News

ಸ್ಕೂಟರ್ ಮೇಲೆ ಟೈಟಾನಿಕ್ ಪೋಸ್ ಕೊಡಲು ಹೋಗಿ ಮುಗುಚಿ ಬಿದ್ದ ಯುವತಿ, ಆಕೆಗೆ ಬಿತ್ತು 33 ಸಾವಿರ ದಂಡ…..!

ಕಳೆದೆರಡು ದಿನಗಳ ಹಿಂದೆಯಷ್ಟೆ ದೇಶದಾದ್ಯಂತ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಹಾಗೂ ಸಂಭ್ರಮದಿಂದ ಆಚರಿಸಿದ್ದಾರೆ. ಕೆಲವರು ಸಂಭ್ರಮದ ನೆಪದಲ್ಲಿ ಅತಿರೇಖದ ವರ್ತನೆ ಸಹ ತೋರಿದ್ದಾರೆ. ಈ ಹಾದಿಯಲ್ಲೇ ಯುವತಿಯೊಬ್ಬಳು ಹೋಳಿಯಾಡುತ್ತಾ ಸ್ಕೂಟರ್‍ ಮೇಲೆ ಟೈಟಾನಿಕ್ ಪೋಸ್ ನೀಡಿ, ರಸ್ತೆಯಲ್ಲೇ ಮುಗುಚಿ ಬಿದ್ದಿದ್ದಾಳೆ. ಟ್ರಾಫಿಕ್ ನಿಯಮ ಸಹ ಉಲ್ಲಂಘನೆ ಮಾಡಿದ ಕಾರಣಕ್ಕೆ ಆಕೆಗೆ 33 ಸಾವಿರ ರೂಪಾಯಿ ದಂಡ ಸಹ ವಿಧಿಸಿದ್ದಾರೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಹೋಳಿ ಹಬ್ಬವನ್ನು ಅನೇಕರು ಸಂತಸ ಹಾಗೂ ಸಂಭ್ರಮದಿಂದ ಆಚರಿಸಿದ್ದಾರೆ. ಹೋಳಿ ಆಚರಣೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸ್ಕೂಟರ್‍ ಮೇಲೆ ಯುವಕ ಯುವತಿ ಹೋಳಿ ಆಚರಣೆ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಯುವಕನ ಮುಖಕ್ಕೆ ಬಣ್ಣ ಹಚ್ಚುತ್ತಾ ಸ್ಕೂಟಿಯ ಮೇಲೆ ತೆರೆಳಿದ ಯುವತಿ ಬಳಿಕ ಟೈಟಾನಿಕ್ ಸಿನೆಮಾದ ಪೋಸ್ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಈ ವಿಡಿಯೋಗೆ ಪರ ಹಾಗೂ ವಿರೋಧದ ಕಾಮೆಂಟ್ ಗಳು ಬಂದಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದು ಪೊಲೀಸರವರೆಗೂ ತಲುಪಿದೆ. ಸ್ಕೂಟರ್‍ ನಂಬರ್‍ ಪರಿಶೀಲನೆ ನಡೆಸಿ, ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ದುಬಾರಿ ದಂಡವನ್ನು ನೋಯ್ಡಾ ಪೊಲೀಸರು ವಿಧಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಯುವಕನೋರ್ವ ನೀಲಿ ಬಣ್ಣದ ಆಕ್ಟೀವಾ ಸ್ಕೂಟರ್‍ ರೈಡ್ ಮಾಡುತ್ತಿರುತ್ತಾನೆ. ಹಿಂಭಾಗದಲ್ಲಿ ಯುವತಿ ನಿಂತುಕೊಂಡು ಯುವಕನ ಮುಖಕ್ಕೆ ಬಣ್ಣ ಹಚ್ಚುತ್ತಾಳೆ. ಯುವಕ ನಿಧಾನವಾಗಿ ಸ್ಕೂಟರ್‍ ಚಲಾಯಿಸಿಕೊಂಡು ಮುಂದೆ ಹೋಗುತ್ತಿರುತ್ತಾರೆ. ಈ ಸಮಯದಲ್ಲಿ ಯುವತಿ ಟೈಟಾನಿಕ್ ಸಿನೆಮಾದಲ್ಲಿ ನೀಡಿದಂತೆ ಪೋಸ್ ನೀಡಿದ್ದಾಳೆ. ಕೆಲ ದೂರು ಅದೇ ರೀತಿ ಸಾಗಿದ್ದಾರೆ ಬಳಿಕ ಯುವಕ ಬ್ರೇಕ್ ಹಾಕಿದ ಕೂಡಲೇ ಆಕೆ ನೆಲಕ್ಕೆ ಬಿದ್ದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಪರಿಶೀಲನೆ ನಡೆಸಿದ ನೋಯ್ಡಾ ಪೊಲೀಸರು ಈ ಜೋಡಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

Most Popular

To Top