Film News

ಕ್ಯಾಮೆರಾಗಳಿಗೆ ಬಾಲಿವುಡ್ ನಟಿಯೊಂದಿಗೆ ಸಿಕ್ಕಿಬಿದ್ದ ಶಾರುಖ್ ಪುತ್ರ ಆರ್ಯನ್ ಖಾನ್, ವೈರಲ್ ಆದ ಪೊಟೋಸ್….!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರವರ ಪುತ್ರ ಆರ್ಯನ್ ಖಾನ್ ವೈಯುಕ್ತಿಕ ವಿಚಾರಗಳ ಕಾರಣದಿಂದ ದೊಡ್ಡ ಮಟ್ಟದಲ್ಲೇ ಸುದ್ದಿಯಾದರು. ಡ್ರಗ್ ಕೇಸ್ ನಲ್ಲಿ ಆರ್ಯನ್ ಖಾನ್ ಹೆಸರು ಸಿಲುಕಿಕೊಂಡಿತ್ತು. ಅವರ ಹೆಸರು ದೇಶದಾದ್ಯಂತ ಭಾರಿ ಮಟ್ಟದ್ಲಲಿ ಚರ್ಚೆಯಾಯಿತು. ಇದರ ಜೊತೆಗೆ ಆತ ಮತಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಇದೀಗ ಶಾರುಖ್ ಪುತ್ರ ಆರ್ಯನ್ ಖಾನ್ ಬಾಲಿವುಡ್ ನಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಸೋಷಿಯ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಂತೆ ಅವರ ಮಕ್ಕಳಿಗೂ ಸಹ ಫಾಲೋಯಿಂಗ್ ಇದ್ದೇ ಇರುತ್ತದೆ. ಅವರ ಮಕ್ಕಳು ಎಲ್ಲಿ ಹೋಗುತ್ತಿರುತ್ತಾರೆ ಏನು ಮಾಡುತ್ತಾರೆ ಎಂಬುದನ್ನು ತಿಳಿಯಲು ಅವರ ಅಭಿಮಾನಿಗಳಲ್ಲಿ ಸಹ ಆಸಕ್ತಿ ಹೆಚ್ಚಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೆಲೆಬ್ರೆಟಿಗಳ ಮಕ್ಕಳ ಚಲನವಲನಗಳ ಬಗ್ಗೆ ಕಣ್ಣಿಟ್ಟುರುತ್ತಾರೆ. ಅವರು ಏನು ಮಾಡಿದರೂ ಕ್ಷಣದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಸೆಲೆಬ್ರೆಟಿಗಳ ಜೊತೆಗೆ ಅವರ ಮಕ್ಕಳು ಸಹ ಏನೇ ಮಾಡಿದರೂ ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತಿರುತ್ತದೆ. ಈ ಕಾರಣದಿಂದಲೇ ಸ್ಟಾರ್‍ ಗಳು ತಮ್ಮ ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆಗಳನ್ನೂ ಸಹ ತೆಗೆದುಕೊಳ್ಳುತ್ತಿರುತ್ತಾರೆ. ಇದೀಗ ಶಾರುಖ್ ಪುತ್ರ ಆರ್ಯನ್ ಖಾನ್ ಬಾಲಿವುಡ್ ನಟಿಯೊಂದಿಗೆ ಪಾರ್ಟಿಯೊಂದರಲ್ಲಿ ಸಿಕ್ಕಿಬಿದ್ದಿದ್ದಾನೆ.

ಶಾರುಖ್ ಪುತ್ರ ಆರ್ಯನ್ ಖಾನ್ ಪಾರ್ಟಿಯೊಂದರಲ್ಲಿ ಬಾಲಿವುಡ್ ನಟಿಯೊಂದಿಗೆ ಎಂಜಾಯ್ ಮಾಡುತ್ತಾ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅದರಲ್ಲೂ ಆ ನಟಿ ಈ ಪೊಟೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ಆಕೆ ಈ ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಇನ್ನೂ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆರ್ಯನ್ ಖಾನ್ ಹೊಸ ಗರ್ಲ್ ಫ್ರೆಂಡ್ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಆರ್ಯನ್ ಖಾನ್ ಜೊತೆಗೆ ಕಾಣಿಸಿಕೊಂಡ ಆ ಬಾಲಿವುಡ್ ನಟಿಯಾರು ಎಂಬ ವಿಚಾರಕ್ಕೆ ಬಂದರೇ,

ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ನಟಿ ರೋಷಿನಿ ವಾಲಿಯಾ. ಆಕೆಯೊಂದಿಗೆ ಜೊತೆಗೂಡಿ ಆರ್ಯನ್ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದರು.  ಈ ಸಂಬಂಧ ಪೊಟೋ ಒಂದನ್ನು ರೋಷಿನಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಎಬೌಟ್ ಲಾಸ್ಟ್ ನೈಟ್ ಎಂದು ಕ್ಯಾಪ್ಷನ್ ಸಹ ಹಾಕಿದ್ದರು. ಈ ಪೊಟೋಗಳಲ್ಲಿ ರೋಷಿನಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

Most Popular

To Top