Film News

ಗ್ಲೋಬಲ್ ಸ್ಟಾರ್ ರಾಮ್ ಚರಣ್ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಪತ್ನಿ ಮಗಳೊಂದಿಗೆ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ನಟ….!

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಾ.27 ಅವರ ಹುಟ್ಟುಹಬ್ಬವಾಗಿದ್ದು, ಇಂದಿಗೆ ಅವರು 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸ್ಟಾರ್‍ ಗಳು ಸಹ ರಾಮ್ ಚರಣ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದಂದು ರಾಮ್ ಚರಣ್, ಅವರ ಪತ್ನಿ ಉಪಾಸನಾ ಹಾಗೂ ಮಗಳು ಕ್ಲಿಂಕಾರ ಜೊತೆಗೆ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಸಂಬಂಧ ಕೆಲವು ಪೊಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ನಟ ರಾಮ್ ಚರಣ್ 1985 ರ ಮಾರ್ಚ್ 27 ರಂದು ಚೆನೈನಲ್ಲಿ ಜನ್ಮ ತಾಳಿದರು. ಇಂದಿಗೆ ಅವರು 3೯ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಚರಣ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ. ಮೆಗಾ ಕುಟುಂಬದೊಂದಿಗೆ ಅಭಿಮಾನಿಗಳೂ ಸಹ ದೊಡ್ಡ ಮಟ್ಟದಲ್ಲೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇನ್ನೂ ಸಿನೆಮಾ ಸ್ಟಾರ್‍ ಗಳೂ ಸೇರಿದಂತೆ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಕಳೆದ ವರ್ಷ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಮಗು ಜನಿಸಿದ ಬಳಿಕ ರಾಮ್ ಚರಣ್ ಮೊದಲ ಬಾರಿಗೆ ತನ್ನ ಪತ್ನಿ ಹಾಗೂ ಮಗಳೊಂದಿಗೆ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಅವರು ತಿರುಮಲದಲ್ಲಿ ಕಾಣಿಸಿಕೊಂಡ ಪೊಟೋಗಳು ವಿಡಿಯೋ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟ ರಾಮ್ ಚರಣ್ ಹಾಗೂ ಅವರ ಕುಟುಂಬ ಮಂಗಳವಾರ ಸಾಯಂಕಾಲವೇ ತಿರುಮಲಕ್ಕೆ ಆಗಮಿಸಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯವಾಗಿದ್ದ ಅಭಿಮಾನಿಗಳು ಅಲ್ಲಿಗೆ ಹೋಗಿದ್ದಾರೆ. ವಿಮಾನ  ನಿಲ್ದಾಣದಿಂದಲೇ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಜೊತೆಗೆ ತಿರುಮಲದಲ್ಲೂ ಸಹ ಅಭಿಮಾನಿಗಳು ಸದ್ದು ಮಾಡಿದ್ದಾರೆ. ಮಗಳು ಜನಿಸಿದ ಬಳಿಕ ಮೊದಲ ಬಾರಿಗೆ ಕುಟುಂಬದೊಂದಿಗೆ ಚರಣ್ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೀತ ಈ ಸಿನೆಮಾವನ್ನು ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದಲ್ಲಿ ರಾಮ್ ಚರಣ್ ದ್ವಿಪಾತ್ರಾಭಿನಯ ಮಾಡಲಿದ್ದಾರೆ. ರಾಜಕೀಯ ನಾಯಕನಾಗಿ ಹಾಗೂ ಐಎಎಸ್ ಅಧಿಕಾರಿಯಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎನ್ನಲಾಗಿದೆ.

Most Popular

To Top