ರಾಮ್ ಚರಣ್ ಹುಟ್ಟುಹಬ್ಬದ ಪಾರ್ಟಿಗೆ ಎನ್.ಟಿ.ಆರ್ ಗೈರು, ತೆಲುಗು ಸಿನಿರಂಗದಲ್ಲೊಂದು ಹಾಟ್ ಟಾಪಿಕ್…!

Follow Us :

ತೆಲುಗು ಸಿನಿರಂಗದ ಸ್ಟಾರ್‍ ನಟರಾದ ರಾಮ್ ಚರಣ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ತುಂಬಾ ಒಳ್ಳೆಯ ಸ್ನೇಹಿತರು. RRR ಸಿನೆಮಾಗೂ ಮುಂಚೆಯೇ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬಾಂದವ್ಯವಿದೆ. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ತಮ್ಮ ಕುಟುಂಬದೊಂದಿಗೆ ಭಾಗಿಯಾಗುತ್ತಿದ್ದರು. ಅದರಲ್ಲೂ RRR ಸಿನೆಮಾದ ಪ್ರಮೋಷನ್ ನಲ್ಲಂತೂ ಇಬ್ಬರ ಬಾಂದವ್ಯ ನೋಡಿ ಮೆಗಾ ಫ್ಯಾನ್ಸ್ ಹಾಗೂ ನಂದಮೂರಿ ಫ್ಯಾನ್ಸ್ ಸಹ ಆಶ್ಚರ್ಯಗೊಂಡಿದ್ದರು. ಜೊತೆಗೆ ಚರಣ್ ನನ್ನ ಬ್ರದರ್‍ ಎನ್.ಟಿ.ಆರ್‍ ಸ್ನೇಹವನ್ನು ನಾನು ಎಂದಿಗೂ ಬಿಡೋಲ್ಲ ಎಂದು ಸಾರ್ವಜನಿಕವಾಗಿಯೇ ಹೇಳಿದ್ದರು. ಇದೀಗ ಚರಣ್ ಹುಟ್ಟುಹಬ್ಬಕ್ಕೆ ಜೂನಿಯರ್‍ ಎನ್.ಟಿ.ಆರ್‍ ಗೈರು ಹಾಜರಾಗಿರುವುದು ಹಾಟ್ ಟಾಪಿಕ್ ಆಗಿದೆ.

