Film News

ಬೋಲ್ಡ್ ದೃಶ್ಯಗಳಲ್ಲಿ ನಟಿಸೋದು ಎಷ್ಟು ಸಮಸ್ಯೆ ಎಂಬುದು ನಮಗೆ ಮಾತ್ರ ಗೊತ್ತು, ಅದು ಅಷ್ಟೊಂದು ಸುಲಭವಲ್ಲ ಎಂದ ಅನುಪಮಾ…..!

ಮಲ್ಲು ಬ್ಯೂಟಿ ಅನುಪಮಾ ಪರಮೇಶ್ವರನ್ ಸದ್ಯ ಭಾರಿ ಸುದ್ದಿಯಾಗುತ್ತಿದ್ದಾರೆ. ಆಕೆ ಅಭಿನಯದ ಟಿಲ್ಲು ಸ್ಕ್ವೇರ್‍ ಎಂಬ ಸಿನೆಮಾದಲ್ಲಿ  ತುಂಬಾನೆ ಬೋಲ್ಡ್ ಆಗಿ ನಟಿಸಿದ್ದಾರೆ. ಅನುಪಮಾ ಪರಮೇಶ್ವರನ್ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದರು.  ಆದರೆ ಕಳೆದ ವರ್ಷ ಮಾತ್ರ ಆಕೆ ಓವರ್‍ ಆಗಿಯೇ ಕಾಣಿಸಿಕೊಂಡಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದರು. ಇದೀಗ ಆಕೆ ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು ಅವು ವೈರಲ್ ಆಗುತ್ತಿವೆ.

ನಟಿ ಅನುಪಮಾ ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಸದ್ಯ ನಟಿ ಅನುಪಮಾ ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಕೆಲವೇ ದಿನಗಳಲ್ಲಿ   ತೆರೆಕಾಣಲಿದೆ. ಈ ಸಿನೆಮಾದಲ್ಲಿ ಅನುಪಮಾ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‍ ಹಾಗೂ ಹಾಡುಗಳಲ್ಲಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಬೋಲ್ಡ್ ಆಗಿ ನಟಿಸುವುದರ ಹಿಂದಿರುವ ಕಷ್ಟ ಎಷ್ಟಿದೆ ಎಂಬುದು ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ನಟಿಸಿದ ಬಳಿಕ ತಿಳಿಯಿತು ಎಂದು ಅನುಪಮಾ ಹೇಳಿದ್ದಾರೆ.

ಬೋಲ್ಡ್ ಆಗಿ ನಟಿಸುವ ಬಗ್ಗೆ ಮಾತನಾಡಿದ ಅನುಪಮಾ ಸಿನೆಮಾ ನೋಡಿದ ಎಲ್ಲರೂ ಗ್ಲಾಮರ್‍ ರೋಲ್ಸ್ ಮಾಡುತ್ತಿದ್ದಾಳೆ ಎಂದು ಸಿಂಪಲ್ ಆಗಿ ಹೇಳಿಬಿಡುತ್ತಾರೆ. ಅಂತಹ ಪಾತ್ರಗಳಲ್ಲಿ ನಟಿಸಲು ಎಷ್ಟು ಕಷ್ಟ ಎಂಬುದು ಗೊತ್ತಿರಲ್ಲ.  ಕೆಲವೊಂದು ಕಾಸ್ಟ್ಯೂಮ್ಸ್ ಸ್ಕ್ರೀನ್ ಮೇಲೆ ನೋಡಲು ತುಂಬಾ ಕಲರ್‍ ಪುಲ್ ಆಗಿ ಕಾಣಿಸುತ್ತದೆ. ಆದರೆ ಆ ಕಾಸ್ಟ್ಯೂಮ್ಸ್ ಹಾಕಿಕೊಂಡು ಎಲ್ಲರ ಮುಂದೆ ಶೂಟಿಂಗ್ ಸೆಟ್ ನಲ್ಲಿ ಇರುವುದು ಎಷ್ಟು ಕಷ್ಟ ನಮಗೆ ಮಾತ್ರ ಗೊತ್ತು. ಕೆಲವೊಂದು ಕಾಸ್ಟ್ಯೂಮ್ಸ್ ಗಾಜುಗಳಿಂದ ವರ್ಕ್ ಮಾಡಲಾಗಿರುತ್ತದೆ. ಅದು ಎಲ್ಲಿ ಗೀಚಿಕೊಳ್ಳುತ್ತದೆ ಎಂಬುದು ನಮಗೆ ಮಾತ್ರ ಗೊತ್ತಾಗುತ್ತದೆ. ಇವೆಲ್ಲವನ್ನೂ ಅನುಭವಿಸಿದರೇ ಮಾತ್ರ ಸ್ಕ್ರೀನ್ ಮೇಲೆ ಗ್ಲಾಮರಸ್ ಆಗಿ ಕಾಣಿಸುತ್ತೇವೆ. ಅಷ್ಟೆಲ್ಲಾ ಕಷ್ಟಪಡುವಂತಹ ನಟಿಯರನ್ನು ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

ಅಷ್ಟೇಅಲ್ಲದೇ ಟಿಲ್ಲು ಸ್ಕ್ವೇರ್‍ ಸಿನೆಮಾದ ಮೂಲಕ ನಾನು ತುಂಬಾ ಕಲಿತಿದ್ದೇನೆ. ಈ ಸಿನೆಮಾ ಅಭಿಮಾನಿಗಳ ಜೊತೆಗೆ ಎಲ್ಲಾ ವರ್ಗಗಳ ಪ್ರೇಕ್ಷಕರಿಗೂ ತುಂಬಾ ಇಷ್ಟವಾಗುತ್ತದೆ. ಈ ಸಿನೆಮಾ ಮರೆಯಲಾಗದ ಮನರಂಜನಾತ್ಮಕ ಸಿನೆಮಾ ಆಗಿರಲಿದೆ ಎಂದಿದ್ದಾರೆ. ಇದೀಗ ಅನುಪಮಾ ಹಂಚಿಕೊಂಡ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top