ಸೌಂದರ್ಯ ಪ್ರದರ್ಶದಲ್ಲಿ ಪೈಪೋಟಿಗೆ ಇಳಿದ ಅಕ್ಕ ತಂಗಿ, ಕಾಜಲ್ ಅಗರ್ವಾಲ್ ಹಾಗೂ ನಿಶಾ ಅಗರ್ವಾಲ್ ನಡುವೆ ಸೌಂದರ್ಯ ಯುದ್ದ…!

Follow Us :

ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಬಹುಬೇಡಿಕೆ ಹೊಂದಿದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಒಬ್ಬರಾಗಿದ್ದಾರೆ. ಆದರೆ ಆಕೆಯ ತಂಗಿ ನಿಶಾ ಅಗರ್ವಾಲ್ ಮಾತ್ರ ಸ್ಟಾರ್‍ ಆಗಲು ವಿಫಲರಾದರು ಎಂದೇ ಹೇಳಬಹುದು. ಸಿನಿರಂಗದಲ್ಲಿ ಹಿರೋಯಿನ್ ಗಳಾದ ಅಕ್ಕ ತಂಗಿಯರು ಕಡಿಮೆ ಇರುತ್ತಾರೆ. ಈ ಸಾಲಿಗೆ ಕಾಜಲ್ ಹಾಗೂ ನಿಶಾ ಅಗರ್ವಾಲ್ ಸೇರುತ್ತಾರೆ. ಕಾಜಲ್ ನಂತೆ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಲು ನಿಶಾ ಅಗರ್ವಾಲ್ ಮುಂದಾದರು ಆದರೆ ಆಕೆ ಮಾತ್ರ ಸ್ಟಾರ್‍ ಆಗಲು ಆಗಲಿಲ್ಲ. ಆದರೆ ಇಬ್ಬರೂ ಸೇರಿ ಆಗಾಗ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿರುತ್ತಾರೆ.

ನಟಿ ಕಾಜಲ್ ಅಗರ್ವಾಲ್ ಕಡಿಮೆ ಸಮಯದಲ್ಲೇ ಒಳ್ಳೆಯ ಸಕ್ಸಸ್ ಕಂಡುಕೊಂಡು ಸ್ಟಾರ್‍ ನಟಿಯಾದರು. ಇನ್ನೂ ನಿಶಾ ಅಗರ್ವಾಲ್ ಕಳೆದ 2010 ರಲ್ಲಿ ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿಬಂದ ಏಮೈಂದಿ ಈ ವೇಳ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲಿ ನಟಿಸಿದ್ದರು. ಬಳಿಕ ಸೊಲೋ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಎರಡೂ ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಬಳಿಕ ನಿಶಾ ಅಕ್ಕನಂತೆ ಬಹುಬೇಡಿಕೆ ನಟಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ ಸೊಲೋ ಸಿನೆಮಾದ ಬಳಿಕ ಆಕೆಯ ಖಾತೆಯಲ್ಲಿ ಯಾವುದೇ ಹಿಟ್ ಸಿನೆಮಾ ಸಿಗಲಿಲ್ಲ. 2013 ರಲ್ಲಿ ಉದ್ಯಮಿ ಕರಣ್ ವಾಲೆಚಾ ಎಂಬಾತನೊಂದಿಗೆ ನಿಶಾ ಮದುವೆಯಾದರು. ಮದುವೆಯ ಬಳಿಕ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿದರು. ಇನ್ನೂ ನಿಶಾ ಅಗರ್ವಾಲ್ ಗೆ ಒಬ್ಬ ಮಗ ಸಹ ಇದ್ದಾನೆ. ಸಿನೆಮಾಗಳಿಂದ ದೂರವಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಕಾಜಲ್ ಅಗರ್ವಾಲ್ ಸಹ ಕಳೆದ 2020 ರಲ್ಲಿ ಮದುವೆಯಾದರು. ಸದ್ಯ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಅಕ್ಕ ತಂಗಿಯರಿಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಆಕರ್ಷಣೆ ಮಾಡುತ್ತಿರುತ್ತಾರೆ.  ಇದೀಗ AZA ಎಂಬ ಮ್ಯಾಗ್ ಜೈನ್ ಒಂದಕ್ಕಾಗಿ ಅಕ್ಕ ತಂಗಿ ಪೈಪೋಟಿಗೆ ಬಿದ್ದಂತೆ ಹಾಟ್ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ನೋಡಿದ ಅಭಿಮಾನಿಗಳು ಅಕ್ಕ ತಂಗಿಯರು ಸೌಂದರ್ಯ ಪ್ರದರ್ಶನಕ್ಕೆ ಪೈಪೋಟಿಗೆ ಬಿದ್ದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ವಾರ್‍ ಶುರು ಮಾಡಿದ್ದಾರೆ ಎಂಬ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಾಜಲ್ ಸದ್ಯ ಭಾರತೀಯುಡು-2 ಸಿನೆಮಾದಲ್ಲಿ ಮೈನ್ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಈ ಸಿನೆಮಾ ಮೂಡಿಬರಲಿದೆ. ಜೊತೆಗೆ ನಂದಮೂರಿ ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಸಿನೆಮಾದಲ್ಲೂ ಸಹ ಕಾಜಲ್ ನಟಿಸುತ್ತಿದ್ದಾರೆ. ಜೊತೆಗೆ ಆಕೆ ತನ್ನ ಪತಿ ಗೌತಮ್ ಕಿಚ್ಲು ವ್ಯಾಪಾರದ ಪ್ರಮೋಷನ್ ಸಹ ಮಾಡುತ್ತಿರುತ್ತಾರೆ. ಕೊನೆಯದಾಗಿ ಆಕೆ ಘೋಸ್ಟಿ ಎಂಬ ಹಾರರ್‍ ಕಾಮಿಡಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.