ಇನ್ನೂ ರಾಮ್ ಚರಣ್ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ನೆರವೇರಿಸಿದ್ದರು. ಈ ಪಾರ್ಟಿಗೆ ಅನೇಕ ಸೆಲೆಬ್ರೆಟಿಗಳು ಹಾಜರಾಗಿ ಚರಣ್ ಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದರು. ಚರಣ್ ಗೆ ತುಂಬಾ ಹತ್ತಿರವಾದ ಸ್ನೇಹಿತ ಜೂನಿಯರ್‍ ಎನ್.ಟಿ.ಆರ್‍ ಮಾತ್ರ ಈ ಪಾರ್ಟಿಗೆ ಬಂದಿಲ್ಲ. ಎನ್.ಟಿ.ಆರ್‍ ವಿದೇಶದಲ್ಲಿದ್ದೂ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೇ ಆತನ ಬರದೇ ಇದ್ದರೂ ಸಹ ಒಂದು ಅರ್ಥ ಇರುತ್ತಿತ್ತು. ಆದರೆ ಅವರು ಹೈದರಾಬಾದ್ ನಲ್ಲಿಯೇ ಇದ್ದಾರೆ. ಇನ್ನೂ NTR30 ಸಿನೆಮಾ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೂಟಿಂಗ್ ಇನ್ನೂ ಆರಂಭವಾಗಿಲ್ಲ ಇನ್ನೂ ಚರಣ್ ಹುಟ್ಟು ಹಬ್ಬಕ್ಕೆ ಎನ್.ಟಿ.ಆರ್‍ ಹಾಗೂ ಪ್ರಣಿತಿ ಹಾಜರಾಗಬೇಕಿತ್ತು. ಆದರೆ ಎನ್.ಟಿ.ಆರ್‍ ಚರಣ್ ಬರ್ತ್‌ಡೇ ಪಾರ್ಟಿಗೆ ಬಾರದ ಕಾರಣ ಈ ಸುದ್ದಿಯೇ ಇದೀಗ ಹಾಟ್ ಟಾಪಿಕ್ ಆಗಿದೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಸೋಷಿಯಲ್ ಮಿಡಿಯಾದಲ್ಲಿ ರಾಮ್ ಚರಣ್ ಹುಟ್ಟುಹಬ್ಬದ ಶುಭಾಷಯ ಕೋರಿದ್ದರು ಆದರೆ ಪಾರ್ಟಿಗೆ ಮಾತ್ರ ಗೈರು ಆಗಿದ್ದರು. ಈ ಕಾರಣದಿಂದ RRR ಸಿನೆಮಾದ ಸಕ್ಸಸ್ ಕ್ರೆಡಿಟ್, ಫೇಮ್ ಅಂಡ್ ನೇಮ್ ವಿಚಾರದಲ್ಲಿ ಇಬ್ಬರ ನಡುವೆ ವಿಬೇದಗಳು ಏನಾದರೂ ಹುಟ್ಟಿಕೊಂಡಿದೆಯೇ ಅಥವಾ ಇಬ್ಬರ ನಡುವೆ ದೂರ ಸೃಷ್ಟಿಯಾಗಿದೆಯೇ ಎಂಬ ವಾದಗಳೂ ಸಹ ಕೇಳಿಬರುತ್ತಿವೆ. ಇನ್ನೂ RRR ಸಿನೆಮಾ ಬಿಡುಗಡೆಯ ಸಮಯದಲ್ಲಿ ಎನ್.ಟಿ.ಆರ್‍ ಹಾಗೂ ರಾಮ್ ಚರಣ್ ಫ್ಯಾನ್ ನಡುವೆ ಕೆಲವೊಂದು ವಿವಾದಗಳೂ ಸಹ ಸೃಷ್ಟಿಯಾಗಿತ್ತು. ಎನ್.ಟಿ.ಆರ್‍ ದೊಡ್ಡವರು ಎಂದರೇ, ಚರಣ್ ದೊಡ್ಡವರು ಎಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ರಾದ್ದಾಂತ ಸಹ ನಡೆಯಿತು.

ಇನ್ನೂ ಅಭಿಮಾನಿಗಳ ಈ ರಾದ್ದಾಂತದ ಬಗ್ಗೆ ಹಿರೋಗಳು ಹಿಡಿಸಿಕೊಳ್ಳುವುದಿಲ್ಲ. ಇದೀಗ ಚರಣ್ ಹುಟ್ಟುಹಬ್ಬಕ್ಕೆ ಎನ್.ಟಿ.ಆರ್‍ ಬರದೇ ಇರುವುದನ್ನು ನೆಗೆಟೀವ್ ಆಗಿ ಕಾಣಬಾರದು ಎಂದು ಕೆಲವರ ಅಭಿಪ್ರಾಯವಾಗಿದೆ. ಎನ್.ಟಿ.ಆರ್‍ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಎನ್.ಟಿ.ಆರ್‍ ಬರಲು ಆಗಲಿಲ್ಲವೇನೋ ಎಂಬ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಚರಣ್ ಹುಟ್ಟಿಹಬ್ಬಕ್ಕೆ ರಾಜಮೌಳಿ, ಕೀರವಾಣಿ, ಅಖಲ್, ವಿಜಯ್ ದೇವರಕೊಂಡ, ರಾಣಾ, ವೆಂಕಟೇಶ್, ಪ್ರಶಾಂತ್ ನೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.