News

ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ಸೋಷಿಯಲ್ ಮಿಡಿಯಾ ಸ್ಟಾರ್ ಬರೆಲಕ್ಕ, ವೈರಲ್ ಆದ ಪೊಟೋಸ್….!

ಸೋಷಿಯಲ್ ಮಿಡಿಯಾದಲ್ಲಿ ಕೆಲ ಸಾಮಾನ್ಯರೂ ಸಹ ಸ್ಟಾರ್‍ ಗಳಾಗಿಬಿಡುತ್ತಾರೆ. ಈ ಸಾಲಿಗೆ ಬರೆಲಕ್ಕ ಅಲಿಯಾಸ್ ಶಿರಿಷಾ ಸಹ ಸೇರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಸ್ಟಾರ್‍ ಆದ ಈಕೆ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಸ್ಪರ್ಧೆ ಮಾಡಿದ್ದರು. ಇದೀಗ ಆಕೆ ವೆಂಕಟೇಶ್ ಎಂಬ ಯುವಕನೊಂದಿಗೆ ಮದುವೆಯಾಗಿದ್ದಾರೆ. ಈ ಜೋಡಿಯವ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆದ ಶಿರಿಷಾ ಬರೆಲೆಕ್ಕಾ ಎಂದೇ ಫೇಮಸ್ ಆದರು. ಕೆಲವು ದಿನಗಳಿಂದ ಆಕೆಯ ಮದುವೆಯ ಬಗ್ಗೆ ಸುದ್ದಿ ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿತ್ತು. ಇದೀಗ ಆಕೆ ಈ ಸುದ್ದಿಯನ್ನು ನಿಜ ಮಾಡಿದ್ದಾರೆ. ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮಂಡಲದ ವ್ಯಾಪ್ತಿಯಲ್ಲಿ ಪಿ.ಎಂ.ಆರ್‍. ಗಾರ್ಡನ್ ನಲ್ಲಿ ಬರೆಲೆಕ್ಕಾ ಶಿರಿಷಾ ಮದುವೆ ಅದ್ದೂರಿಯಾಗಿ ನಡೆದಿದೆ. ತಮ್ಮ ಹತ್ತಿರದ ಸಂಬಂಧಿ ವೆಂಕಟೇಶ್ ಎಂಬಾತನೊಂದಿಗೆ ಆಕೆ ಸಪ್ತಪದಿ ತುಳಿದಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನೂ ಅದ್ದೂರಿಯಾಗಿ ಮದುವೆ ನಡೆದಿದೆ. ಸುಂದರವಾದ ಅಲಂಕರಣೆ, ಸಂಪ್ರದಾಯದಂತೆ ಬರೆಲೆಕ್ಕಾ ಮದುವೆ ನಡೆದಿದೆ. ಸ್ನೇಹಿತರು, ಕುಟುಂಬಸ್ಥರು, ಶ್ರೇಯೋಭಿಲಾಷಿಗಳು ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನೂತನ ವಧು ವರರನ್ನು ಆರ್ಶಿವಾದ ಮಾಡಿದ್ದಾರೆ. ನೂತನ ವಧು ವರರು ನೂರು ಕಾಲ ಸಂತೋಷದಿಂದ ಜೀವನ ಸಾಗಿಸಿ ಎಂದು ಸೋಷಿಯಲ್ ಮಿಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ಇನ್ನೂ ಡಿಗ್ರಿ ಪಾಸ್ ಆದರೂ ತೆಲಂಗಾಣದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದು ಅದಕ್ಕಾಗಿ ನಾನು ಹಸುಗಳನ್ನು ಸಾಕುತ್ತಾ ಜೀವನ ನಡೆಸುತ್ತಿದ್ದೇನೆ ಎಂದು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಮೂಲಕ ಆಕೆ ತುಂಬಾ ಫೇಮಸ್ ಆಗಿದ್ದರು. ಅಂದಿನಿಂದ ಆಕೆಯನ್ನು ಬರೆಲೆಕ್ಕಾ ಎಂದೇ ಕರೆದರು. ಕಳೆದ ವಿಧಾನಸಭಾ ಎಲೆಕ್ಷನ್ ನಲ್ಲೂ ಸಹ ಆಕೆ ಸ್ಪರ್ಧೆ ಮಾಡಿ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು.

Most Popular

To Top