತ್ತಿವೆ ಎನ್ನಲಾಗಿದೆ. ಇದೀಗ ಸಹಸ್ರ ಎಂಬ ಸಿನೆಮಾದಲ್ಲಿ ಸಹ ಸುಧೀರ್‍ ನಟಿಸುತ್ತಿದ್ದಾರೆ.

Most Popular

To Top