ಆಗಿದ್ದು ಮದುವೆಯಲ್ಲ, ಎಂಗೇಜ್ ಮೆಂಟ್ ಎಂದ ಸಿದ್ದಾರ್ಥ್-ಅದಿತಿ ಎಂಗೇಜ್ ಮೆಂಟ್ ರಿಂಗ್ ತೊರಿಸಿದ ಜೋಡಿ……!

Follow Us :

ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಸುದ್ದಿ ಕೇಳಿಬಂದರೇ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿರುತ್ತದೆ. ಅದು ನಿಜವೋ ಸುಳ್ಳೋ ಎಂಬುದು ಮತ್ತೆ ಎಂಬಂತೆ ಪ್ರತಿಯೊಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಿರುತ್ತಾರೆ. ಈ ಹಾದಿಯಲ್ಲೇ ಕಳೆದೆರಡು ದಿನಗಳ ಹಿಂದೆಯಷ್ಟೆ ಸೌತ್ ನಟ ಸಿದ್ದಾರ್ಥ್-ಅದಿತಿ ಮದುವೆಯಾದರು ಎಂಬ ಸುದ್ದಿ ಸೋಷಿಯಲ್  ಮಿಡಿಯಾ ಸೇರಿದಂತೆ ಸುದ್ದಿ ಮಾದ್ಯಮಗಳಲ್ಲೂ ಸಹ ಜೋರಾಗಿ ಹರಿದಾಡಿತ್ತು. ಇದೀಗ ಈ ಜೋಡಿ ಎಂಗೇಜ್ ಮೆಂಟ್ ರಿಂಗ್ ಗಳನ್ನು ತೋರಿಸಿ ಅದು ಮದುವೆಯಲ್ಲಿ ಎಂಗೇಜ್ ಮೆಂಟ್ ಎಂದು ಹೇಳಿದ್ದಾರೆ.

ಸುಮಾರು ವರ್ಷಗಳಿಂದ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ಸೀಕ್ರೆಟ್ ಆಗಿ ಲವ್ ಟ್ರಾಕ್ ನಡೆಸುತ್ತಿದ್ದರು ಎಂಬ ಸುದ್ದಿಗಳು ಕೇಳಿಬರುತ್ತಿದ್ದವು. ಅವರಿಬ್ಬರ ಅಫೈರ್‍ ಬಗ್ಗೆ ಸೋಷಿಯಲ್ ಮಿಡಿಯಾ ಹಾಗೂ ಸಿನಿವಲಯದಲ್ಲಿ ಸುದ್ದಿ ತುಂಬಾನೆ ಕೇಳಿಬಂದಿತ್ತು. ಜೊತೆಗೆ ಈ ಜೋಡಿ ಅನೇಕ ಕಾರ್ಯಕ್ರಮಗಳಲ್ಲಿ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಕಳೆದ ವರ್ಷ ತೆಲುಗು ನಟ ಶರ್ವಾನಂದ್ ಮದುವೆಯಲ್ಲೂ ಸಹ ಈ ಜೋಡಿ ಮಿಂಚಿದ್ದರು. ಆದರೆ ಈ ಜೋಡಿ ಮಾತ್ರ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ನಮ್ಮ ನಡುವೆ ಬೇರೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ಆದರೂ ಸಹ ಈ ಜೋಡಿಯ ಅಫೈರ್‍ ಬಗ್ಗೆ ಸುದ್ದಿ ಮಾತ್ರ ಹರಿದಾಡುತ್ತಲೇ ಇತ್ತು. ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಜೋಡಿ ಸಿಕ್ರೇಟ್ ಆಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು.

ನಟ ಸಿದ್ದಾರ್ಥ್‌ ಹಾಗೂ ನಟಿ ಅದಿತಿ ರಾವ್ ಹೈದರಿ ಸರಳವಾಗಿ ಯಾರಿಗೂ ತಿಳಿಯದಂತೆ ದೇವಾಲಯ ವೊಂದರಲ್ಲಿ ಮದುವೆಯಾಗಿದ್ದಾರೆ. ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರಿರಂಗಾಪುರಂನಲ್ಲಿರುವ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ತುಂಬಾ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಮತ್ತೊಂದು ಸುದ್ದಿಯನ್ನು ಸ್ವತಃ ಆ ಜೋಡಿಯೇ  ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತಾವಿಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ಪೊಟೋ ಹಂಚಿಕೊಂಡಿದ್ದಾರೆ. ಇಬ್ಬರ ಕೈಯಲ್ಲಿರುವ ಉಂಗುರಗಳನ್ನು ತೋರಿಸಿದ್ದಾರೆ. ಜೊತೆಗೆ ಅದಿತಿ ನನಗೆ ಒಕೆ ಹೇಳಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ. ಇದೀಗ ಮದುವೆ ಯಾವಾಗ ಎಂಬ ಸುದ್ದಿ ಇಂಟ್ರಸ್ಟಿಂಗ್ ಹಾಗೂ ಸಸ್ಪೆನ್ಸ್ ಆಗಿ ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಿದ್ದಾರ್ಥ್ ಹಾಗೂ ಅದಿತಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ ಅದೆಲ್ಲಾ ನಿಜವಲ್ಲ, ಸಿನೆಮಾವೊಂದಕ್ಕಾಗಿ ಶೂಟಿಂಗ್ ಮಾಡಲಾಗಿದೆ. ದೇವಾಲಯದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಮದುವೆಯಾಗುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತಂತೆ. ಆದರೆ ಈ ಜೋಡಿ ನಿಜವಾಗಿಯೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಅಸಲೀ ಸತ್ಯ ಏನು ಎಂಬುದು ಹೊರಬಂದಿದೆ.